ಡೆಟ್ರಾಯಿಟ್: ಅಮೆರಿಕ ಅಧ್ಯಕ್ಷರ ಆಯ್ಕೆಗಾಗಿ ನ.5ರಂದು ಮತದಾನ ನಡೆಯಲಿದ್ದು, ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳ ಅಭ್ಯರ್ಥಿಗಳಿಬ್ಬರು ಕೊನೆ ಹಂತದ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ.

ಮತದಾನ ಪ್ರಕ್ರಿಯೆ ಆರಂಭವಾಗುವುದಕ್ಕೂ 50 ಗಂಟೆಗಳ ಮೊದಲು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದ ಕಾರಣ, ಉಭಯ ನಾಯಕರು ಮತದಾರರ ಓಲೈಕೆಗಾಗಿ ಕೊನೆ ಕ್ಷಣದ ಕಸರತ್ತಿಗೆ ಮೊರೆ ಹೋಗಿದ್ದರು. ಪರಸ್ಪರರ ವಿರುದ್ಧ ಟೀಕಾಪ್ರಹಾರವನ್ನೂ ಹರಿತಗೊಳಿಸಿದ್ದರು.

ವಿಸ್ಕನ್ಸಿನ್ನಲ್ಲಿ ನಡೆದ ಭಾರಿ ಪ್ರಚಾರಸಭೆಯಲ್ಲಿ ಮಾತನಾಡಿದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್, ‘ಈ ಬಾರಿ ನಮ್ಮದೇ ಗೆಲುವು’ ಎಂದಾಗ ಬೆಂಬಲಿಗರಿಂದ ಭಾರಿ ಕರತಾಡನ ಕೇಳಿಬಂತು.

ಕಮಲಾ ಹ್ಯಾರಿಸ್ ಅವರು ಶನಿವಾರ ವಿಸ್ಕನ್ಸಿನ್, ನಾರ್ತ್ ಕೆರೋಲಿನಾ ಹಾಗೂ ‘ರಸ್ಟ್ ಬೆಲ್ಟ್’ನಲ್ಲಿ ಪ್ರಚಾರ ನಡೆಸಿ, ಮತದಾರರ ಮನ ಗೆಲ್ಲಲು ಕಸರತ್ತು ನಡೆಸಿದರು. ಮಿಚಿಗನ್, ಜಾರ್ಜಿಯಾ ಹಾಗೂ ಪೆನ್ವಿಲ್ವೇನಿಯಾದಲ್ಲಿ ಮತ ಯಾಚಿಸಿದರು.

ಡೆಟ್ರಾಯಿಟ್ ನಂತರ, ಮಿಚಿಗನ್ ಸ್ಟೇಟ್ ಯುನಿವರ್ಸಿಟಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮತಯಾಚನೆ ಮಾಡಿದರು.

ಅಮೆರಿಕದ ಈಶಾನ್ಯ ಮತ್ತು ಪಶ್ಚಿಮದ ಕೇಂದ್ರ ಭಾಗದ ರಾಜ್ಯಗಳನ್ನು ಒಳಗೊಂಡ ಪ್ರದೇಶವನ್ನು ‘ರಸ್ಟ್ ಬೆಲ್ಟ್’ ಎಂದು ಕರೆಯಲಾಗುತ್ತದೆ. ಈ ಮೊದಲು ಈ ಭಾಗದಲ್ಲಿ ಉಕ್ಕು ಕಾರ್ಖಾನೆಗಳು ಸೇರಿದಂತೆ ಭಾರಿ ಪ್ರಮಾಣದ ಕೈಗಾರಿಕೆಗಳಿದ್ದವು. ಈಗ, ಈ ಪ್ರದೇಶದಲ್ಲಿ ಕೈಗಾರಿಕೆಗಳ ಸಂಖ್ಯೆ ಕಡಿಮೆಯಾಗಿವೆಯಲ್ಲದೇ, ಜನಸಂಖ್ಯೆಯೂ ಕ್ಷೀಣಿಸಿದೆ.

ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯೂ ಆಗಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವರ್ಜಿನಿಯಾದಲ್ಲಿ ಶನಿವಾರ ಪ್ರಚಾರ ನಡೆಸಿದ್ದು, ಮುಂದಿನ ದಿನಗಳಲ್ಲಿ ಪೆನ್ಸಿಲ್ವೇನಿಯಾ, ನಾರ್ತ್ ಕೆರೋಲಿನಾ ಹಾಗೂ ಜಾರ್ಜಿಯಾ ರಾಜ್ಯಗಳಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲಿದ್ದಾರೆ.

78 ವರ್ಷದ ಡೊನಾಲ್ಡ್ ಟ್ರಂಪ್ ಸಹ ಮತದಾರರ ಓಲೈಕೆಗೆ ಬಿರುಸಿನ ಪ್ರಚಾರ ನಡೆಸಿದರು. ಸ್ಪೇನ್ ಮೂಲದ ಜನರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಟ್ರಂಪ್ ಅವರು ಭಾನುವಾರ ಪ್ರಚಾರ ಕೈಗೊಳ್ಳದಿದ್ದುದು ಗಮನಾರ್ಹ. ಅವರು ಉತ್ತರದ ರಾಜ್ಯಗಳಲ್ಲಿ (ಗೇಟ್ ಲೇಕ್ಸ್ ಸ್ಟೇಟ್ಸ್) ಕೂಡ ಪ್ರಚಾರ ಕೈಗೊಳ್ಳಲಿಲ್ಲ.

ಕಮಲಾ ಹ್ಯಾರಿಸ್ ಅವರು ಕುರಿತು ಈ ಬಾರಿ ಅರಬ್–ಅಮೆರಿಕನ್ ಮತದಾರರು ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಗಾಜಾದಲ್ಲಿ ಇಸ್ರೇಲ್ ಹಾಗೂ ಹಮಾಸ್ ಮಧ್ಯೆ ನಡೆಯುತ್ತಿರುವ ಯುದ್ಧವನ್ನು ಅಮೆರಿಕ ನಿರ್ವಹಣೆ ಮಾಡಿದ ವೈಖರಿ ಬಗ್ಗೆ ಈ ಜನರು ಅಸಮಾಧಾನ ಹೊಂದಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಆನ್ಲೈನ್ ವೇದಿಕೆಗಳಲ್ಲಿಯೂ ಪ್ರಚಾರ: ಟ್ರಂಪ್ ಹಾಗೂ ಕಮಲಾ ಹ್ಯಾರಿಸ್ ಅವರು ಟಿ.ವಿ ಹಾಗೂ ಇತರ ಆನ್ಲೈನ್ ಮಾಧ್ಯಮಗಳ ಮೂಲಕವೂ ವ್ಯಾಪಕ ಪ್ರಚಾರ ಕೈಗೊಂಡು, ಮತಯಾಚನೆ ನಡೆಸಿದ್ಧಾರೆ. ಮತ ಯಾಚನೆಗೆ ಸಂಬಂಧಿಸಿ, ರೇಡಿಯೊಗಳಲ್ಲಿ ಕೂಡ ಹೆಚ್ಚು ಜಾಹೀರಾತುಗಳು ಬಿತ್ತರವಾಗಿವೆ.

ಆರಂಭಿಕ ಮತದಾನ: 7.5 ಕೋಟಿ ಜನರಿಂದ ಹಕ್ಕುಚಲಾವಣೆ

ಅಮೆರಿಕ ಅಧ್ಯಕ್ಷರ ಆಯ್ಕೆಗೆ ಇದೇ 5ರಂದು ಚುನಾವಣೆ ನಡೆಯಲಿದ್ದು ಇದಕ್ಕೂ ಮೊದಲು ನಡೆದ ಆರಂಭಿಕ ಮತದಾನ ಪ್ರಕ್ರಿಯೆಯಲ್ಲಿ ಕೆಲವರು ಮತಗಟ್ಟೆಗಳಿಗೆ ಖುದ್ದಾಗಿ ಬಂದು ಮತ ಚಲಾಯಿಸಿದರೆ ಮತ್ತೂ ಕೆಲವರು ಅಂಚೆ ಮತದಾನದಲ್ಲಿ ಪಾಲ್ಗೊಂಡರು. ಈ ವೇಳೆ 7.5 ಕೋಟಿಗೂ ಅಧಿಕ ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವನಾ ಮಂಡಳಿ ಮೂಲಗಳು ಹೇಳಿವೆ. ಆರಂಭಿಕ ಮತದಾನಕ್ಕಾಗಿ ಕಲ್ಪಿಸಿದ್ದ ಅವಕಾಶವನ್ನು ದೇಶದಾದ್ಯಂತ ಹೆಚ್ಚು ಜನರು ಬಳಕೆ ಮಾಡಿಕೊಂಡಿದ್ದಾರೆ. ಕೆಲವು ಖುದ್ದಾಗಿ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದ್ದರೆ ಇನ್ನೂ ಕೆಲವರು ಅಂಚೆ ಮೂಲಕ ಮತ ಹಾಕಿದ್ದಾರೆ ಎಂಧು ಮಂಡಳಿಯ ಕಾರ್ಯಕಾರಿ ನಿರ್ದೇಶಕ ಮೈಕಲ್ ರ್ಯಾನ್ ಹೇಳಿದ್ದಾರೆ. ಆರಂಭಿಕ ಮತದಾನಕ್ಕಾಗಿ ನ್ಯೂಯಾರ್ಕ್ನ ಹಲವೆಡೆ ಮತಗಟ್ಡೆಗಳನ್ನು ಸ್ಥಾಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.