ನಾಶ್‌ವಿಲ್ಲೆ, ಅಮೆರಿಕ: ಇನ್ಮುಂದೆ ಅಮೆರಿಕದ ದಕ್ಷಿಣ ರಾಜ್ಯವಾದ ಟೆನ್ನೇಸಿಯಲ್ಲಿ ಶಿಕ್ಷಕರು ಶಾಲೆಗೆ ಬಂದೂಕುಗಳನ್ನು ತೆಗೆದುಕೊಂಡು ಹೋಗಬಹುದು.

ಹೌದು, ಶಾಲೆಗಳಿಗೆ ಶಿಕ್ಷಕರು ಬಂದೂಕು (ಹ್ಯಾಂಡ್‌ಗನ್) ತೆಗೆದುಕೊಂಡು ಹೋಗಲು ಅನುಮತಿ ನೀಡುವ ಮಸೂದೆಗೆ ಟೆನ್ನೇಸಿ ಶಾಸನಸಭೆ ಬುಧವಾರ ಅನುಮೋದನೆ ನೀಡಿದೆ.

ಕಳೆದ ವರ್ಷ ನಾಶ್‌ವಿಲ್ಲೆಯ ಶಾಲೆಯೊಂದರಲ್ಲಿ ಬಂದೂಕುದಾರಿಯೊಬ್ಬ ನಡೆಸಿದ್ದ ಗುಂಡಿನ ದಾಳಿಗೆ ಮೂವರು ವಿದ್ಯಾರ್ಥಿಗಳು ಹಾಗೂ ಮೂವರು ಶಾಲಾ ಸಿಬ್ಬಂದಿ ಮೃತರಾಗಿದ್ದರು. ಈ ಘಟನೆ ಬೆನ್ನಲ್ಲೇ ಶಾಲೆಗಳಿಗೆ ಹ್ಯಾಂಡ್‌ಗನ್‌ಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಬೇಕು ಎಂಬ ಕೂಗು ಶಿಕ್ಷಕರ ಕಡೆಯಿಂದ ಎದ್ದಿತ್ತು.

ಶಾಸನಸಭೆಯಲ್ಲಿ ಮಸೂದೆ ಮಂಡನೆಯಾಗಿ ಕಾನೂನಾಗಿರುವುದರಿಂದ ಇನ್ಮುಂದೆ ಶಿಕ್ಷಕರು ನಿಗದಿತ ಕ್ರಮಗಳನ್ನು ಅನುಸರಿಸಿ ಬಂದೂಕುಗಳನ್ನು ತೆಗೆದುಕೊಂಡು ಶಾಲೆಗೆ ಹೋಗಬಹುದು.

ಪೊಲೀಸರ ಅನುಮತಿಯೊಂದಿಗೆ 40 ಗಂಟೆಗಳ ತರಬೇತಿ, ಮಾನಸಿಕ ಸ್ಥಿತಿಯ ಬಗ್ಗೆ ಮನಶಾಸ್ತ್ರಜ್ಞರ ಪ್ರಮಾಣಪತ್ರ ಸೇರಿದಂತೆ ಇತರ ಅಗತ್ಯ ದಾಖಲೆಗಳನ್ನು ಪೂರೈಸಿದ ಶಿಕ್ಷಕರು, ಇತರೆ ಸಿಬ್ಬಂದಿ ಶಾಲೆಗೆ ಬಂದೂಕುಗಳನ್ನು ತೆಗೆದುಕೊಂಡು ಹೋಗಬಹುದು ಎನ್ನಲಾಗಿದೆ.

ಆದರೆ, ಈ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದು ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಪರ–ವಿರೋಧದ ಪ್ರತಿಭಟನೆಗಳು ವರದಿಯಾಗಿವೆ.
.ಸಿಇಟಿ: ಪಠ್ಯ ಹೊರತಾದ ಪ್ರಶ್ನೆ, ತ್ವರಿತ ನಿರ್ಧಾರಕ್ಕೆ ಒತ್ತಾಯ.ಆಸ್ಟ್ರೇಲಿಯಾ: ಅಮಾಯಕರ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದ 7 ಬಾಲಕರ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.