ಪೆನ್ಸಿಲ್ವೇನಿಯಾ: ಮತ್ತೆ ಅಧ್ಯಕ್ಷನಾಗಿ ಆಯ್ಕೆಯಾದರೆ ಬಂದೂಕು ತಯಾರಿಕೆ, ಮಾರಾಟದ ಮೇಲೆ ಜೋ ಬೈಡನ್ ಸರ್ಕಾರ ಹೇರಿದ ಎಲ್ಲ ನಿರ್ಬಂಧಗಳನ್ನು ಸಡಿಲಗೊಳಿಸುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ನ್ಯಾಷನಲ್ ರೈಫಲ್ ಅಸೋಸಿಯೇಷನ್ (ಎನ್‌ಆರ್‌ಎ) ಹ್ಯಾರಿಸ್‌ಬರ್ಗ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಬಂದೂಕು ಮಾರಾಟವನ್ನು ನಿರ್ಬಂಧಿಸುವ ಕಾನೂನುಗಳು ಸೇರಿದಂತೆ ಬೈಡನ್ ಆಡಳಿತ ಜಾರಿಗೆ ತಂದ ಇತರ ಎಲ್ಲ ನಿರ್ಬಂಧಗಳನ್ನು ಸಡಿಲಗೊಳಿಸುವುದದಾಗಿ ಪ್ರತಿಜ್ಞೆ ಮಾಡಿದರು.

‘ಬಂದೂಕು ತಯಾರಕರು ಮತ್ತು ಮಾಲೀಕರ ಮೇಲೆ ಬೈಡೆನ್ ಆಡಳಿತ ದಬ್ಬಾಳಿಕೆ ಮಾಡುತ್ತಿದ್ದು, ಅಧಿಕಾರಕ್ಕೆ ಬಂದ ವಾರದಲ್ಲೇ ಈ ಕಾನೂನುಗಳನ್ನು ತಿದ್ದುಪಡಿ ಮಾಡಲಾಗುವುದು’ ಎಂದರು.

2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಬೆಂಬಲಿಸಿದ್ದ ಎನ್‌ಆರ್‌ಎ, ಆಡಳಿತದುದ್ದಕ್ಕೂ ಅವರ ಬೆಂಬಲಕ್ಕೆ ನಿಂತಿತ್ತು. ತಮ್ಮ ಆಡಳಿತಾವಧಿಯಲ್ಲಿ ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕ ಮಾಡುವ ಮೂಲಕ ಬಂದೂಕು ಮೇಲಿನ ಕಾನೂನುಗಳ ಸಡಿಲೀಕರಣಕ್ಕೆ ಟ್ರಂಪ್ ಒತ್ತು ನೀಡಿದ್ದರು. ಕೋವಿಡ್ ಸಮಯದಲ್ಲಿ ಬಂದೂಕು ಅಂಗಡಿಗಳನ್ನು ಅಗತ್ಯ ವ್ಯವಹಾರಗಳ ಸಾಲಿನಲ್ಲಿ ಗುರುತಿಸುವುದರ ಮೂಲಕ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.