ಕೀವ್: ಉಕ್ರೇನ್ನ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿ ‘ಉಕ್ರ್ಟೆಲಿಕಾಂ’ ಮೇಲೆ ಪ್ರಬಲ ಸೈಬರ್ ದಾಳಿ ನಡೆದಿದ್ದು, ಅಂತರ್ಜಾಲ ಸೇವೆಗೆ ಅಡ್ಡಿಯಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ಹಾಗೂ ಕಂಪನಿ ಪ್ರತಿನಿಧಿಗಳು ತಿಳಿಸಿದ್ದಾರೆ.

‘ಉಕ್ರ್ಟೆಲಿಕಾಂನ ಐಟಿ ಮೂಲಸೌಕರ್ಯದ ಮೇಲೆ ಶತ್ರುಗಳು ಪ್ರಬಲ ಸೈಬರ್ ದಾಳಿ ನಡೆಸಿದ್ದಾರೆ. ದಾಳಿಯನ್ನು ಹಿಮ್ಮೆಟ್ಟಿಸಲಾಗಿದೆ. ಈಗ ಉಕ್ರ್ಟೆಲಿಕಾಂ ಸೇವೆಯನ್ನು ಮರುಸ್ಥಾಪಿಸುವ ಸಾಮರ್ಥ್ಯವನ್ನು ಹೊಂದಿದೆ’ ಎಂದು ಉಕ್ರೇನ್ನ ಸಂವಹನ ಮತ್ತು ಮಾಹಿತಿ ರಕ್ಷಣೆ ವಿಶೇಷ ಸೇವೆಗಳ ಅಧ್ಯಕ್ಷ ಯೂರಿ ಶಿಖೋಲ್ ತಿಳಿಸಿದ್ದಾರೆ.

ಪಾವತಿ ವ್ಯವಸ್ಥೆ ಕುರಿತ ಮಾತುಕತೆಗೆ ರಷ್ಯಾ ವಿದೇಶಾಂಗ ಸಚಿವ ಈ ವಾರ ಭಾರತಕ್ಕೆ

ಸೇವೆಗಳನ್ನು ಕ್ರಮೇಣ ಪುನರಾರಂಭಿಸಲಾಗುತ್ತಿದೆ ಎಂದು ಕಂಪನಿಯ ವಕ್ತಾರ ಮಿಖಾಯಿಲ್ ಶುರಾನೋವ್ ಹೇಳಿದ್ದಾರೆ.

ರಷ್ಯಾ ಸೇನೆಯು ಫೆಬ್ರುವರಿ 24ರಂದು ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿತ್ತು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇದನ್ನು 'ವಿಶೇಷ ಮಿಲಿಟರಿ ಕಾರ್ಯಾಚರಣೆ' ಎಂದು ಕರೆದರೆ, ಪುಟಿನ್ ಅಪ್ರಚೋದಿತ ಆಕ್ರಮಣ ಆರಂಭಿಸಿದ್ದಾರೆ ಎಂದು ಉಕ್ರೇನ್ ಆರೋಪಿಸಿತ್ತು.

ರಷ್ಯಾ ಉದ್ಯಮಿ, ಉಕ್ರೇನ್ ಸಂಧಾನಕಾರರಿಗೆ ವಿಷ ಪ್ರಾಶನದ ಶಂಕೆ: ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.