ಮನಿಲಾ: ಪ್ರಭಲ ಭೂಕಂಪದಿಂದ ಸುನಾಮಿ ಭೀತಿ ಎದುರಿಸುತ್ತಿದ್ದ ಫಿಲಿಪಿನ್ಸ್, ಭಾನುವಾರ ಬೆಳಿಗ್ಗೆ ಭಯೋತ್ಪಾದಕರ ದಾಳಿಗೆ ನಲುಗಿದೆ. ದೇಶದ ದಕ್ಷಿಣ ಭಾಗದಲ್ಲಿರುವ ವಿಶ್ವವಿದ್ಯಾಲಯದ ಜಿಮ್ನಾಷಿಯಮ್‌ನಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಕ್ಯಾಥೊಲಿಕ್ ಕ್ರೈಸ್ತರ ಸಾಮೂಹಿಕ ಪ್ರಾರ್ಥನೆ ವೇಳೆ ಸಂಭವಿಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ ನಾಲ್ಕು ಜನ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.

ಮುಸ್ಲಿಂ ಭಯೋತ್ಪಾದಕರ ಕೃತ್ಯ ಎಂದು ಅಲ್ಲಿನ ಪೊಲೀಸರು ಹೇಳಿದ್ದು, ದೇಶದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಧ್ಯಕ್ಷ ಫರ್ಡಿನಂಡ್ ಮಾರ್ಕೊಸ್ ಜೂನಿಯರ್, ‘ವಿದೇಶಿ ಭಯೋತ್ಪಾದಕರ ಪ್ರಜ್ಞಾಶೂನ್ಯ ಹಾಗೂ ಅತ್ಯಂತ ಹ್ಯೇಯ ಕೃತ್ಯವನ್ನು ಬಲವಾಗಿ ಖಂಡಿಸುತ್ತೇನೆ. ಮುಗ್ದರ ಮೇಲೆ ಹಿಂಸಾಚಾರ ನಡೆಸಿರುವ ತೀವ್ರವಾದಿಗಳು ನಮ್ಮ ಸಮಾಜದ ಶತ್ರುಗಳೇ ಆಗಿದ್ದಾರೆ’ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
.Telangana Election: ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದರೆ ಸಿಎಂ ಆಯ್ಕೆ ಸವಾಲು.Madhya Pradesh Election Results Live | ಬಹುಮತದತ್ತ ಬಿಜೆಪಿ.Election Result 2023 Quick Guide: ಫಲಿತಾಂಶ ಪೂರ್ಣ ಚಿತ್ರಣ ಇಲ್ಲಿದೆ.Assembly Election Results 2023| ‘ಇಂಡಿಯಾ’ ಮೇಲೆ ಪರಿಣಾಮ ಬೀರಲಿರುವ ಫಲಿತಾಂಶ .
2017ರಲ್ಲಿ ಐದು ತಿಂಗಳ ಕಾಲ ಮುಸ್ಲಿಂ ಭಯೋತ್ಪಾದಕರ ಹಿಡಿತದಲ್ಲಿ ಸಿಲುಕಿದ್ದ ಮಾರವಾಯ್ ನಗರದಲ್ಲೇ ಭಾನುವಾರ ಬಾಂಬ್ ದಾಳಿ ನಡೆದಿದೆ. ಇದೇ ಪ್ರದೇಶದಲ್ಲಿ ದವ್ಲಾಹ್ ಇಸ್ಲಾಮಿಯಾ ಭಯೋತ್ಪಾದಕ ಗುಂಪಿಗೆ ಸೇರಿದ 11 ಜನರನ್ನು ಫಿಲಿಪಿನ್ಸ್ ಸೇನೆ ಶನಿವಾರ ಹತ್ಯೆಗೈದಿತ್ತು. ಜತೆಗೆ 10 ಅತ್ಯಾಧುನಿಕ ಬಂದೂಕು ಹಾಗೂ ಮೂರು ಸ್ಪೋಟಕಗಳನ್ನು ವಶಪಡಿಸಿಕೊಂಡಿದ್ದರು. ಅದೇ ಸ್ಥಳದಲ್ಲಿ ಭಾನುವಾರ ಬಾಂಬ್ ಸ್ಫೋಟಿಸಲಾಗಿದೆ.

ದೇಶದ ನಾಗರಿಕರ ಸುರಕ್ಷತೆ ಹಾಗೂ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಹಾಗೂ ಸೇನೆಗೆ ನಿರ್ದೇಶಿಸಲಾಗಿದೆ. ಇಂಥ ಕೃತ್ಯ ಎಸಗಿದವರನ್ನು ನ್ಯಾಯದ ಎದುರು ತರುತ್ತೇವೆ ಎಂದು ಮಾರ್ಕೊಸ್ ಜೂನಿಯರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.