ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರವು ಭಾರತದೊಂದಿನ ಅಂತರರಾಷ್ಟ್ರೀಯ ಗಡಿಯಲ್ಲಿ ‘ವಾಘಾ ಜಂಟಿ ಚೆಕ್ಪೋಸ್ಟ್ ವಿಸ್ತರಣೆ ಯೋಜನೆ’ಗೆ ಚಾಲನೆ ನೀಡಿದೆ. ಆಸನ ಸಾಮರ್ಥ್ಯವನ್ನು 8,000ದಿಂದ 24,000ಕ್ಕೆ ಹೆಚ್ಚಿಸಲು ಈ ಯೋಜನೆ ಜಾರಿ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಈ ಯೋಜನೆಗೆ 300 ಕೋಟಿ ಪಾಕಿಸ್ತಾನ ರೂಪಾಯಿ ವೆಚ್ಚವಾಗಲಿದ್ದು, 2025ರ ಡಿಸೆಂಬರ್ನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಭಾರತದ ಕಡೆ ಇರುವ ಆಸನ ಸಾಮರ್ಥ್ಯಕ್ಕೆ ತಕ್ಕಂತೆ ಮಾರ್ಪಾಡು ಮಾಡಲು ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎನ್ನಲಾಗಿದೆ.

ಯೋಜನೆಯಡಿ ಧ್ವಜಸ್ತಂಭದ ಎತ್ತರವನ್ನು 115 ಮೀಟರ್ನಿಂದ 135 ಮೀಟರ್ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.