ಕೊಲಂಬೊ (ಪಿಟಿಐ): ಈಸ್ಟರ್ ಭಾನುವಾರದಂದು ನಡೆದ ಸರಣಿ ಬಾಂಬ್ ದಾಳಿಯಲ್ಲಿ 176 ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ ಎಂದು ಶ್ರೀಲಂಕಾದ ಕ್ಯಾಥೋಲಿಕ್ ಚರ್ಚ್ ಹೇಳಿಕೆ ಆಧರಿಸಿ ಮಾಧ್ಯಮಗಳು ವರದಿ ಮಾಡಿವೆ.

ಕೆಲವು ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದರೆ, ಇನ್ನೂ ಕೆಲವರು ಇಬ್ಬರನ್ನೂ ಕಳೆದುಕೊಂಡಿದ್ದಾರೆ.

ಏಪ್ರಿಲ್ 21ರಂದು ಚರ್ಚ್ ಹಾಗೂ ಪ್ರಮುಖ ಹೋಟೆಲ್ಗಳನ್ನು ಗುರಿಯಾಗಿಸಿಕೊಂಡುನಡೆದ ಏಳು ಸರಣಿ ಆತ್ಮಹತ್ಯಾಬಾಂಬ್ ದಾಳಿಯಲ್ಲಿ 258 ಮಂದಿ ಸಾವನ್ನಪ್ಪಿದ್ದರು. 500 ಜನರು ಗಾಯಗೊಂಡಿದ್ದರು.

ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸಹಾಯ ಹಾಗೂ ಅವರ ಭವಿಷ್ಯ ರೂಪಿಸಲು ಚರ್ಚ್ ಮುಂದಾಗಿದೆ ಎಂದು ಕಾರ್ಡಿನಲ್ ಮಲ್ಕಮ್ ರಂಜಿತ್ ಹೇಳಿದ್ದಾಗಿ ‘ಡೈಲಿ ಮಿರರ್’ ಸೋಮವಾರ ವರದಿ ಮಾಡಿದೆ. ಕಳೆದ ವಾರ ರಂಜಿತ್ ಅವರು ರೋಮ್ಗೆ ಭೇಟಿ ನೀಡಿದ್ದಾಗ ಈ ಹೇಳಿಕೆ ನೀಡಿದ್ದಾರೆ.

ಸ್ಫೋಟದಲ್ಲಿ ಹಾನಿಗೊಳಗಾದ ಚರ್ಚುಗಳ ನವೀಕರಣದ ಬಗ್ಗೆ ನಾವು ಗಮನಹರಿಸುವುದಿಲ್ಲ. ಅದನ್ನು ಸರ್ಕಾರಕ್ಕೆ ಬಿಡಲಾಗಿದೆ ಎಂದೂ ಅವರು ಹೇಳಿದ್ದಾರೆ.

ಏಪ್ರಿಲ್ 21ರ ಈಸ್ಟರ್ ಭಾನುವಾರದಂದು ಕೊಲಂಬೊದ ಸ್ಯಾ.ಅಂಥೋನಿ ಚರ್ಚ್, ಪಶ್ವಿಮ ಕರಾವಳಿ ಭಾಗದ ನೆಗಂಬೊದಲ್ಲಿರುವ ಸೆಬಿಸ್ಟಿಯನ್ ಹಾಗೂ ಪೂರ್ವಭಾಗದಲ್ಲಿರುವ ಬಾಟ್ಟಿಕೋಲಾ ಚರ್ಚ್ ಮೇಲೆ ದಾಳಿ ನಡೆದಿತ್ತು.

ಈ ಎಲ್ಲ ಚರ್ಚ್ಗಳನ್ನು ನವೀಕರಿಸುವುದಾಗಿ ಶ್ರೀಲಂಕಾ ಸರ್ಕಾರ ಈಹಿಂದೆಯೇ ಘೋಷಣೆ ಮಾಡಿದೆ.

ರೋಮ್ಗೆ ಭೇಟಿ ನೀಡಿದ್ದ ವೇಳೆ ಪೋಪ್ ಫ್ರಾನ್ಸಿಸ್ಅವರಿಗೆ ಶ್ರೀಲಂಕಾದಲ್ಲಿ ನಡೆದ ದುರಂತ ಹಾಗೂ ಜನರ ಜೀವನ ಸುಧಾರಣೆಗೆ ಚರ್ಚ್ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದ್ದಾಗಿ ರಂಜಿತ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.