ಕಠ್ಮಂಡು: ನೇಪಾಳದಲ್ಲಿ ಭೂಕುಸಿತದಿಂದಾಗಿ ಬಸ್ಗಳು ನದಿಯಲ್ಲಿ ಕೊಚ್ಚಿಹೋಗಿದ್ದ ಘಟನೆಯಲ್ಲಿ 40 ವರ್ಷದ ಭಾರತೀಯರೊಬ್ಬರ ಶವ ಪತ್ತೆಯಾಗಿದೆ. ನಾಪತ್ತೆಯಾಗಿರುವರಿಗೆ ಶೋಧ ಮುಂದುವರಿದಿದೆ.

ಏಳು ಭಾರತೀಯರು ಸೇರಿ 54 ಪ್ರಯಾಣಿಕರಿದ್ದ ಎರಡು ಬಸ್ಗಳು ಬಳಿಕ ತ್ರಿಶೂಲಿ ನದಿಯಲ್ಲಿ ಕೊಚ್ಚಿಹೋಗಿದ್ದವು. ಪ್ರಯಾಣಿಕರಲ್ಲಿ ಮೂವರು ಈಜಿ ಸುರಕ್ಷಿತವಾಗಿ ದಡ ಸೇರಿಕೊಂಡಿದ್ದರು.

ದುರಂತ ಸ್ಥಳದಿಂದ 50 ಕಿ.ಮೀ ದೂರದಲ್ಲಿ ಶವ ಪತ್ತೆಯಾಗಿದೆ. ಗುರುತಿನ ಪತ್ರ ಆಧರಿಸಿ ಮೃತನನ್ನು ಭಾರತೀಯ ಪ್ರಜೆ ರಿಶಿ ಪಾಲ್ ಶಾಹಿ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಆರು ಭಾರತೀಯರು ನಾಪತ್ತೆಯಾದ್ದಾರೆ. ಅವರಿಗಾಗಿ ಶೋಧ ಮುಂದುವರಿದಿದ್ದು ನುರಿತ ಈಜುಗಾರರ ನೆರವು ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.