ಸಮರ್ಕಂಡ್ (ಉಜ್ಬೇಕಿಸ್ತಾನ): ಉಜ್ಬೇಕಿಸ್ತಾನದ ಐತಿಹಾಸಿಕ ನಗರ ಸಮರ್ಕಂಡ್ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪಾಲ್ಗೊಂಡರು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ಇತರ ಸದಸ್ಯ ರಾಷ್ಟ್ರಗಳ ನಾಯಕರು ಶೃಂಗದಲ್ಲಿ ಭಾಗವಹಿಸಿದ್ದಾರೆ.

ಗಾಲ್ವಾನ್ ಕಣಿವೆಯಲ್ಲಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ಸೇನೆಗಳ ನಡುವೆ 2020ರ ಜೂನ್ನಲ್ಲಿ ನಡೆದ ಘರ್ಷಣೆಯ ನಂತರ ಷಿ ಮತ್ತು ಮೋದಿ ಇದೇ ಮೊದಲ ಬಾರಿಗೆ ಮುಖಾಮುಖಿಗೊಂಡಿದ್ದಾರೆ.

ಶೃಂಗಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಮಧ್ಯ ಏಷ್ಯಾದ ಹಲವು ರಾಷ್ಟ್ರಗಳ ನಾಯಕರು ಭಾಗವಹಿಸಿದ್ದಾರೆ.

ಶೃಂಗಸಭೆ ಆರಂಭಕ್ಕೂ ಮುನ್ನ ನಾಯಕರು ಫೋಟೊಗೆ ಫೋಜು ನೀಡಿದರು.

ಶೃಂಗಸಭೆಯ ಸ್ಥಳದಲ್ಲಿ ಮೋದಿಯವರನ್ನು ಉಜ್ಬೇಕಿಸ್ತಾನದ ಅಧ್ಯಕ್ಷ ಶವ್ಕತ್ ಮಿರ್ಜಿಯೋವ್ ಅವರು ಆತ್ಮೀಯವಾಗಿ ಸ್ವಾಗತಿಸಿದರು.

ಶೃಂಗಸಭೆಯ ನಂತರ, ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ಪುಟಿನ್, ಉಜ್ಬೆಕ್ ಅಧ್ಯಕ್ಷ ಮಿರ್ಜಿಯೋವ್ ಮತ್ತು ಇರಾನ್ ಅಧ್ಯಕ್ಷ ರೈಸಿ ಅವರೊಂದಿಗೆ ಪ್ರತ್ಯೇಕವಾಗಿ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.

ಸುಮಾರು 24 ಗಂಟೆಗಳ ಭೇಟಿಗಾಗಿ ಮೋದಿ ಗುರುವಾರ ರಾತ್ರಿ ಸಮರ್ಕಂಡ್ಗೆ ಆಗಮಿಸಿದ್ದಾರೆ.

ಸಮರ್ಕಂಡ್ಗೆ ಹೊರಡುವುದಕ್ಕೂ ಮೊದಲು ಮಾತನಾಡಿದ್ದ ನರೇಂದ್ರ ಮೋದಿ, ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ವಿಷಯ, ಸಂಘಟನೆಯ ಸುಧಾರಣೆ ಮತ್ತು ವಿಸ್ತರಣೆಯ ಕುರಿತು ಶೃಂಗಸಭೆಯಲ್ಲಿ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವುದಾಗಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.