ಕೊಲಂಬಸ್ (ಅಮೆರಿಕ): ಓಹಿಯೋದ ಕೊಲಂಬಸ್ನಲ್ಲಿ ಕಪ್ಪು ಜನಾಂಗದ ವ್ಯಕ್ತಿಯೊಬ್ಬರನ್ನು ಪೊಲೀಸ್ ಅಧಿಕಾರಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಇದು ಈ ತಿಂಗಳಲ್ಲಿ ಅಮೆರಿಕದಲ್ಲಿ ನಡೆದ ಎರಡನೇ ಹತ್ಯೆ ಪ್ರಕರಣವಾಗಿದೆ. ಪೊಲೀಸ್ ದೌರ್ಜನ್ಯದ ವಿರುದ್ಧ ಗುರುವಾರದಿಂದ ಪ್ರತಿಭಟನೆ ಆರಂಭವಾಗಿದೆ.

ಸೋಮವಾರ ರಾತ್ರಿ ಮನೆಯ ಗ್ಯಾರೇಜ್ನಲ್ಲಿದ್ದ 47ರ ಹರೆಯದ ಆಂಡ್ರೆ ಮಾರಿಸ್ ಹಿಲ್ ಪೊಲೀಸ್ ಅಧಿಕಾರಿಯ ಗುಂಡೇಟಿಗೆ ಬಲಿಯಾದರು.

ಹಿಲ್ ತನ್ನ ಎಡಗೈಯಲ್ಲಿ ಪ್ರಕಾಶಮಾನವಾದ ಸೆಲ್ ಫೋನ್ ಹಿಡಿದು ಪೊಲೀಸರ ಬಳಿಗೆ ನಡೆದುಕೊಂಡು ಹೋಗುವ ದೃಶ್ಯವನ್ನು ಬಿಡುಗಡೆ ಮಾಡಲಾಗಿದೆ. ಆದರೆ ಕೊಲೆ ಹಿಂದಿನ ನಿಖರ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ:Covid-19 World Update: ಅಮೆರಿಕದಲ್ಲಿ 3.34 ಲಕ್ಷಕ್ಕೂ ಅಧಿಕ ಸೋಂಕಿತರ ಸಾವು

ಆಂಡ್ರೆ ಮಾರಿಸ್ ಹಿಲ್ ಗುಂಡೇಟಿಗೆ ಬಲಿಯಾಗಿರುವ ಹಿನ್ನಲೆಯಲ್ಲಿ ಕಪ್ಪು ಜನಾಂಗದಿಂದ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ. ಘಟನೆ ಸಂಬಂಧ ತನಿಖೆಯನ್ನು ನಡೆಸುತ್ತಿದ್ದು, ಪೊಲೀಸ್ ಅಧಿಕಾರಿಯನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

ಅಮೆರಿಕದಲ್ಲಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವಿಗೆ ಕಾರಣವಾದ ಬಿಳಿಯ ಪೊಲೀಸರ ವಿರುದ್ಧ ಭಾರಿ ಪ್ರತಿಭಟನೆ ವ್ಯಕ್ತವಾಗಿತ್ತು. ಈಗ ಪೊಲೀಸ್ ದೌರ್ಜನ್ಯದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.