ಲಂಡನ್: ಸೃಷ್ಟಿಯ ಮೂಲ ಧಾತು ಹಿಗ್ಸ್ ಬೋಸಾನ್(ದೇವ ಕಣ) ಅನ್ನು ಪತ್ತೆ ಮಾಡಿದ ನೋಬೆಲ್ ಪುರಸ್ಕೃತ ವಿಜ್ಞಾನಿ ಪೀಟರ್ ಹಿಗ್ಸ್ ಸ್ಕಾಟ್‌ಲ್ಯಾಂಡ್‌ನ ಎಡಿನ್‌ಬರ್ಗ್ ನಿವಾಸದಲಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.

ಅವರ ಸಾವಿಗೆ ರಕ್ತ ಸಂಬಂಧಿ ಸಮಸ್ಯೆ ಕಾರಣ ಎಂದು ಅವರ ಆಪ್ತ ಸ್ನೇಹಿತ, ಎಡಿನ್‌ಬರ್ಗ್ ವಿಶ್ವವಿದ್ಯಾಲಯದ ಭೌತ ವಿಜ್ಞಾನಿ ಅಲನ್ ವಾಕರ್ ಹೇಳಿದ್ದಾರೆ.

ಬಿಗ್ ಬ್ಯಾಂಗ್ ನಂತರ ಸೃಷ್ಟಿಯ ಮೂಲ ಎನ್ನಲಾದ ಹಿಗ್ಸ್ ಬಾಸನ್(ದೈವ ಕಣ) ಅಸ್ತಿತ್ವವನ್ನು ಅವರು ಪತ್ತೆ ಮಾಡಿದ್ದರು.

ಈ `ಹಿಗ್ಸ್ ಬೋಸಾನ್ ಕಣದ ಅಸ್ತಿತ್ವವನ್ನು ಬ್ರಿಟನ್ ವಿಜ್ಞಾನಿ ಪೀಟರ್ ಹಿಗ್ಸ್ ಸೇರಿದಂತೆ ಇತರ ಆರು ಭೌತವಿಜ್ಞಾನಿಗಳು 1964ರಲ್ಲಿ ಮೊದಲ ಬಾರಿ ಸೈದ್ಧಾಂತಿಕವಾಗಿ ನಿರೂಪಿಸಿದ್ದರು. ಕಣಭೌತಶಾಸ್ತ್ರದಲ್ಲಿ ಭಾರತೀಯ ವಿಜ್ಞಾನಿ ಸತ್ಯೇಂದ್ರನಾಥ್ ಬೋಸ್ ಹಾಗೂ ಐನ್‌ಸ್ಟೀನ್ ಅವರು ಹಿಂದೆ ಮಂಡಿಸಿದ್ದ ಸಿದ್ಧಾಂತ ಪೀಟರ್ ಹಿಗ್ಸ್ ಅವರಿಗೆ ಪ್ರೇರಣೆಯಾಗಿತ್ತು.

1980ರಲ್ಲಿ ಮೊದಲ ಬಾರಿ ಪ್ರಾಯೋಗಿಕವಾಗಿ ಈ ಕಣದ ಇರುವಿಕೆಯನ್ನು ಸಾಬೀತುಪಡಿಸುವ ಯತ್ನ ಷಿಕಾಗೊದಲ್ಲಿ ನಡೆದಿತ್ತು. 2008ರ ನಂತರ `ಸಿಇಆರ್‌ಎನ್~ ಪ್ರಯೋಗಾಲಯದಲ್ಲಿ ಈ ಪ್ರಯತ್ನ ಮುಂದುವರಿಯಿತು.

ಪರಸ್ಪರ ವಿರುದ್ಧ ದಿಕ್ಕಿನಿಂದ ಪ್ರೋಟಾನ್‌ಗಳ (ಪರಮಾಣುವಿನ ಉಪಕಣ) ಪುಂಜವನ್ನು ಬೆಳಕಿನ ವೇಗದಲ್ಲಿ ಬಲವಾಗಿ ಡಿಕ್ಕಿ ಹೊಡೆಯುವಂತೆ ಹಾಯಿಸಲಾಗುತ್ತದೆ. ಈ ಡಿಕ್ಕಿಯಿಂದ ಮಹಾಸ್ಫೋಟದ ನಂತರದ ಕೃತಕ ಸನ್ನಿವೇಶ ಸೃಷ್ಟಿಯಾಗಿದ್ದು, ಆಗ ಹುಟ್ಟಿದ ಉಪಕಣಗಳನ್ನು ಅಭ್ಯಸಿಸಿ ಹಿಗ್ಸ್ ಬೋಸಾನ್ ಇರುವಿಕೆಯನ್ನು ವಿಜ್ಞಾನಿಗಳು ದೃಢಪಡಿಸಿದ್ದಾರೆ.

1370 ಕೋಟಿಗೂ ಅಧಿಕ ವರ್ಷಗಳ ಹಿಂದೆ ಮಹಾಸ್ಫೋಟ (ಬಿಗ್ ಬ್ಯಾಂಗ್) ನಡೆದಾಗ ನಕ್ಷತ್ರ, ಗ್ರಹ ಹುಟ್ಟಿಗೆ ಪರಮಾಣುವಿನ ಉಪಕಣವಾದ ಈ `ಹಿಗ್ಸ್ ಬೋಸನ್ ಕಣಗಳು ಕಾರಣ ಎನ್ನಲಾಗಿದೆ. ವಿಶ್ವದ ಉಗಮಕ್ಕೆ ಕಾರಣವಾದ ಅಂಶವನ್ನು ಭೌತವಿಜ್ಞಾನಿಗಳು ಒಂದು ಸಾಮಾನ್ಯ ಮಾದರಿಯ (ಸಿದ್ಧಾಂತ) ಮೂಲಕ ವಿವರಿಸಿದ್ದಾರೆ. ಈ ಮಾದರಿಯ ಮೂಲಕ ಊಹಿಸಲಾದ 11 ಕಣಗಳು ಈಗಾಗಲೇ ಪತ್ತೆಯಾಗಿದ್ದವು. ಹಿಗ್ಸ್ ಬೋಸನ್ ಪತ್ತೆಯಾಗದಿದ್ದಲ್ಲಿ ಈ ಸಿದ್ಧಾಂತವೇ ಅಪ್ರಸ್ತುತ ಎನಿಸಿಕೊಳ್ಳುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.