ಒಟ್ಟಾವ: ಕೆನಡಾದ ಬ್ರಾಂಪ್ಟನ್ನಲ್ಲಿ ಹಿಂದೂ ಸಭಾ ಮಂದಿರದಲ್ಲಿ ನಡೆದಿದ್ದ ಹಲ್ಲೆ ಹಾಗೂ ಹಿಂಸಾತ್ಮಕ ಪ್ರತಿಭಟನೆ ಪ್ರಕರಣಕ್ಕೆ ಸಂಬಂಧಿಸಿ ಸಿಖ್ ಫಾರ್ ಜಸ್ಟಿಸ್ (ಎಸ್ಜೆಎಫ್) ಸಂಘಟನೆಯ ಕೆನಡಾ ಸಮನ್ವಯಕಾರ ಇಂದರ್ಜಿತ್ ಗೋಸಾಲ್ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ಧಾರೆ.

ಬ್ರಾಂಪ್ಟನ್ ನಿವಾಸಿಯಾದ 35 ವರ್ಷದ ಗೋಸಲ್ನನ್ನು ನವೆಂಬರ್ 8ರಂದು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ವಿಭಾಗೀಯ ಅಪರಾಧ ತನಿಖಾ ದಳ ಹಾಗೂ ಎಸ್ಐಟಿ ಜಂಟಿ ಕಾರ್ಯಾಚರಣೆ ನಡೆಸಿ ಗೋಸಾಲ್ನನ್ನು ಬಂಧಿಸಿವೆ ಎಂಬ ಪೊಲೀಸರ ಹೇಳಿಕೆ ಉಲ್ಲೇಖಿಸಿ ಟೊರಾಂಟೊ ಸ್ಟಾರ್ ವರದಿ ಮಾಡಿದೆ.

ಅಮೆರಿಕ ಮೂಲದ ಸಿಖ್ ಫಾರ್ ಜಸ್ಟಿಸ್ ಸಂಘಟನೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ.

ನವೆಂಬರ್ 3ರಂದು ಬ್ರಾಂಪ್ಟನ್ನ ಹಿಂದೂ ಸಭಾ ಮಂದಿರ ಆವರಣದಲ್ಲಿ ಖಾಲಿಸ್ತಾನ ಪರ ಪ್ರತಿಭಟನೆ ನಡೆದಿತ್ತು. ಈ ವೇಳೆ, ಪ್ರತಿಭಟನಕಾರರು ಹಾಗೂ ದೇವಸ್ಥಾನ ದಲ್ಲಿರುವವರ ಮಧ್ಯೆ ಸಂಘರ್ಷ ನಡೆದಿತ್ತ ಲ್ಲದೇ, ಬಡಿಗೆಗಳಿಂದ ಹೊಡೆದಾಡಿದ ದೃಶ್ಯಗಳಿರುವ ವಿಡಿಯೊ ಸಾಮಾಜಿಕ
ಜಾಲತಾಣಗಳಲ್ಲಿ ಹರಿದಾಡಿದ್ದವು.

ಇದರ ಬೆನ್ನಲ್ಲೇ, ಪೀಲ್ ಪ್ರಾದೇಶಿಕ ಪೊಲೀಸರು ತನಿಖೆ ಆರಂಭಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.