ಮನಿಲಾ: ಫಿಲಿಪ್ಪೀನ್ಸ್ನ ಅಧ್ಯಕ್ಷರು, ಸರ್ಕಾರಿ ಸಂಸ್ಥೆ ಮತ್ತು ಸಾಗರ ಸುರಕ್ಷತೆಗೆ ಸಂಬಂಧಿಸಿದ ವೆಬ್ಸೈಟ್ ಹಾಗೂ ಇ–ಮೇಲ್ ವ್ಯವಸ್ಥೆಗಳ ಮೇಲೆ ಚೀನಾ ಮೂಲದ ಹ್ಯಾಕರ್ಗಳು ಸೈಬರ್ ದಾಳಿ ನಡೆಸಲು ಯತ್ನಿಸಿ ವಿಫಲರಾಗಿದ್ದಾರೆ’ ಎಂದು ಮಾಹಿತಿ ಮತ್ತು ಸಂವಹನ ಸಚಿವಾಲಯದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

‘ಮಾಹಿತಿ ಮತ್ತು ಸಂವಹನ ಸಚಿವಾಲಯದ ಇ–ಮೇಲ್, ರಾಷ್ಟ್ರೀಯ ಕರಾವಳಿ ಕಣ್ಗಾವಲಿನ ವೆಬ್ಸೈಟ್, ಫಿಲಿಪ್ಪೀನ್ಸ್ ಅಧ್ಯಕ್ಷ ಫೆರ್ಡಿನಂಡ್ ಮಾರ್ಕೋಸ್ ಜೆ.ಆರ್ ಅವರ ವೈಯಕ್ತಿಕ ವೆಬ್ಸೈಟ್ಗಳ ಮೇಲೆ ಈಚೆಗೆ ನಡೆದ ಸೈಬರ್ ದಾಳಿಯು ವಿಫಲವಾಗಿದೆ’ ಎಂದು ಸಚಿವಾಲಯದ ವಕ್ತಾರ ರೆನಾಟೊ ಪರೈಸೊ ಅವರು ಡಿ.ಡಬ್ಲ್ಯೂ.ಪಿ.ಎಂ ರೇಡಿಯೊಗೆ ತಿಳಿಸಿದ್ದಾರೆ.

‘ನಾವು ಯಾವುದೇ ದೇಶದ ಮೇಲೆ ಆರೋಪ ಹೊರಿಸುವುದಿಲ್ಲ. ಆದರೆ, ಇಂಟರ್ನೆಟ್ ಪ್ರೋಟೊಕಾಲ್ ಅಡ್ರೆಸ್ ಬಳಕೆಯಿಂದ ಚೀನಾದ ಹೆಸರನ್ನು ಉಲ್ಲೇಖಿಸಬಹುದು. ಹ್ಯಾಕರ್ಗಳು ಚೀನಾಕ್ಕೆ ಸೇರಿದ ಯುನಿಕಾಂ ಸೇವೆಗಳನ್ನು ಬಳಸಿರುವುದು ಬೆಳಕಿಗೆ ಬಂದಿದೆ’ ಎಂದು ತಿಳಿಸಿದ್ದಾರೆ.

‘ಈ ರೀತಿಯ ದಾಳಿಗಳನ್ನು ನಿಯಂತ್ರಿಸಲು ಸಹಕರಿಸುವಂತೆ ಚೀನಾ ಸರ್ಕಾರಕ್ಕೆ ಮನವಿ ಮಾಡಿದ್ದೇವೆ‘ ಎಂದರು.

ಯುನಿಕಾಂ ಮತ್ತು ಫಿಲಿಪ್ಪೀನ್ಸ್ನಲ್ಲಿರುವ ಚೀನಾದ ರಾಯಭಾರ ಕಚೇರಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.