ಸಿಂಗಪುರ: ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಂಗಪುರದೊಂದಿಗೆ ಭಾವನಾತ್ಮಕ ಸಂಬಂಧ ಇದೆ. ಈ ಕಾರಣಕ್ಕಾಗಿಯೇ ಪ್ರಧಾನಿಯಾಗಿ ಮೂರನೇ ಅವಧಿಗೆ ಆಯ್ಕೆಯಾದ ಆರಂಭದಲ್ಲಿಯೇ ಅವರು ಸಿಂಗಪುರಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮಂಗಳವಾರ ‘ದಿ ಸ್ಟ್ರೇಟ್ಸ್ ಟೈಮ್ಸ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ಮೋದಿ ಅವರು ಬುಧವಾರ ಸಿಂಗಪುರಕ್ಕೆ ಭೇಟಿ ನೀಡಲಿದ್ದಾರೆ. ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕಾಲ ಕೂಡಿ ಬಂದಿದೆ. ಎರಡು ದಶಕಗಳಿಂದ ನಮ್ಮ ಸಂಬಂಧ ಬಹಳಷ್ಟು ಶಕ್ತಿಯುತವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಕಳೆದ ದಶಕದಲ್ಲಿ ಭಾರತ ಸಾಧಿಸಿದ ಅಭಿವೃದ್ಧಿ, ಕೋವಿಡ್ ಸಂಕಷ್ಟದಿಂದ ದೇಶವು ಹೊರಬಂದ ರೀತಿ, ದೇಶದಲ್ಲಿ ತ್ವರಿತ ಗತಿಯಲ್ಲಿ ನಡೆಯುತ್ತಿರುವ ಡಿಜಿಟಲ್ ಕ್ರಾಂತಿ, ನಮ್ಮಲ್ಲಿನ ಮೂಲಸೌಕರ್ಯ, ಉತ್ಪಾದಕ ವಲಯ ಹಾಗೂ ಯುವಜನರಲ್ಲಿನ ಹೇರಳ ಪ್ರತಿಭೆ... ಹೀಗೆ, ಸಿಂಗಪುರವು ಹಲವು ಅಂಶಗಳನ್ನು ಗಮನಿಸಬಹುದು. ಈ ಎಲ್ಲ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಕೈಜೋಡಿಸಬಹುದು’ ಎಂದರು.

‘ಸೆಮಿಕಂಡಕ್ಟರ್, ಹಸಿರು ತಾಂತ್ರಿಕತೆ, ವಿದ್ಯುತ್ ಚಾಲಿತ ವಾಹನಗಳು ದ್ವಿಪಕ್ಷೀಯ ಮಾತುಕತೆ ಆದ್ಯತಾ ವಿಷಯಗಳಾಗಿವೆ. ಸಂಪರ್ಕ ಹಾಗೂ ಇಂಧನ ವಿನಿಮಯಗಳ ಬಗ್ಗೆಯೂ ಚರ್ಚೆ ನಡೆಯಲಿದೆ’ ಎಂದರು.

ಸಿಂಗಪುರದ ಕಾರಣಕ್ಕಾಗಿಯೇ ‘ಪೂರ್ವದ ಕಡೆಗೆ ದೃಷ್ಟಿ’ ಎನ್ನುವ ವಿದೇಶಿ ನೀತಿಯನ್ನು ಭಾರತ ತನ್ನದಾಗಿಸಿಕೊಂಡಿತು. ಈ ನೀತಿಯ ಯಶಸ್ಸಿನಲ್ಲಿ ಸಿಂಗಪುರವು ಶ್ರಮಿಸಿದೆ. ಭದ್ರತೆ ಸಂಪರ್ಕ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಭಾರತದ ಬೆಳವಣಿಗೆ ಈ ನೀತಿಯ ಯಶಸ್ಸನ್ನು ನಿರೂಪಿಸುತ್ತದೆ
ಎಸ್.ಜೈಶಂಕರ್ ವಿದೇಶಾಂಗ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.