ಬೀಜಿಂಗ್: ಶಾಂಘೈನ ಯಾಂಗ್ಪು ಜಿಲ್ಲೆಯಲ್ಲಿ ಶುಕ್ರವಾರ ಸಾಮೂಹಿಕ ಕೋವಿಡ್ ಪರೀಕ್ಷೆಗೆ ಆದೇಶಿಸಿದ್ದು, ಪರೀಕ್ಷೆಯ ಫಲಿತಾಂಶ ಬರುವವರೆಗೆ ಜಿಲ್ಲೆಯ 13 ಲಕ್ಷ ನಿವಾಸಿಗಳು ಮನೆಯಿಂದ ಹೊರಹೋಗದಂತೆ ನಿರ್ಬಂಧ ವಿಧಿಸಲಾಗಿದೆ.

ಶಾಂಘೈನ ಪೂರ್ವದಿಂದ ಟಿಬೆಟ್ವರೆಗೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದ್ದು, ಲಾಕ್ಡೌನ್ ಅನ್ನು ವಿರೋಧಿಸಿ ಕೆಲವೆಡೆ ಪ್ರತಿಭಟನೆಗಳು ನಡೆದ ವರದಿಯಾಗಿದೆ.

ಚೀನಾದಲ್ಲಿ ಶುಕ್ರವಾರ 1,337 ಕೋವಿಡ್ನ ಹೊಸ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ ಬಹುತೇಕವು ಲಕ್ಷಣರಹಿತವಾಗಿವೆ. ಯಾವುದೇ ಸಾವುಗಳೂ ವರದಿಯಾಗಿಲ್ಲ. ಶಾಂಘೈನಲ್ಲಿ 11 ಲಕ್ಷಣರಹಿತ ಪ್ರಕರಣಗಳು ವರದಿಯಾಗಿವೆ. ಟೆಬೆಟ್ನಲ್ಲಿ 6 ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ ಐದು ಪ್ರಕರಣಗಳು ಲಕ್ಷಣರಹಿತವಾಗಿವೆ.

2019ರ ಕೊನೆಯಲ್ಲಿ ವುಹಾನ್ ನಗರದಲ್ಲಿ ಮೊದಲ ಬಾರಿಗೆ ಕೋವಿಡ್ ಪ್ರಕರಣ ಪತ್ತೆಯಾದಾಗಿನಿಂದ ಇದುವರೆಗೆ ಒಟ್ಟು 2,58,660 ಪ್ರಕರಣಗಳು ವರದಿಯಾಗಿದ್ದು, 5,226 ಮಂದಿ ಸಾವಿಗೀಡಾಗಿದ್ದಾರೆ ಎಂದು ಚೀನಾ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.