ಕ್ವಾಲಾಲಂಪುರ: ಮಲೇಷ್ಯಾದ ಸೆಂಟ್ರಲ್ ಸೆಲಂಗೊರ್ ಸ್ಟೇಟ್‌ನಲ್ಲಿರುವ ಹೆದ್ದಾರಿಯ ಮೇಲೆ ವಿಮಾನವೊಂದು ಗುರುವಾರ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಂಟು ಮಂದಿ ಸೇರಿ ಹತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಆರು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಇದ್ದ ಖಾಸಗಿ ವಿಮಾನ ಪತನಗೊಂಡಿದೆ. ಹೆದ್ದಾರಿಯ ಮೇಲೆ ವಿಮಾನದ ಅವಶೇಷಗಳು ಬಿದ್ದ ಪರಿಣಾಮ ಕಾರು ಮತ್ತು ಬೈಕ್ ಚಾಲಕರಿಬ್ಬರು ಮೃತಪಟ್ಟಿದ್ದಾರೆ ಎಂದು ಸೆಲಂಗೊರ್ ಪೊಲೀಸ್ ಮುಖ್ಯಸ್ಥ ಹುಸ್ಸೇನ್ ಒಮರ್ ಖಾನ್ ತಿಳಿಸಿದರು.

ಲ್ಯಾಂಡ್ ಆಗುವ ಕೆಲವೇ ನಿಮಿಷಗಳ ಮುನ್ನ ವಿಮಾನವು ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ. ವಿಮಾನವು ಬೆಂಕಿಗೆ ಆಹುತಿಯಾಗಿರುವ ದೃಶ್ಯದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.