ಅಟ್ಲಾಂಟಾ: ಅಟ್ಲಾಂಟಾದ ಮೂರು ಪ್ರದೇಶಗಳಲ್ಲಿನ ಮಸಾಜ್ ಪಾರ್ಲರ್ಗಳ ಮೇಲೆ ದಾಳಿ ನಡೆಸಿ ಎಂಟು ಮಂದಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಬಂಧಿಸಲಾಗಿದ್ದ ಬಂದೂಕುಧಾರಿ, 21 ವರ್ಷದ ರಾಬರ್ಟ್ನ ವಿರುದ್ಧ ದೋಷಾರೋಪ ಹೊರಿಸಲಾಗಿದೆ.

ಗುಂಡಿನ ದಾಳಿ ಕುರಿತು ತನಿಖೆ ನಡೆಸುತ್ತಿರುವ ಅಧಿಕಾರಿಗಳು, ಅಮೆರಿಕದಲ್ಲಿ ಎರಡು ವರ್ಷಗಳ ಅವಧಿಯಲ್ಲಿ ನಡೆದ ಅತ್ಯಂತ ಭೀಕರ ಸಾಮೂಹಿಕ ಹತ್ಯೆಯಂತಹ ಕೃತ್ಯ ನಡೆಸಲು ರಾಬರ್ಟ್ಗೆ ಯಾವ ಪ್ರಚೋದನೆ ಇತ್ತು ಎಂಬುದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.

‘ಮಂಗಳವಾರ ನಡೆಸಿದ ದಾಳಿ ಒಂದು ಜನಾಂಗವನ್ನು ಗುರಿಯಾಗಿಸಿಕೊಂಡು ಮಾಡಿದ್ದಲ್ಲ’ ಎಂಬುದಾಗಿ ಪೊಲೀಸರಿಗೆ ಲಾಂಗ್ ಹೇಳಿದ್ದಾನೆ. ‘ತಾನೊಬ್ಬ ಲೈಂಗಿಕ ವ್ಯಸನಿ ಎಂದೂ ಹೇಳಿಕೊಂಡಿರುವ ಲಾಂಗ್, ಘಟನಾ ಸ್ಥಳದಲ್ಲಿ ಕಂಡು ಬಂದ ದೃಶ್ಯಗಳು ನನ್ನನ್ನು ಪ್ರಚೋದಿಸುವಂತಿದ್ದವು ಎಂದು ಹೇಳಿದ್ದಾಗಿ’ ಪೊಲೀಸರು ಹೇಳಿದರು.

ಆದರೆ, ಈ ಘಟನೆಯಲ್ಲಿ ಮೃತಪಟ್ಟ 8 ಜನರ ಪೈಕಿ ಆರು ಮಹಿಳೆಯರು ಏಷ್ಯಾದ ಮೂಲದವರು. ಹೀಗಾಗಿ, ಜನಾಂಗವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ ಎಂಬ ಆರೋಪಿಯ ಹೇಳಿಕೆಗಳ ಬಗ್ಗೆ ಸಂದೇಹ ಮೂಡುವಂತಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಅಟ್ಲಾಂಟಾದ ಮಸಾಜ್ ಪಾರ್ಲರ್ಗಳ ಮೇಲೆ ಗುಂಡಿನ ದಾಳಿ: ಎಂಟು ಮಂದಿ ಸಾವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.