ಮಿನ್ನೆಪೊಲಿಸ್, ಅಮೆರಿಕ: ‘ಕಪ್ಪುವರ್ಣೀಯ ಅಮೆರಿಕನ್ ಜಾರ್ಜ್ ಫ್ಲಾಯ್ಡ್ ಕುತ್ತಿಗೆ ಮೇಲೆ ಮೊಣಕಾಲಿಟ್ಟು ಒತ್ತುವ ಮೂಲಕ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಇಲಾಖೆಯ ತತ್ವ–ಮೌಲ್ಯಗಳನ್ನು ಉಲ್ಲಂಘನೆ ಮಾಡಿದರು’ ಎಂದು ಮಿನ್ನೆಪೊಲಿಸ್ ಪೊಲೀಸ್ ಮುಖ್ಯಸ್ಥ ಮೆಡಾರಿಯಾ ಅರಾಡೊಂಡೊ ಹೇಳಿದ್ದಾರೆ.

‘ಫ್ಲಾಯ್ಡ್‌ಗೆ ಅದಾಗಲೇ ಕೈಕೋಳ ತೊಡಿಸಲಾಗಿತ್ತು. ತೀವ್ರವಾಗಿ ಬಳಲಿದ್ದ ಫ್ಲಾಯ್ಡ್ ಪ್ರತಿರೋಧ ಒಡ್ಡುವುದನ್ನು ಸಹ ನಿಲ್ಲಿಸಿದ್ದರು. ಅಂಥ ಸ್ಥಿತಿಯಲ್ಲಿ ಆತನ ಕುತ್ತಿಗೆ ಮೇಲೆ ಮೊಣಕಾಲೂರಿದ್ದು ಇಲಾಖೆಯ ನೀತಿಯೂ ಅಲ್ಲ, ಅಂಥ ತರಬೇತಿಯನ್ನೂ ಇಲಾಖೆ ನೀಡುವುದಿಲ್ಲ’ ಎಂದುಮೆಡಾರಿಯಾ ಹೇಳಿದ್ದಾರೆ.

ಫ್ಲಾಯ್ಡ್ ಹತ್ಯೆಯ ವಿಚಾರಣೆ ವೇಳೆ ಮೆಡಾರಿಯಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದ ಪೊಲೀಸ್ ಮುಖ್ಯಸ್ಥರಾಗಿರುವ ಮೊದಲ ಕಪ್ಪುವರ್ಣೀಯ ಅಧಿಕಾರಿ ಎಂಬ ಹೆಗ್ಗಳಿಕೆ ಮೆಡಾರಿಯಾ ಅವರದು. ಫ್ಲಾಯ್ಡ್ ಹತ್ಯೆಯಾದ ಮಾರನೇ ದಿನವೇ ಅವರು ಚೌವಿನ್ ಹಾಗೂ ಇತರ ಮೂವರು ಅಧಿಕಾರಿಗಳನ್ನು ವಜಾಗೊಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.