ಕೊಲಂಬೊ: ಶ್ರೀಲಂಕಾದಲ್ಲಿ 2019ರಲ್ಲಿ ನಡೆದಿದ್ದ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರನ್ನು ‘ಶಂಕಿತ’ ಎಂದು ಶ್ರೀಲಂಕಾದ ನ್ಯಾಯಾಲಯವು ಶುಕ್ರವಾರ ಉಲ್ಲೇಖಿಸಿದೆ.

ಚರ್ಚ್ನಲ್ಲಿ ನಡೆದಿದ್ದ ಈ ಭೀಕರ ಸ್ಫೋಟದಲ್ಲಿ 11 ಭಾರತೀಯರು ಸೇರಿದಂತೆ ಒಟ್ಟು 270 ಜನರು ಮೃತಪಟ್ಟಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿರುವ ಕೊಲಂಬೊ ಫೋರ್ಟ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ದಾಳಿಯ ಬಗೆಗಿನ ಗುಪ್ತಚರ ವರದಿಗಳನ್ನು ಸಿರಿಸೇನಾ ನಿರ್ಲಕ್ಷಿಸಿದ್ದಾರೆ ಎಂದು ಹೇಳಿದೆ.

ಸಿರಿಸೇನಾ ಅಕ್ಟೋಬರ್ 14 ರಂದು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದೂ ಸೂಚಿಸಲಾಗಿದೆ.

ಕ್ಯಾಥೋಲಿಕ್ ಚರ್ಚ್ ಮತ್ತು ಮೃತರ ಸಂಬಂಧಿಕರ ಒತ್ತಡದ ಹಿನ್ನೆಲೆಯಲ್ಲಿ ರಚಿಸಲಾದ ತನಿಖಾ ಸಮಿತಿ ಕೂಡ ಈ ಹಿಂದೆ ಸಿರಿಸೇನಾ ಅವರನ್ನು ಪ್ರಕರಣದ ಹೊಣೆಗಾರರನ್ನಾಗಿ ಮಾಡಿತ್ತು. ಈ ಆರೋಪವನ್ನು ಅವರು ನಿರಾಕರಿಸಿದ್ದರು.

ಐಸಿಸ್ ಸಂಬಂಧ ಹೊಂದಿರುವ ಸ್ಥಳೀಯ ಇಸ್ಲಾಮಿಕ್ ಉಗ್ರಗಾಮಿ ಗುಂಪು ‘ನ್ಯಾಷನಲ್ ತೌಹೀದ್ ಜಮಾತ್ (ಎನ್ಟಿಜೆ)’ಗೆ ಸೇರಿದ ಒಂಬತ್ತು ಆತ್ಮಾಹುತಿ ಬಾಂಬರ್ಗಳು 2019ರ ಏಪ್ರಿಲ್ 21ರಂದು, ಶ್ರೀಲಂಕಾದ ಮೂರು ಚರ್ಚ್ಗಳು ಮತ್ತು ಐಷಾರಾಮಿ ಹೋಟೆಲ್ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಈ ಘಟನೆಯಲ್ಲಿ 270 ಜನರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.