ವ್ಯಾಟಿಕನ್ ಸಿಟಿ: ಬಾಡಿಗೆ ಪಾಲಕತ್ವ (surrogate parenting) ವನ್ನು ಶೋಚನೀಯ, ತಾಯಿ ಹಾಗೂ ಮಗುವಿನ ಘನತೆಯ ಉಲ್ಲಂಘನೆ ಎಂದು ಕರೆದಿರುವ ಪೋಪ್ ಫ್ರಾನ್ಸಿಸ್, ಜಾಗತಿಕ ಮಟ್ಟದಲ್ಲಿ ಈ ಪದ್ಧತಿ ಮೇಲೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿದ್ದಾರೆ.

‘ಬಾಡಿಗೆ ತಾಯ್ತನ ಪದ್ಧತಿ ಎಂಬುದು ತಾಯಿಯ ಅಗತ್ಯಗಳನ್ನು ಗ್ರಹಿಸದೇ ಅವರ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುವುದಾಗಿದೆ. ಹೀಗಾಗಿ ಇಂಥ ಕೆಟ್ಟ ಪದ್ಧತಿಯೊಂದಕ್ಕೆ ಜಾಗತಿಕ ಮಟ್ಟದಲ್ಲಿ ನಿಷೇಧ ಹೇರಲು ಎಲ್ಲರೂ ಪ್ರಯತ್ನಿಸುವ ಭರವಸೆ ಇದೆ’ ಎಂದು ಪೋಪ್ ಹೇಳಿದ್ದಾರೆ.

87 ವರ್ಷದ ಪೋಪ್ ಫ್ರಾನ್ಸಿಸ್ ಅವರು ಜಾಗತಿಕ ಮಟ್ಟದ ಗಣ್ಯರ ಸಭೆ ನಡೆಸಿ ಮಾಡಿದ 45 ನಿಮಿಷಗಳ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ.

‘ಬಾಡಿಗೆ ಪಾಲಕತ್ವದ ಮೂಲಕ ಜನಿಸಿದ ಮಕ್ಕಳ ಅಂಕಿಸಂಖ್ಯೆಯ ಕೆಲ ಮಾಹಿತಿ ಲಭ್ಯ. ನೈತಿಕ ಕಾಳಜಿಯ ದೃಷ್ಟಿಕೋನದಲ್ಲಿ ನೋಡಿದಾಗ, ಅಮೆರಿಕದ ಬಹಳಷ್ಟು ರಾಜ್ಯಗಳನ್ನೂ ಒಳಗೊಂಡು, ಹಲವು ರಾಷ್ಟ್ರಗಳಲ್ಲಿ ಇದು ಕಾನೂನು ಬಾಹಿರ’ ಎಂದಿದ್ದಾರೆ.

‘ಬಡತನದಲ್ಲಿರುವ ಮಹಿಳೆಯರಿಗೆ ಹಣದ ಆಮಿಷವೊಡ್ಡಿ ಬಾಡಿಗೆ ತಾಯತ್ನಕ್ಕೆ ಪ್ರೇರೇಪಿಸುವುದು ಮಹಿಳೆ ಮೇಲಿನ ದೌರ್ಜನ್ಯಕ್ಕೆ ಸಮಾನ. ಬಾಡಿಗೆ ತಾಯಂದಿರು ಸಿಗುವುದು ಖಾತ್ರಿಯಾದರೆ, ಗರ್ಭ ಧರಿಸುವುದನ್ನು ಮುಂದೂಡುವ ಪ್ರವೃತ್ತಿಯೂ ಮಹಿಳೆಯರಲ್ಲಿ ಹೆಚ್ಚಾಗಲಿದೆ. ಗರ್ಭ ಧರಿಸಲು ಸಾಧ್ಯವಿಲ್ಲದ ಸಲಿಂಗ ದಂಪತಿಗಳು ಕುಟುಂಬ ಹೊಂದಲು ಇಚ್ಛಿಸಿದಲ್ಲಿ ಅಂಥವರಿಂದಲೂ ಇಂಥ ಕೆಟ್ಟ ಪದ್ಧತಿ ಬಳಕೆಯಾಗುವ ಸಾಧ್ಯತೆ ಇದೆ’ ಎಂದು ಪೋಪ್ ಗುಡುಗಿದ್ದಾರೆ.

‘ವ್ಯಾಟಿಕನ್ ನಗರದ ಸುತ್ತ ಇರುವ ಇಟಲಿಯಲ್ಲಿ ಬಾಡಿಗೆ ತಾಯ್ತನಕ್ಕೆ ನಿಷೇಧ ಹೇರಲಾಗಿದೆ. ಬಲಪಂಥೀಯ ವಿಚಾರಧಾರೆಯ ಸಮ್ಮಿಶ್ರ ಸರ್ಕಾರದ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರು ಸಂಸತ್ತಿನಲ್ಲಿ ಬಾಡಿಗೆ ತಾಯ್ತನ ವಿರೋಧಿಸುವ ಮತ್ತು ಬೇರೆ ದೇಶಗಳಿಗೆ ಹೋಗಿ ಇಂಥ ಪದ್ಧತಿಯಲ್ಲಿ ಮಕ್ಕಳನ್ನು ಪಡೆಯುವ ಪಾಲಕರಿಗೆ ಶಿಕ್ಷೆ ವಿಧಿಸುವ ಕ್ರಮವನ್ನು ಜಾರಿಗೆ ತರಲಿದ್ದಾರೆ’ ಎಂದೂ ಹೇಳಿದ್ದಾರೆ.

1.35 ಶತಕೋಟಿ ಕ್ಯಾಥೊಲಿಕ್ ಸಮುದಾಯದ ಧಾರ್ಮಿಕ ಮುಖ್ಯಸ್ಥ ಪೋಪ್ ಫ್ರಾನ್ಸಿಸ್ ಅವರು ಲಿಂಗ ಸಿದ್ಧಾಂತವನ್ನು ವ್ಯಾಟಿಕನ್ ನಗರ ವಿರೋಧಿಸುತ್ತಿರುವುದನ್ನು ಪುನರುಚ್ಚರಿಸಿದ್ದಾರೆ. ಗಂಡು ಮತ್ತು ಹೆಣ್ಣಿನ ಲಿಂಗ ಪ್ರತ್ಯೇಕವೇ ಆದರೂ, ಅದರ ಅರ್ಥ ಮತ್ತು ಆಳ ಸಂಕೀರ್ಣವಾದದ್ದು. ಬಾಹ್ಯವಾಗಿ ಗೋಚರಿಸುವ ಲೈಂಗಿಕ ಗುಣಲಕ್ಷಣಗಳಿಗಿಂತ ಇದು ಭಿನ್ನವಾಗಿರುತ್ತವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.