ವಾಷಿಂಗ್ಟನ್: ಬೆಳಕಿನ ಹಬ್ಬ ದೀಪಾವಳಿಯ ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವಕ್ಕೆ ಮಾನ್ಯತೆ ನೀಡುವಂತೆ ಕೋರುವ ನಿರ್ಣಯವೊಂದನ್ನು ಭಾರತೀಯ ಅಮೆರಿಕನ್ ಸಂಸದ ರಾಜಾ ಕೃಷ್ಣಮೂರ್ತಿ ಅವರು ಸಂಸತ್‌ನಲ್ಲಿ ಮಂಡಿಸಿದ್ದಾರೆ.

ಈ ನಿರ್ಣಯವನ್ನು ಮಂಡನೆ ಮಾಡಿದ ವೇಳೆ ಮಾತನಾಡಿದ ಅವರು, ‘ಅಮೆರಿಕ ಹಾಗೂ ಇತರ ರಾಷ್ಟ್ರಗಳಲ್ಲಿ ನೆಲೆಸಿರುವ ಸಿಖ್, ಜೈನ ಹಾಗೂ ಹಿಂದೂಗಳಿಗೆ ದೀಪಾವಳಿ ಹಬ್ಬ ಮಹತ್ವದ್ದು. ಇದು ಕೃತಜ್ಞತೆ ಸಲ್ಲಿಸುವ ಹಬ್ಬ. ಕತ್ತಲೆ ವಿರುದ್ಧ ಬೆಳಕಿನ ಹಾಗೂ ಕೆಟ್ಟತನದ ವಿರುದ್ಧ ಒಳ್ಳೆಯದರ ಜಯವನ್ನು ಸಾರುವ ಹಬ್ಬ’ ಎಂದು ಹೇಳಿದರು.

‘ದೀಪಾವಳಿಯ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವಕ್ಕೆ ಮಾನ್ಯತೆ ನೀಡಿದರೆ, ಅದು ಅಮೆರಿಕ ಹಾಗೂ ವಿಶ್ವದ ಇತರ ದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ಗೌರವ ಸಲ್ಲಿಸಿದಂತಾಗಲಿದೆ’ ಎಂದು ಪ್ರತಿಪಾದಿಸಿದರು.

‘ಕೋವಿಡ್ ಪಿಡುಗಿನ ಈ ಸಂದರ್ಭದಲ್ಲಿ ಮತ್ತೊಂದು ದೀಪಾವಳಿ ಆಚರಿಸುತ್ತಿದ್ದೇವೆ. ಜಗತ್ತಿನಲ್ಲಿ ಆವರಿಸಿರುವ ಕತ್ತಲೆಯನ್ನು ಹೋಗಲಾಡಿಸುವ ಬೆಳಕು ಎಲ್ಲರ ಬಾಳನ್ನು ಬೆಳಗಲಿ. ಎಲ್ಲರೂ ಸುರಕ್ಷಿತ ಹಾಗೂ ಸಂತಸದಿಂದ ದೀಪಾವಳಿ ಆಚರಿಸಬೇಕು ಎಂದು ಕೋರುತ್ತೇನೆ. ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿ, ಆರೋಗ್ಯ ಹಾಗೂ ಶಾಂತಿಗಾಗಿ ಪ್ರಾರ್ಥಿಸಬೇಕು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.