ಲಿಮಾ: ಪೆರುವಿನಲ್ಲಿ ಬಸ್ ಕಂದಕಕ್ಕೆ ಉರುಳಿದ ಪರಿಣಾಮ 32 ಪ್ರಯಾಣಿಕರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಧಾನಿ ಲಿಮಾದಿಂದ 60 ಕಿ.ಮೀ. ಪೂರ್ವಕ್ಕೆ ಕ್ಯಾರೆಟೆರಾ ಸೆಂಟ್ರೆಲ್ ರಸ್ತೆಯ ಕಿರಿದಾದ ಪ್ರದೇಶದಲ್ಲಿ ದುರ್ಘಟನೆನಡೆದಿದೆ.

ಒಟ್ಟು 63 ಪ್ರಯಾಣಿಕರು ಬಸ್‌ನಲ್ಲಿದ್ದರು. ಮೃತಪಟ್ಟವರಲ್ಲಿ ಆರು ವರ್ಷದ ಬಾಲಕ ಮತ್ತು ಮೂರು ವರ್ಷದ ಬಾಲಕಿ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಜಿಹಾದಿ ಭಯೋತ್ಪಾದನೆ: ಜೆಎನ್ಯುನಲ್ಲಿ ಉಗ್ರ ನಿಗ್ರಹ ಕೋರ್ಸ್ ಆರಂಭ ಸಾಧ್ಯತೆ

ಚಾಲಕ ಅಮಿತ ವೇಗದಲ್ಲಿ ಬಸ್ ಚಲಾಯಿಸಿರುವುದುಅವಘಡಕ್ಕೆ ಕಾರಣವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಡೆಕಲ್ಲಿಗೆ ಢಿಕ್ಕಿ ಹೊಡೆದ ಬಸ್ 650 ಅಡಿ ಆಳದ ಕಂದಕಕ್ಕೆ ಉರುಳಿದೆ ಎಂದು ಬದುಕುಳಿದವರುತಿಳಿಸಿದ್ದಾರೆ.

ಭಾನುವಾರ ಪೆರುವಿನಲ್ಲಿ ಅಮೆಜಾನ್ ನದಿಯಲ್ಲಿ ಎರಡು ದೋಣಿಗಳು ಡಿಕ್ಕಿ ಹೊಡೆದು 22 ಮಂದಿ ಮೃತಪಟ್ಟಿದ್ದರು. ಎರಡು ದಿನಗಳ ಹಿಂದೆ ಪೆರುವಿನ ಆಗ್ನೇಯ ಪ್ರದೇಶದಲ್ಲಿ ಬಸ್ ಪ್ರಪಾತಕ್ಕೆ ಉರುಳಿ 17 ಮಂದಿ ಸಾವಿಗೀಡಾಗಿದ್ದರು.

ಅಮಿತ ವೇಗ, ಕಳಪೆ ಹೆದ್ದಾರಿ ನಿರ್ವಹಣೆ, ರಸ್ತೆ ಚಿಹ್ನೆಗಳ ಅಭಾವದಿಂದಾಗಿ ಪೆರುವಿನಲ್ಲಿ ಪದೇ ಪದೇ ರಸ್ತೆ ಅಪಘಾತಗಳು ಸಂಭವಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.