ಲುವಿವ್: ‘ದೇಶದ ಮೇಲೆ ರಷ್ಯಾ ಯುದ್ಧ ಸಾರಿದ ದಿನದಿಂದ ಈ ವರೆಗೆ ₹ 43 ಲಕ್ಷ ಕೋಟಿಗೂ (564.9 ಶತಕೋಟಿ ಡಾಲರ್) ಅಧಿಕ ಮೌಲ್ಯದಷ್ಟು ಹಾನಿಯಾಗಿದೆ’ ಎಂದು ಉಕ್ರೇನ್ ಹಣಕಾಸು ಸಚಿವೆ ಯೂಲಿಯಾ ಸಿವಿರಿಡೆಂಕೊ ಸೋಮವಾರ ಹೇಳಿದ್ದಾರೆ.

‘ಮೂಲಸೌಕರ್ಯಗಳು, ಆರ್ಥಿಕತೆಗೆ ಬಿದ್ದಿರುವ ಪೆಟ್ಟು ಹಾಗೂ ಇತರ ಕ್ಷೇತ್ರಗಳಲ್ಲಿ ಆಗಿರುವ ಹಾನಿಯನ್ನು ಇದು ಒಳಗೊಂಡಿದೆ’ ಎಂದು ಅವರು ಆನ್ಲೈನ್ ಮೂಲಕ ಹಂಚಿಕೊಂಡಿರುವ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

‘ಈ ಯುದ್ಧದ ಪರಿಣಾಮ ದೇಶದಲ್ಲಿನ 8,000 ಕಿ.ಮೀ.ಉದ್ದದಷ್ಟು ರಸ್ತೆಗಳು ಹಾಳಾಗಿವೆ. ಕೋಟಿ ಚದರ ಮೀಟರ್ನಷ್ಟು ವಸತಿ ಸೌಲಭ್ಯಕ್ಕೆ ಹಾನಿಯಾಗಿದೆ’ ಎಂದಿದ್ದಾರೆ.

ಈ ನಡುವೆ, ಉಕ್ರೇನ್ನಲ್ಲಿ ತನ್ನ ಸೇನಾಪಡೆಗಳ ಕಾರ್ಯಾಚರಣೆಯನ್ನು ತಗ್ಗಿಸಲು ‘ವಿಶೇಷ ಮಿಲಟರಿ ಕಾರ್ಯಾಚರಣೆ’ಗೆ ಚಾಲನೆ ನೀಡುವುದಾಗಿ ರಷ್ಯಾ ಹೇಳಿದೆ. ಆದರೆ, ಅಪ್ರಚೋದಿತ ದಾಳಿ ನಡೆಸಲು ರಷ್ಯಾ ಇಂಥ ನೆಪ ಹೇಳುತ್ತಿದೆ ಎಂದು ಉಕ್ರೇನ್ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಹೇಳಿವೆ.

ಪುಟಿನ್ ಕಟುಕ ಎಂದಿದ್ದ ಅಮೆರಿಕ ಅಧ್ಯಕ್ಷ ಬೈಡನ್ ಹೇಳಿಕೆ ಆತಂಕಕಾರಿ ಎಂದ ರಷ್ಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.