ಹೆಲ್ಸಿಂಕಿ: ಫಿನ್ಲ್ಯಾಂಡ್ ಪ್ರಧಾನಿ ಸನ್ನಾ ಮರೀನ್ ಅವರು ತೆರಿಗೆದಾರರ ಹಣವನ್ನು ಬಳಸಿಕೊಂಡು ಅಕ್ರಮವಾಗಿ ಸಬ್ಸಿಡಿ ಯೋಜನೆ ಅಡಿಯಲ್ಲಿ ತಮ್ಮ ಕುಟುಂಬದವರ ಉಪಹಾರದ ಬಿಲ್ ಅನ್ನು ಮಂಜೂರು ಮಾಡಿಕೊಂಡಿಸಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಫಿನ್ಲ್ಯಾಂಡ್ನ ಪೊಲೀಸರು ತಿಳಿಸಿದ್ದಾರೆ.

ಸನ್ನಾ ಮರೀನ್ ಅವರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದು, ತಮ್ಮ ಅಧಿಕೃತ ನಿವಾಸವಾದ ಕೇಸರಾಂತದಲ್ಲಿ ವಾಸವಾಗಿದ್ದಾಗ ತಮ್ಮ ಕುಟುಂಬದವರ ಬ್ರೇಕ್ಫಾಸ್ಟ್ಗಾಗಿ ತಿಂಗಳಿಗೆ ₹26,432ಗಳನ್ನು ಪಡೆದಿದ್ದಾರೆ ಎಂದು ಇಲ್ತಾಲೆಹ್ತಿ ಪತ್ರಿಕೆ ವರದಿ ಮಾಡಿದೆ.

ಈ ಸಂಬಂಧ ವಿರೋಧ ಪಕ್ಷಗಳು ಪ್ರಧಾನಿ ವಿರುದ್ಧ ಕಿಡಿಕಾರಿವೆ.

ಆದರೆ ಈ ಆರೋಪವನ್ನು ಪ್ರಧಾನಿ ಸನ್ನಾ ಮರೀನ್ ಅವರೇ ನಿರಾಕರಿಸಿದ್ದಾರೆ. ಪ್ರಧಾನ ಮಂತ್ರಿಯಾಗಿ ಈ ಪ್ರಯೋಜನವನ್ನು ನಾನು ಕೇಳಿಲ್ಲ. ಜೊತೆಗೆ ಈ ನಿರ್ಧಾರದ ಹಿಂದೆ ತಾನಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ತಮ್ಮ ಕುಟುಂಬದ ಬೆಳಗಿನ ಉಪಹಾರಕ್ಕೆ ಪ್ರತಿ ತಿಂಗಳು ₹ 26,479 ವಸೂಲಿ ಮಾಡಿದ್ದಾರೆ. ಈ ರೀತಿ ಪ್ರಧಾನಿ ಅಥವಾ ಜನಪ್ರತಿನಿಧಿಗಳ ಕುಟುಂಬಕ್ಕೆ ಉಪಹಾರ ನೀಡಲು ತೆರಿದಾರರ ಹಣ ಬಳಸಲು ಫಿನ್ಲ್ಯಾಂಡ್ನಲ್ಲಿ ಅವಕಾಶವಿಲ್ಲ. ಇದು ಫಿನ್ನಿಷ್ ಶಾಸನವನ್ನು ಉಲ್ಲಂಘಿಸಬಹುದು ಎಂದು ಕಾನೂನು ತಜ್ಞರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹೀಗಾಗಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು ಎನ್ನುವ ಮನವಿಗಳು ಕೇಳಿಬಂದ ಬಳಿಕ ಶುಕ್ರವಾರ ಪೊಲೀಸರು ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.