ವಿಶ್ವಸಂಸ್ಥೆ: ದಕ್ಷಿಣ ಸುಡಾನ್‌ನ 70 ಲಕ್ಷದಷ್ಟು ಜನರು ಜುಲೈವರೆಗೂ ತೀವ್ರ ಆಹಾರ ಸಮಸ್ಯೆ ಅಥವಾ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಮಂಗಳವಾರ ಬಿಡುಗಡೆಯಾದ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (ಎಫ್‌ಎಒ) ವರದಿ ತಿಳಿಸಿದೆ.

ಯುದ್ಧಪೀಡಿತ ಸುಡಾನ್ ಪ್ರದೇಶದಿಂದ ದಕ್ಷಿಣ ಸುಡಾನ್‌ಗೆ ಹಿಂದಿರುಗಿರುವ ಜನರನ್ನೂ ಸೇರಿದಂತೆ ನೈಲ್ ನದಿಯ ಮೇಲ್ಭಾಗ, ಜೊಂಗ್ಲೈ ರಾಜ್ಯಗಳು ಇಥಿಯೋಪಿಯಾದ ಗಡಿಯ ಪೂರ್ವದಲ್ಲಿ ಪಿಬೋರ್ ಪ್ರದೇಶ ಮತ್ತು ದಕ್ಷಿಣ ಸುಡಾನ್‌ನಲ್ಲಿ ಒಟ್ಟು ಜನಸಂಖ್ಯೆಯ ಶೇ 65ರಿಂದ 75ರಷ್ಟು ಜನರು ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ.

ರೋಮ್ ಮೂಲದ ಸಂಸ್ಥೆಯು 79,000 ಜನರು ಆಹಾರದ ಅಭದ್ರತೆ ಮತ್ತು ತೀವ್ರ ಹಸಿವಿನ ಸ್ಥಿತಿ ಎದುರಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ಪೈಕಿ ಪಿಬೋರ್ ಪ್ರದೇಶದಲ್ಲಿ 11,000, ಬಹರ್ ಎಲ್ ಗಜಲ್ ರಾಜ್ಯದ ಅವೇಲ್ ಈಸ್ಟ್ ಕೌಂಟಿಯಲ್ಲಿ 40,000 ಮತ್ತು ಸುಡಾನ್‌ನಲ್ಲಿ ವರ್ಷವಿಡೀ ನಡೆದ ಸಂಘರ್ಷದಿಂದ ಪಲಾಯನ ಮಾಡಿ, ದೇಶದಾದ್ಯಂತ ನೆಲೆಸಿರುವ 28,000 ದಕ್ಷಿಣ ಸುಡಾನ್ ಜನರು ಸೇರಿದ್ದಾರೆ ಎಂದು ವರದಿ ತಿಳಿಸಿದೆ.

ಹಣದುಬ್ಬರ ಏರಿಕೆಯಿಂದ ಊಂಟಾಗಿರುವ ಆರ್ಥಿಕ ದುಃಸ್ಥಿತಿ, ಆಹಾರದ ಪೂರೈಕೆ ಕುಂಠಿತ, ವ್ಯಾಪಕ ಪ್ರವಾಹ ಮತ್ತು ಆಂತರಿಕ ಸಂಘರ್ಷಗಳಿಂದ ಆಹಾರದ ಕೊರತೆ ಉಂಟಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.