ತೈಪೆ (ತೈವಾನ್) : ತೈವಾನ್ನ ಪೂರ್ವ ಕರಾವಳಿ ಪ್ರದೇಶದ ಹುವಾಲಿಯನ್ನಲ್ಲಿ ಸೋಮವಾರ 5.5ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಆದರೆ, ಇದರಿಂದ ಆಗಿರುವ ಹಾನಿಯ ಕುರಿತು ಇದುವರೆಗೆ ಯಾವುದೇ ವರದಿಯಾಗಿಲ್ಲ.

ಭೂಮೇಲ್ಮೈಯಿಂದ 23.9 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಇದರಿಂದಾಗಿ ರಾಜಧಾನಿ ತೈಪೆಯಲ್ಲಿ ಕಟ್ಟಡಗಳು ಅಲುಗಾಡಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕಳೆದ ಏಪ್ರಿಲ್ನಲ್ಲಿ ಹುವಾಲಿಯನ್ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 9 ಜನ ಸಾವಿಗೀಡಾಗಿದ್ದರು. 900 ಜನರು ಗಾಯಗೊಂಡಿದ್ದರು. ಇದು ಕಳೆದ 25 ವರ್ಷಗಳಲ್ಲಿ ತೈವಾನ್ನಲ್ಲಿ ಸಂಭವಿಸಿದ ಅತಿದೊಡ್ಡ ಭೂಕಂಪವಾಗಿದೆ.

2016ರಲ್ಲಿ ದಕ್ಷಿಣ ತೈವಾನ್ನಲ್ಲಿ ಸಂಭವಿಸಿದ ಭೂಕಂಪದಲ್ಲಿ 100ಕ್ಕೂ ಅಧಿಕ ಜನರು ಹಾಗೂ 1999ರಲ್ಲಿ ಸಂಭವಿಸಿದ ಭೂಕಂಪದಲ್ಲಿ 2,000ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.