ನೈರೋಬಿ (ಎಪಿ): ಅಮೆರಿಕದ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯು ಇಥಿಯೋಪಿಯಾದ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಈ ಕುರಿತು ಇ ಮೇಲ್ ಮೂಲಕ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿರುವ ಅಮೆರಿಕದ ಸಂಸ್ಥೆಯು, ಆಹಾರದ ನೆರವನ್ನು ತಡೆಹಿಡಿದಿದ್ದು ‘ನೋವಿನ ಸಂಗತಿ’ ಎಂದು ಕರೆದಿದೆ. ‘ದೇಶದಾದ್ಯಂತ ಆಹಾರ ನೆರವಿನ ಹಂಚುವಿಕೆಯು ವ್ಯಾಪಕ ಪ್ರಮಾಣದಲ್ಲಿರದಿರುವುದು ಹಾಗೂ ಸಮನ್ವಯದ ಕೊರತೆಯ ಹಿನ್ನೆಲೆಯಲ್ಲಿ ಈ ಅಭಾವ ತಲೆದೋರಿದೆ’ ಎಂದು ಹೇಳಿದೆ.

ಅಮೆರಿಕ ಹಾಗೂ ವಿಶ್ವಸಂಸ್ಥೆಯು ಇಥಿಯೋಪಿಯಾಗೆ ಆಹಾರದ ನೆರವು ನೀಡುವುದಕ್ಕೆ ತಾತ್ಕಾಲಿಕ ತಡೆ ನೀಡಿದ ಬಳಿಕ ಹಸಿವಿನಿಂದ ನೂರಾರು ಜನ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸ್ಥಳೀಯ ಅಧಿಕಾರಿಗಳು ಹೇಳಿಕೆ ನೀಡಿದ ಕೆಲವು ದಿನಗಳ ಬೆನ್ನಲ್ಲೇ ಸಂಸ್ಥೆ ಈ ಪ್ರತಿಕ್ರಿಯೆ ನೀಡಿದೆ.

ಇಥಿಯೋಪಿಯಾಗೆ ತಾನು ನೀಡಿದ್ದ ಆಹಾರ ಸಾಮಗ್ರಿಗಳು ಕಳುವಾದ ಬಳಿಕ ಅಮೆರಿಕ ಹಾಗೂ ವಿಶ್ವಸಂಸ್ಥೆ ಆಹಾರದ ಪೂರೈಕೆಗೆ ತಾತ್ಕಾಲಿಕ ತಡೆ ನೀಡಿದ್ದವು.

ಈ ಕಳ್ಳತನದ ಕುರಿತು ಅಮೆರಿಕ ಅಧಿಕಾರಿಗಳು ಪ್ರತ್ಯೇಕವಾಗಿ ಪ್ರತಿಕ್ರಿಯೆ ನೀಡಿದ್ದು, ‘ಇದು ಯಾವುದೇ ದೇಶದಲ್ಲಿ ನಡೆದ ಅತ್ಯಂತ ಬೃಹತ್ ಕಳ್ಳತನವಾಗಿರಬಹುದು’ ಎಂದಿದ್ದಾರೆ.

ಆದರೆ, ಈ ಕಳ್ಳತನದಲ್ಲಿ ಯಾರು ಶಾಮೀಲಾಗಿದ್ದಾರೆ ಎಂದು ಅಮೆರಿಕವಾಗಲೀ ವಿಶ್ವಸಂಸ್ಥೆಯಾಗಲೀ ಇನ್ನೂ ಹೇಳಿಲ್ಲ. ದೇಣಿಗೆಗೆ ನೀಡಿದ್ದ ಆಹಾರ ಸಾಮಗ್ರಿಗಳು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿದ್ದಾಗ ಕಳುವಿನ ಪ್ರಕರಣಗ ಗಮನಕ್ಕೆ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.