ದುಬೈ: ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ಕ್ರಮವು ಗಲ್ಫ್ ದೇಶಗಳಲ್ಲಿರುವ ಭಾರತೀಯರಿಗೆ ತಲೆನೋವು ತಂದಿದೆ.

ಭಾರತ ಸರ್ಕಾರದ ಈ ನೀತಿಯ ಬಗ್ಗೆ ಇಲ್ಲಿನ ಬ್ಯಾಂಕ್ಗಳಿಗೆ ಯಾವುದೇ ಮಾಹಿತಿ ಇಲ್ಲದಿರುವುದೇ ಇದಕ್ಕೆ ಮೂಲ ಕಾರಣವಾಗಿದೆ. ಹಾಗಾಗಿ, ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ತೊಂದರೆ ಅನುಭವಿಸುವಂತಾಗಿದೆ ಎಂದು ಯುಎಇನಲ್ಲಿ ಇರುವ ಹಲವು ಭಾರತೀಯರು ಅಳಲು ತೋಡಿಕೊಂಡಿದ್ದಾರೆ.

ಮೇ 19ರಂದು ಭಾರತೀಯ ರಿಸರ್ವ್ ಬ್ಯಾಂಕ್ ₹ 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವುದಾಗಿ ತಿಳಿಸಿದೆ. ಈ ನೋಟುಗಳನ್ನು ಸೆಪ್ಟೆಂಬರ್ 30ರೊಳಗೆ ಬ್ಯಾಂಕ್ಗಳಿಗೆ ಜಮೆ ಅಥವಾ ವಿನಿಮಯ ಮಾಡಿಕೊಳ್ಳಬೇಕು. ಜೊತೆಗೆ, ಈ ನೋಟುಗಳನ್ನು ಗ್ರಾಹಕರಿಗೆ ನೀಡಬಾರದು ಎಂದು ಬ್ಯಾಂಕ್ಗಳಿಗೂ ಸೂಚಿಸಿದೆ.

ತನ್ನ ಇಬ್ಬರು ಮಕ್ಕಳೊಂದಿಗೆ, ಇಲ್ಲಿರುವ ಪತಿಯೊಂದಿಗೆ ಇರಲು ಎರಡು ದಿನಗಳ ಹಿಂದೆ ಇಲ್ಲಿಗೆ ಫಿರೋಜಾ ಶೇಖ್ (ಹೆಸರು ಬದಲಾಯಿಸಲಾಗಿದೆ) ಬಂದಿದ್ದಾರೆ. ಆರ್ಬಿಐ ಆದೇಶ ತಿಳಿದ ಅವರು, ನೋಟುಗಳನ್ನು ಬದಲಾಯಿಸಿಕೊಳ್ಳಲು ವಿನಮಯ ಕೇಂದ್ರಕ್ಕೆ ತೆರಳಿದಾಗ ಅಲ್ಲಿನ ಸಿಬ್ಬಂದಿ ಹೇಳಿದ ಮಾತು ಅವರಿಗೆ ಅಚ್ಚರಿ ಮೂಡಿಸಿದೆ.

ಭಾರತದ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡದಂತೆ ಆಡಳಿತ ಮಂಡಳಿಯು ಅವರಿಗೆ ಸೂಚಿಸಿದೆ. ಹಾಗಾಗಿ, ವಿನಮಯ ಸಾಧ್ಯವಿಲ್ಲವೆಂದು ಸಿಬ್ಬಂದಿ ಹೇಳುತ್ತಿರುವುದಾಗಿ ಶೇಖ್ ಹೇಳಿದರು.

ಈ ನಡುವೆ ‘ಸೌದಿ ಅರೇಬಿಯಾದ ನೋಟು ವಿನಿಮಯ ಕೇಂದ್ರದಲ್ಲಿ ಭಾರತದ ಎರಡು ಸಾವಿರ ಮುಖಬೆಲೆಯ ನೋಟು ಸ್ವೀಕರಿಸುವುದನ್ನು ಸ್ಥಗಿತಗೊಳಿಸಲಾಗಿದೆ’ ಎಂಬ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ನಾವು ಈಗ ರಜಾ ಅವಧಿಯ ಮಧ್ಯದಲ್ಲಿದ್ದೇವೆ. ಇಲ್ಲಿಗೆ ಭೇಟಿ ನೀಡಿರುವ ಹಲವರ ಬಳಿ ಎರಡು ಸಾವಿರ ರೂಪಾಯಿಯ ನೋಟಿನ ಕಂತೆಗಳಿದ್ದರೂ ಉಪಯೋಗಕ್ಕೆ ಬಾರದಂತಾಗಿದೆ’ ಎಂದು ಎನ್ಆರ್ಐ ಉದ್ಯಮಿ ಚಂದ್ರಶೇಖರ್ ಭಾಟಿಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.