ವಾಷಿಂಗ್ಟನ್: ‘ಹತ್ಯೆಯಾದ ತನ್ನ ತಂದೆ ಜಗತ್ತಿನ ದೃಷ್ಟಿಕೋನ ಬದಲಾಯಿಸಿದರು ಎಂದು ಜಾರ್ಜ್ ಫ್ಲಾಯ್ಡ್ ಪುತ್ರಿ, ಆರು ವರ್ಷದ ಗಿಯಾನಾ ಫ್ಲಾಯ್ಡ್ ಕಳೆದ ವರ್ಷ ಹೇಳಿದ್ದಳು. ಇಂದು ಆಕೆಯೊಂದಿಗೆ ಮಾತನಾಡಿದೆ. ನಿನ್ನ ಮಾತು ನಿಜ. ನಿನ್ನ ತಂದೆ ಜಗತ್ತಿನ ದೃಷ್ಟಿಕೋನ ಬದಲಾಯಿಸಿದರು ಎಂಬುದಾಗಿ ಹೇಳಿದೆ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಕಪ್ಪುವರ್ಣೀಯ ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಹತ್ಯೆ ನಂತರ, ಅವರ ಮಗಳೊಂದಿಗೆ ಕಳೆದ ವರ್ಷ ನಡೆಸಿದ್ದ ಮಾತುಕತೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮೆಲುಕು ಹಾಕಿದ್ದಾರೆ.

‘ಫ್ಲಾಯ್ಡ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾಗ ಗಿಯಾನಾಗೆ ಸಾಂತ್ವನ ಹೇಳಿದೆ. ಮೇಲಿರುವ ನಿನ್ನ ತಂದೆ ನಿನ್ನನ್ನು ಬಹಳ ಹಮ್ಮೆಯಿಂದ ನೋಡುತ್ತಿದ್ದಾರೆ ಎಂದು ಸಮಾಧಾನ ಹೇಳಿದ್ದೆ’ ಎಂದು ಬೈಡನ್ ನೆನಪಿಸಿಕೊಂಡಿದ್ದಾರೆ.

‘ಫ್ಲಾಯ್ಡ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ತೀರ್ಪು ಪ್ರಕಟವಾದ ಬಳಿಕ ಇಂದು ಆಕೆ ಜೊತೆ ಮಾತನಾಡಿದೆ. ‘ನಿಜವಾಗಿಯೂ ನಿನ್ನ ತಂದೆ ಜಗದ ದೃಷ್ಟಿಕೋನ ಬದಲಾಯಿಸಿದ್ದಾರೆ. ಈ ಬದಲಾವಣೆ ಪ್ರೀತಿ, ನ್ಯಾಯ ತುಂಬಿದ ಹಾಗೂ ಹಿಂಸೆ ಇರದ ಪರಂಪರೆಯಾಗಲಿ ಎಂಬುದಾಗಿ ಗಿಯಾನಾಗೆ ಹೇಳಿದೆ’ ಎಂದು ಬೈಡನ್ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.