ವಾಷಿಂಗ್ಟನ್: ರಷ್ಯಾ ಮತ್ತು ಚೀನಾ ವಿರುದ್ಧ ಮತ್ತಷ್ಟು ನಿರ್ಬಂಧ ಹೇರಲು ಅಮೆರಿಕ ಚಿಂತನೆ ನಡೆಸಿದೆ ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ.

ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಇರಾನ್ ಡ್ರೋನ್ ಅನ್ನು ರಷ್ಯಾ ಬಳಕೆ ಮಾಡಿರುವುದು ಅಮೆರಿಕದ ಆಕ್ರೋಶಕ್ಕೆ ಕಾರಣವಾಗಿದೆ.

ಉಕ್ರೇನ್ ವಿರುದ್ಧ ರಷ್ಯಾದ ಮಿಲಿಟರಿ ಕಾರ್ಯಾಚರಣೆಯಲ್ಲಿ ಇರಾನ್ ಡ್ರೋನ್ ಬಳಕೆ ಮಾಡಿರುವುದನ್ನು ಖಂಡಿಸುತ್ತೇವೆ ಎಂದು ಶ್ವೇತಭವನದ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.

ಈಗ ನಿರ್ಬಂಧ ಹೇರುವ ಮೂಲಕ ರಷ್ಯಾ ರಕ್ಷಣಾ ಕ್ಷೇತ್ರವನ್ನು ಗುರಿಯಾಗಿಸುವ ಇರಾದೆ ಹೊಂದಲಾಗಿದೆ.

ಮತ್ತೊಂದೆಡೆ ಫೆಸಿಫಿಕ್ ಸಾಗರದಲ್ಲಿ ಅಕ್ರಮ ಮೀನುಗಾರಿಕೆಗೆ ವಿರುದ್ಧವಾಗಿ ಚೀನಾದ ಸುಮಾರು 170 ಘಟಕಗಳಿಗೆ ನಿರ್ಬಂಧ ಹೇರಲು ಅಮೆರಿಕ ಮುಂದಾಗಿದೆ.

ಸಾಗರದಲ್ಲಿ ತನ್ನ ಪ್ರಾಬಲ್ಯ ವಿಸ್ತರಿಸಲು ಬೀಜಿಂಗ್ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿದೆ.

2016ರ ಗ್ಲೋಬಲ್ ಮ್ಯಾಗ್ನಿಟ್ಸ್ಕೈ ಕಾಯ್ದೆ ಅಡಿಯಲ್ಲಿ ಅಮೆರಿಕ ನಿರ್ಬಂಧವನ್ನು ವಿಧಿಸಲಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಮೊದಲು ವರದಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.