ಸಿಂಗಪುರ: ಸಿಂಗಪುರದಲ್ಲಿ ಈಗ ಕೋವಿಡ್–19ರ ಹೊಸ ಅಲೆ ಕಾಣಿಸಿದ್ದು, ಮೇ 5ರಿಂದ 11ರವರೆಗೆ 25,900ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಜನರು ಮತ್ತೆ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಸಚಿವ ಓಂಗ್ ಯೆ ಕುಂಗ್ ಶನಿವಾರ ಸಲಹೆ ನೀಡಿದರು.

‘ನಾವು ಕೋವಿಡ್ ಹೊಸ ಅಲೆಯ ಆರಂಭಿಕ ಭಾಗದಲ್ಲಿದ್ದೇವೆ. ಈ ಅಲೆಯು ಒಂದೇ ಸಮನಾಗಿ ಏರಿಕೆಯಾಗುತ್ತಿದೆ. ಮುಂದಿನ ಎರಡರಿಂದ ನಾಲ್ಕು ವಾರಗಳಲ್ಲಿ ಅಂದರೆ ಜೂನ್ ಮಧ್ಯ ಅಥವಾ ಕೊನೆಯ ವೇಳೆಗೆ ಅಲೆಯು ವ್ಯಾಪಕವಾಗಲಿದೆ’ ಎಂದು ಸಚಿವರು ನೀಡಿರುವ ಎಚ್ಚರಿಕೆ ಉಲ್ಲೇಖಿಸಿ ‘ದಿ ಸ್ಟ್ರೈಟ್ಸ್ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.

ತೀವ್ರ ನಿಗಾಘಟಕಕ್ಕೆ (ಐಸಿಯು) ದಿನಂಪ್ರತಿ ಮೂರು ಪ್ರಕರಣಗಳು ದಾಖಲಾಗುತ್ತಿದ್ದು, ಇದರ ಹಿಂದಿನ ವಾರದಲ್ಲಿ ದಿನಕ್ಕೆ ಸರಾಸರಿ ಇಬ್ಬರು ಕೋವಿಡ್ ಬಾಧಿತರು ಐಸಿಯುಗೆ ದಾಖಲಾಗುತ್ತಿದ್ದರು ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಜಾಗತಿಕವಾಗಿ, ಪ್ರಧಾನವಾಗಿ ಕೋವಿಡ್ 19 ರೂಪಾಂತರಿ ಜೆಎನ್.1 ಮತ್ತು ಅದರ ಉಪ ತಳಿಗಳಾದ ಕೆಪಿ.1 ಮತ್ತು ಕೆಪಿ.2 ಕಾಣಿಸಿಕೊಳ್ಳುತ್ತಿವೆ. ಸಿಂಗಪುರದಲ್ಲಿ ವರದಿಯಾಗುತ್ತಿರುವ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಮೂರನೇ ಎರಡರಷ್ಟು ಪ್ರಕರಣಗಳು ಕೆಪಿ.1 ಮತ್ತು ಕೆಪಿ.2 ಉಪ ತಳಿಯ ಪ್ರಕರಣಗಳಾಗಿವೆ. ಇವು ಹೆಚ್ಚು ರೂಪಾಂತರಗೊಂಡು ಹರಡುವ ಅಥವಾ ಹೆಚ್ಚು ತೀವ್ರವಾದ ರೋಗವನ್ನು ಉಂಟುಮಾಡುವ ಯಾವುದೇ ಸೂಚನೆಗಳಿಲ್ಲ ಎಂದೂ ಅದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.