ಕೊಲಂಬೊ: ಸರ್ಕಾರಿ ನೌಕರರಿಗೆ ಸಂಬಳ ಪಾವತಿಸಲು ನೋಟು ಮುದ್ರಿಸಲು ಅನುಮತಿ ನೀಡಬೇಕಾದ ಪರಿಸ್ಥಿತಿ ಇದೆ ಎಂದು ಶ್ರೀಲಂಕಾದ ನೂತನ ಪ್ರಧಾನ ಮಂತ್ರಿ ರಾನಿಲ್ ವಿಕ್ರಮಸಿಂಘೆ ಅವರು ಹೇಳಿದ್ದಾರೆ.

ಸದ್ಯದ ಆರ್ಥಿಕ ಪರಿಸ್ಥಿತಿಯ ಕುರಿತು ದೇಶವನ್ನು ಉದ್ದೇಶಿಸಿ ಸೋಮವಾರ ಅವರು ಮಾತನಾಡಿದರು.

‘ನನಗೆ ಸತ್ಯವನ್ನು ಮರೆಮಾಚುವ ಮತ್ತು ಸಾರ್ವಜನಿಕರಿಗೆ ಸುಳ್ಳು ಹೇಳುವ ಬಯಕೆಯಿಲ್ಲ. ಈ ಸಂಗತಿಗಳು ಅಹಿತಕರ, ಭಯಾನಕವಾಗಿದ್ದರೂ ಅದನ್ನು ಹೇಳಲೇಬೇಕಾಗಿದೆ’ ಎಂದಿದ್ದಾರೆ.

ಪ್ರಸ್ತುತ ಭಾರೀ ನಷ್ಟದಲ್ಲಿರುವ ‘ಶ್ರೀಲಂಕನ್ ಏರ್‌ಲೈನ್ಸ್’ ಅನ್ನು ಖಾಸಗೀಕರಣಗೊಳಿಸಲು ಚಿಂತಿಸಿರುವುದಾಗಿಯೂ ಪ್ರಧಾನಿ ವಿಕ್ರಮಸಿಂಘೆ ಹೇಳಿದರು.
ಕಳೆದ ವರ್ಷ ಶ್ರೀಲಂಕಾ ಏರ್‌ಲೈನ್ಸ್ ₹960 ಕೋಟಿಯಷ್ಟು ನಷ್ಟ ಅನುಭವಿಸಿದೆ.

‘ನಾವು ಶ್ರೀಲಂಕನ್ ಏರ್‌ಲೈನ್ಸ್ ಅನ್ನು ಖಾಸಗೀಕರಣಗೊಳಿಸಿದರೂ, ನಮ್ಮ ಕಷ್ಟ ಬಗೆಹರಿಯುವುದಿಲ್ಲ. ವಿಮಾನದೊಳಗೆ ಎಂದಿಗೂ ಕಾಲೇ ಇಡದ ಮುಗ್ಧ ಜನರು ಈ ನಷ್ಟ ಭರಿಸಬೇಕಾಗಿ ಬಂದಿದೆ’ ಎಂದು ಪ್ರಧಾನಿ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.