ವಾಷಿಂಗ್ಟನ್: ರಿಪಬ್ಲಿಕನ್ ಪಕ್ಷದ ನಾಮನಿರ್ದೇಶನ ಸ್ಪರ್ಧೆಯಲ್ಲಿ ನಿಕ್ಕಿ ಹ್ಯಾಲೆಗೆ ಭಾರೀ ಸೋಲು ಉಂಟಾದ ಪರಿಣಾಮ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಡೊನಾಲ್ಡ್ ಟ್ರಂಪ್ ಅವರ ಹಾದಿ ಸುಗಮವಾಗಿದೆ.

ಈ ಬೆಳವಣಿಗೆಯಿಂದಾಗಿ ಕಾರ್ಲಸ್ಟನ್ ಮತ್ತು ದಕ್ಷಿಣ ಕ್ಯಾರೊಲಿನಾದಲ್ಲಿ ಆಯೋಜನೆಗೊಂಡಿದ್ದ ಪ್ರಚಾರ ಕಾರ್ಯಗಳನ್ನು ಅವರು ರದ್ದುಪಡಿಸಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಮತ್ತು ಸಿಎನ್‌ಎನ್ ವರದಿ ಮಾಡಿದೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 15 ರಾಜ್ಯಗಳ ಪೈಕಿ 14ರಲ್ಲಿ ತಮ್ಮ ಪರ ಮತ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಇದು ಅವರ ಪಾಲಿಗೆ ಶುಭ ಮಂಗಳವಾರವಾಗಿದೆ. ಈಶಾನ್ಯ ರಾಜ್ಯವಾದ ವರ್ಮೌಂಟ್‌ನಲ್ಲಿ ಮಾತ್ರ ಹ್ಯಾಲೆಗೆ ಜಯ ಸಂದಿದೆ.

ಮತ್ತೊಂದೆಡೆ ಬೈಡನ್‌ಗೂ ಇದು ಶುಭ ಮಂಗಳವಾರ ಎಂದೆನ್ನಲಾಗಿದೆ. ಏಕೆಂದರೆ 81 ವರ್ಷದ ಬೈಡನ್ ವಿರುದ್ಧ ಯಾರೂ ಸ್ಪರ್ಧಿಸದ ಕಾರಣ ಅವರ ಗೆಲುವು ಸುಲಭದ್ದಾಗಿತ್ತು.

ತಮ್ಮ ಜಯದ ಕುರಿತು ಫ್ಲೋರಿಡಾದಲ್ಲಿರುವ ಮಾರಾ–ಲಾಗೊ ಬೀಚ್ ಕ್ಲಬ್‌ನಲ್ಲಿ ಪ್ರತಿಕ್ರಿಯಿಸಿರುವ ಟ್ರಂಪ್, ‘ಇದು ಅದ್ಭುತ ರಾತ್ರಿಯೂ ಹೌದು ಹಾಗೂ ಅದ್ಭುತ ಹಗಲು ಕೂಡಾ’ ಎಂದಿದ್ದಾರೆ.

52 ವರ್ಷದ ಹ್ಯಾಲೆ ಅವರು ದಕ್ಷಿಣ ಕ್ಯಾರೊಲಿನಾದ ಮಾಜಿ ಗವರ್ನರ್ ಆಗಿದ್ದರು ಮತ್ತು ಟ್ರಂಪ್ ಅವಧಿಯಲ್ಲಿ ವಿಶ್ವ ಸಂಸ್ಥೆಯಲ್ಲಿ ಅಮೆರಿಕದ ಪ್ರತಿನಿಧಿಯಾಗಿದ್ದರು. ಹ್ಯಾಲೆ ಅವರು ಟ್ರಂಪ್ ಅವರನ್ನು ಸರಿಸುವಲ್ಲಿ ವಿಫಲರಾಗಿದ್ದಾರೆ. ಜನವರೆಯಲ್ಲಿ ಅಯೋವಾದಲ್ಲಿ ನಡೆದ ನಾಮನಿರ್ದೇಶನ ಸ್ಪರ್ಧೆಯಲ್ಲಿ ಮೂರನೇ ಸ್ಥಾನದಲ್ಲಿದ್ದರು.

ಎರಡು ಬಾರಿ ದೋಷಾರೋಪಣೆ ಹೊತ್ತ, 2020ರ ಚುನಾವಣೆಯಲ್ಲಿ 70 ಲಕ್ಷ ಮತಗಳಿಂದ ಪರಾಭವಗೊಂಡ ಹಾಗೂ 4 ವಿಚಾರಣೆಗಳಲ್ಲಿ 91 ಆರೋಪಗಳನ್ನು ಎದುರಿಸಿ ಟ್ರಂಪ್, ಇದೀಗ ಅಧ್ಯಕ್ಷೀಯ ಚುನಾವಣೆಯ ಹಾದಿಯಲ್ಲಿ ಮುಂದಕ್ಕೆ ಸಾಗಿದ್ದಾರೆ.

ದುಡಿಯುವ ವರ್ಗ, ಗ್ರಾಮೀಣ ಜನರು ಮತ್ತು ಶ್ವೇತ ವರ್ಣೀಯರ ಮತಗಳತ್ತ ಟ್ರಂಪ್ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ಅದರಲ್ಲೂ ವಲಸೆ ಮತ್ತು ಆರ್ಥಿಕತೆ ಕುರಿತು ಹೆಚ್ಚು ಕೇಂದ್ರಿತವಾಗಿದ್ದಾರೆ.

ಮತ್ತೊಂದೆಡೆ ಪರಾಭವಗೊಂಡ ಹ್ಯಾಲೆ ಅವರ, ಉಪನಗರಗಳ ಮತದಾರರು, ವಿಶ್ವವಿದ್ಯಾಲಯದ ಪದವೀಧರರ ಮೇಲೆ ಹೆಚ್ಚು ಪ್ರಭಾವ ಬೀರಿದ್ದರು.
.ಮತ್ತೆ ಅಧ್ಯಕ್ಷನಾದರೆ ಬಂದೂಕುಗಳ ಮೇಲಿನ ನಿರ್ಬಂಧಗಳು ಸಡಿಲ ಎಂದ ಡೊನಾಲ್ಡ್ ಟ್ರಂಪ್.ರಿಪಬ್ಲಿಕನ್ ಪಕ್ಷದ ಚುನಾವಣೆ: ನೆವಡಾದಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.