ಇಸ್ಲಾಮಾಬಾದ್: ಮಸೂದ್ ಅಜರ್ ನೇತೃತ್ವದ ಜೈಷ್ ಎ ಮೊಹಮ್ಮದ್(ಜೆಇಎಂ)ಉಗ್ರ ಸಂಘಟನೆಗೆ ನಿಧಿ ಸಂಗ್ರಹಿಸುತ್ತಿದ್ದ ಮೂವರಿಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಎಂ.ಇಫ್ತಿಕಾರ್, ಮಹಮ್ಮದ್ ಅಜ್ಮಲ್ ಹಾಗೂ ಬಿಲಾಲ್ ವಿರುದ್ಧ ಭಯೋತ್ಪಾದನಾ ನಿಗ್ರಹ ಇಲಾಖೆ(ಸಿಟಿಡಿ)ಪ್ರಕರಣ ದಾಖಲಿಸಿತ್ತು. ಮೂವರನ್ನುಪಂಜಾಬ್ ಪ್ರಾಂತದ ಗುಜ್ರನ್ವಾಲಾದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಇವರಿಗೆ ಕ್ರಮವಾಗಿ ₹45,000, ₹50,000 ಹಾಗೂ ₹40,000 ದಂಡ ವಿಧಿಸಲಾಗಿದೆ.

ಕಳೆದ ಬುಧವಾರ 6 ಜೆಇಎಂ ಸದಸ್ಯರನ್ನು ಹಾಗೂ ಮುಂಬೈ ದಾಳಿ ಹಿಂದಿನ ಸಂಚುಕೋರ ಹಫೀಜ್ ಸಯೀದ್ ನೇತೃತ್ವದ ಜಮಾತ್ ಉದ್ ದಾವಾ ಸಂಘಟನೆಗೆ ನಿಧಿ ಸಂಗ್ರಹಿಸುತ್ತಿದ್ದ ಮೂವರನ್ನುಪಂಜಾಬ್ ಪ್ರಾಂತ್ಯದಲ್ಲಿ ಸಿಟಿಡಿ ಗುರುವಾರ ಬಂಧಿಸಿತ್ತು.ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಕ್ರಮಕ್ಕೆ ಒತ್ತಡ ಹೆಚ್ಚುತ್ತಿರುವಾಗ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಪಾಕಿಸ್ತಾನ ಸರ್ಕಾರಮಸೂದ್ ಅಜರ್ ಮಗ, ಅಣ್ಣ ಸೇರಿ ನಿಷೇಧಿತ ಸಂಘಟನೆಗಳ ನೂರಕ್ಕೂ ಅಧಿಕ ಸದಸ್ಯರನ್ನು ಬಂಧಿಸಿ, ಸಂಘಟನೆಗಳ ಆಸ್ತಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.