ವಾಷಿಂಗ್ಟನ್: ಭಾರತವನ್ನು ಗುರಿಯಾಗಿಸಿಕೊಂಡಿರುವ ಭಯೋತ್ಪಾದನಾ ಸಂಘಟನೆಗಳು ಪಾಕಿಸ್ತಾನದಿಂದಲೇ ಕಾರ್ಯಾಚರಣೆ ಮುಂದುವರಿಸಿವೆ. ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಿಸಿರುವ ಮಸೂದ್ ಅಜರ್ ಸೇರಿದಂತೆ ಹಲವು ಉಗ್ರರ ವಿರುದ್ಧವೂ ಪಾಕಿಸ್ತಾನ ಆಡಳಿತವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಮೆರಿಕದ ವಿದೇಶಾಂಗ ವ್ಯವಹಾರಗಳ ಇಲಾಖೆಯು ಇತ್ತೀಚಿನ ವರದಿಯಲ್ಲಿ ಉಲ್ಲೇಖಿಸಿದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕನ್ ಭಯೋತ್ಪಾದನೆಗೆ ಸಂಬಂಧಿಸಿದ 2020ರ ವರದಿಯನ್ನು ಗುರುವಾರ ಬಿಡುಗಡೆ ಮಾಡಿದ್ದಾರೆ.

ವರದಿಯ ಪ್ರಕಾರ, 'ಅಫ್ಗಾನಿಸ್ತಾನವನ್ನು ಗುರಿಯಾಗಿಸಿಕೊಂಡಿರುವ ಆಫ್ಗನ್ ತಾಲಿಬಾನ್ ಹಾಗೂ ಹಕ್ಕಾನಿ ನೆಟವರ್ಕ್, ಭಾರತವನ್ನು ಗುರಿಯಾಗಿಸಿಕೊಂಡಿರುವ ಲಷ್ಕರ್ ಎ ತೈಬಾ (ಎಲ್ಇಟಿ), ಅದರೊಂದಿಗೆ ಸಂಯೋಜನೆಗೊಂಡಿರುವ ಇತರೆ ಸಂಘಟನೆಗಳು ಹಾಗೂ ಜೈಷ್ ಎ ಮೊಹಮ್ಮದ್ ಉಗ್ರರ ಸಂಘಟನೆಗಳು ಪಾಕಿಸ್ತಾನದಿಂದ ಕಾರ್ಯಾಚರಣೆ ನಡೆಸುವುದು ಮುಂದುವರಿದಿದೆ.'

2008ರ ಮುಂಬೈ ದಾಳಿಯ ಸಂಚು ಕೋರ ಸಾಜಿದ್ ಮಿರ್ ಹಾಗೂ ಜಾಗತಿಕ ಉಗ್ರರ ಪಟ್ಟಿಯಲ್ಲಿರುವ ಜೈಷ್ ಎ ಮೊಹಮ್ಮದ್ ಸಂಸ್ಥಾಪಕ ಮಸೂದ್ ಅಜರ್, ಇಬ್ಬರೂ ಪಾಕಿಸ್ತಾನದಲ್ಲಿ ಸ್ವತಂತ್ರವಾಗಿರುವುದಾಗಿ ತಿಳಿಯಲಾಗಿದೆ ಎಂದು ವರದಿಯಲ್ಲಿದೆ.

ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ನೆರವು ಪ್ರಕರಣಗಳಲ್ಲಿ ಲಷ್ಕರ್ ಎ ತೈಬಾ ಸಂಸ್ಥಾಪಕ ಹಫೀಜ್ ಸಯೀದ್ನನ್ನು ಲಾಹೋರ್ನ ಉಗ್ರ ನಿಗ್ರಹ ನ್ಯಾಯಾಲಯವು ಫೆಬ್ರುವರಿ ಮತ್ತು ಮತ್ತೆ ನವೆಂಬರ್ನಲ್ಲಿ ದೋಷಿ ಎಂದು ಪರಿಗಣಿಸಿದೆ. ಆತನಿಗೆ ಐದು ವರ್ಷ ಮತ್ತು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿರುವುದಾಗಿ ವರದಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.