ಟೆಹರಾನ್: ಇರಾನ್ನ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸುಧಾರಣಾವಾದಿ ಡಾ.ಮಸೂದ್ ಪೆಜೆಶ್ಕಿಯಾನ್ ಅವರನ್ನು ದೇಶದ ನೂತನ ಅಧ್ಯಕ್ಷ ಎಂದು ಇರಾನ್ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಮೇನಿ ಅವರು ಭಾನುವಾರ ಅಧಿಕೃತವಾಗಿ ಘೋಷಿಸಿದರು.

ಮಂಗಳವಾರ ಪೆಜೆಶ್ಕಿಯಾನ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಘೋಷಣೆ ಬಳಿಕ ಮಾತನಾಡಿದ ಸರ್ವೋಚ್ಛ ನಾಯಕ ಖಮೇನಿ, ‘ನಮ್ಮ ನೆರೆಯ ಆಫ್ರಿಕಾ ಖಂಡದ ದೇಶಗಳು ಹಾಗೂ ಏಷ್ಯಾದ ದೇಶಗಳಿಗೆ ಆದ್ಯತೆ ನೀಡಿ. ನಮಗೆ ಬೆಂಬಲ ಹಾಗೂ ಸಹಕಾರಿ ನೀಡಿದವರನ್ನೂ ಮರೆಯಬೇಡಿ’ ಎಂದು ಸಲಹೆ ನೀಡಿದರು.

‘ಜಿಯೊನಿಸ್ಟ್ಗಳ ಆಡಳಿತವು ಅತೀ ಕ್ರೂರವಾದ ಯುದ್ಧಾಪರಾಧದಲ್ಲಿ ತೊಡಗಿದೆ. ಕ್ರೂರತ್ವ ಹಾಗೂ ಹತ್ಯೆ ನಡೆಸುವುದರಲ್ಲಿ ಇಸ್ರೇಲ್ ಹೊಸ ದಾಖಲೆ ಬರೆಯುತ್ತಿದೆ’ ಎಂದರು.

‘ರಚನಾತ್ಮಕವಾದ ಹಾಗೂ ಶಕ್ತಿಯುತವಾದ ವಿದೇಶಾಂಗ ನೀತಿಯನ್ನು ಅಳವಡಿಸಿಕೊಳ್ಳಲಾಗುವುದು. ಎಲ್ಲ ನಾಗರಿಕರಿಗೆ ಸಮಾನವಾಗಿ ಕಾನೂನು ಅನ್ವಯಿಸುವಂತೆ ಮಾಡಲಾಗುವುದು, ಪರಿಸರವನ್ನು ರಕ್ಷಿಸುವ ನೀತಿಗಳನ್ನು ರೂಪಿಸಲಾಗುವುದು’ ಎಂದು ಅಧ್ಯಕ್ಷ ಪೆಜೆಶ್ಕಿಯಾನ್ ಭರವಸೆ ನೀಡಿದರು.

ಉಪಾಧ್ಯಕ್ಷನನ್ನಾಗಿ 72 ವರ್ಷದ ಮೊಹಮ್ಮದ್ ರೆಜಾ ಆರಿಫ್ ಅವರನ್ನು ಪೆಜೆಶ್ಕಿಯಾನ್ ನೇಮಿಸಿದರು. ಆರಿಫ್ ಅವರು ಸ್ಟ್ಯಾಂಡ್ಫರ್ಡ್ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ನಲ್ಲಿ ಪಿಎಚ್.ಡಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.