ವಿಶ್ವಸಂಸ್ಥೆ: ಗಾಜಾದಲ್ಲಿನ ದುರಂತದ ಕುರಿತು ಭದ್ರತಾ ಮಂಡಳಿಗೆ ಎಚ್ಚರಿಕೆ ನೀಡಲು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಅಪರೂಪವಾಗಿ ಬಳಸುವ ಅಧಿಕಾರವನ್ನು ಬಳಸಿದ್ದಾರೆ. ಕದನ ವಿರಾಮ ಘೋಷಿಸಲು ತಕ್ಷಣವೇ ಒತ್ತಾಯಿಸುವಂತೆಯೂ ಸದಸ್ಯರಿಗೆ ಸೂಚಿಸಿದ್ದಾರೆ.

ಎರಡು ತಿಂಗಳ ಯುದ್ಧದ ಪರಿಣಾಮವಾಗಿ ಗಾಜಾದಲ್ಲಿ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ನಾಗರಿಕರ ಸುರಕ್ಷತೆಗೆ ಒತ್ತಾಯಿಸಿ ಎಂದು ಭದ್ರತಾ ಮಂಡಳಿಯ 15 ಸದಸ್ಯರಿಗೆ ಬರೆದಿರುವ ಪತ್ರದಲ್ಲಿ ಅವರು ಹೇಳಿದ್ದಾರೆ.

ಎಲ್ಲಾ ಪ್ರಭಾವಗಳನ್ನು ಬಳಸಿ ಈ ಬಿಕ್ಕಟ್ಟನ್ನು ಪರಿಹರಿಸುವ ಜವಾಬ್ದಾರಿ ಅಂತರರಾಷ್ಟ್ರೀಯ ಸಮುದಾಯಗಳ ಮೇಲಿದೆ ಎಂದೂ ಹೇಳಿದ್ದಾರೆ.

ಆಂಟೋನಿಯೊ ಗುಟೆರೆಸ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಇಸ್ರೇಲ್, ‘ಅವರ ಅಧಿಕಾರಾವಧಿಯಲ್ಲಿ ವಿಶ್ವಶಾಂತಿಗೆ ಅಪಾಯವಿದೆ’ ಎಂದಿದೆ.

ಗುಟೆರೆಸ್ ಅವರ ನಡೆಯು ಹಮಾಸ್ ಉಗ್ರರಿಗೆ ಬೆಂಬಲ ಸೂಚಿಸುವಂತಿದೆ ಎಂದೂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.