ವಾಷಿಂಗ್ಟನ್: ಭಾರತದ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಉಗ್ರರ ಒಳನುಸುಳುವಿಕೆಯನ್ನು ಅಮೆರಿಕ ಖಂಡಿಸಿದೆ. ಅಲ್ಲದೆ 2003ರ ಕದನ ವಿರಾಮ ನಿಯಮಕ್ಕೆ ಬದ್ಧರಾಗುವ ಮೂಲಕ ಎಲ್‌ಒಸಿಯಲ್ಲಿ ಉದ್ವಿಗ್ನತೆಶಮನಗೊಳಿಸಲು ನೆರವಾಗಬೇಕಿದೆ ಎಂದು ಉಭಯ ದೇಶಗಳಿಗೆ ಕರೆ ನೀಡಿದೆ.

ಜಮ್ಮು ಮತ್ತು ಕಾಶ್ಮೀರದ ಬೆಳವಣಿಗೆಗಳನ್ನು ನಾವು ಬಹಳ ನಿಕಟವಾಗಿ ಗಮನಿಸುತ್ತಿದ್ದೇವೆ. ಈ ಪ್ರದೇಶದ ಬಗೆಗಿನ ನಮ್ಮ ನೀತಿ ಬದಲಾಗಿಲ್ಲ. 2003ರ ಕದನ ವಿರಾಮ ನಿಯಮಗಳಿಗೆ ಬದ್ಧರಾಗುವ ಮೂಲಕ ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ಉದ್ವಿಗ್ನತೆ ಶಮನಕ್ಕೆಕರೆ ನೀಡುತ್ತೇವೆ ಎಂದು ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ನೆಡ್ ಪ್ರಿನ್ಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದನ್ನೂ ಓದಿ:ದೇಶವನ್ನು ಮುನ್ನಡೆಸುತ್ತಿರುವ ಭಾರತ ಮೂಲದ ಅಮೆರಿಕನ್ನರು: ಬೈಡನ್ ಶ್ಲಾಘನೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ಈಗಿರುವ ಕದನ ವಿರಾಮ ನಿಯಮಗಳ ಎಲ್ಲ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಭಾರತ ಹಾಗೂ ಪಾಕಿಸ್ತಾನ ಒಪ್ಪಿಗೆ ಸೂಚಿಸಿತ್ತು. ಇದು ಉತ್ತಮವಾದ ಬೆಳವಣಿಗೆ ಎಂದು ಅಮೆರಿಕ ಸ್ವಾಗತಿಸಿದೆ.

ಕಾಶ್ಮೀರ ಹಾಗೂ ಇತರೆ ವಿವಾದಿತ ವಿಷಯಗಳಿಗೆ ಸಂಬಂಧಿಸಿದಂತೆ ಭಾರತ ಹಾಗೂ ಪಾಕಿಸ್ತಾನ ನಡುವಣ ನೇರ ಮಾತುಕತೆಯನ್ನು ಅಮೆರಿಕ ಸ್ವಾಗತಿಸುತ್ತದೆ ಎಂದು ನೆಡ್ ಪ್ರಿನ್ಸ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.