ಹಾಂಗ್ಕಾಂಗ್: ಹಾಂಗ್ಕಾಂಗ್ ನಿವಾಸಿಗಳಿಗಾಗಿ ಬ್ರಿಟನ್ ಸರ್ಕಾರ ಹೊಸ ವೀಸಾ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಡಿ ವೀಸಾ ಪಡೆದು, ಅವರು ಬ್ರಿಟನ್ ನಾಗರಿಕತ್ವವನ್ನು ಪಡೆಯಬಹುದಾಗಿದೆ.

ಈ ವೀಸಾ ಪಡೆಯಲು ಭಾನುವಾರದಿಂದಲೇ ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆಯಿಂದ 3 ಲಕ್ಷಕ್ಕೂ ಅಧಿಕ ಜನರು ಹಾಗೂ ಅವರ ಅವಲಂಬಿತರಿಗೆ ಲಾಭವಾಗುವುದು ಎಂದು ಬ್ರಿಟನ್ ಅಂದಾಜಿಸಿದೆ.

ಬ್ರಿಟನ್ ಸರ್ಕಾರ ನೀಡಿರುವ ‘ಬ್ರಿಟಿಷ್ ನ್ಯಾಷನಲ್ ಓವರ್ಸೀಸ್’ (ಬಿಎನ್ಒ) ಪಾಸ್ಪೋರ್ಟ್ಗಳಿಗೆ ಜ. 31ರಿಂದ ಅನ್ವಯವಾಗುವಂತೆ ಮಾನ್ಯತೆ ಇರುವುದಿಲ್ಲ ಎಂಬುದಾಗಿ ಚೀನಾ ಹಾಗೂ ಹಾಂಗ್ಕಾಂಗ್ ಸರ್ಕಾರಗಳು ಘೋಷಿಸಿವೆ. ಈ ಕಾರಣಕ್ಕಾಗಿ ಬ್ರಿಟನ್ ಹೊಸ ವೀಸಾ ಯೋಜನೆಯನ್ನು ಘೋಷಿಸಿದೆ.

ಹಾಂಗ್ಕಾಂಗ್ನಲ್ಲಿ ಚೀನಾ ಜಾರಿಗೊಳಿಸಿರುವ ಹೊಸ ಭದ್ರತಾ ಕಾಯ್ದೆಗೆ ಭಾರಿ ವಿರೋಧ ವ್ಯಕ್ತವಾಯಿತು. ಚೀನಾದ ಈ ನಡೆಯನ್ನು ವಿರೋಧಿಸಿ ಭಾರಿ ಪ್ರತಿಭಟನೆಗಳೂ ನಡೆದವು. ಈಗ ಬ್ರಿಟನ್ ಘೋಷಿಸಿರುವ ಹೊಸ ವೀಸಾ ಯೋಜನೆ ಹಾಂಗ್ಕಾಂಗ್ ನಿವಾಸಿಗಳಿಗೆ ವರದಾನವಾಗಲಿದೆ ಎನ್ನಲಾಗುತ್ತಿದೆ.

ಚೀನಾ ಜಾರಿಗೊಳಿಸಿರುವ ಹೊಸ ಭದ್ರತಾ ಕಾಯ್ದೆ, ಹಾಂಗ್ಕಾಂಗ್ ಅನ್ನು 1997ರಲ್ಲಿ ಚೀನಾಕ್ಕೆ ಹಸ್ತಾಂತರಿಸುವ ಸಂದರ್ಭದಲ್ಲಿ ಮಾಡಿಕೊಂಡಿರುವ ಒಪ್ಪಂದದ ಉಲ್ಲಂಘನೆಯಾಗುತ್ತದೆ. ಈ ಕಾರಣಕ್ಕಾಗಿ ಹಾಂಗ್ಕಾಂಗ್ ನಿವಾಸಿಗಳ ಅನುಕೂಲಕ್ಕಾಗಿ ಹೊಸ ವೀಸಾ ಯೋಜನೆಯನ್ನು ಜಾರಿಗೊಳಿಸುತ್ತಿರುವುದಾಗಿ ಬ್ರಿಟನ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.