ಕೀವ್: ‘ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲು ನಿರ್ಧರಿಸುವ ಕ್ಷಣಕ್ಕಾಗಿ ವಿಶ್ವ ಕಾಯುತ್ತಾ ಕೂರುವಂತಿಲ್ಲ. ಸಂಭವನೀಯ ಅಣು ದಾಳಿ ಎದರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳುವುದು ಅತ್ಯಗತ್ಯ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.

ಶನಿವಾರ ಸುದ್ದಿಮಾಧ್ಯಮಗಳ ಸಂದರ್ಶನದಲ್ಲಿ ಮಾತನಾಡಿರುವ ಝೆಲೆನ್‌ಸ್ಕಿ, ರಷ್ಯಾದಿಂದ ಅಣುದಾಳಿಯ ಸಾಧ್ಯತೆ ಇದೆ ಎಂದು ಪುನರುಚ್ಚರಿಸಿದ್ದಾರೆ.

‘ರಷ್ಯನ್ನರು ನಮ್ಮ ವಿರುದ್ಧ ಯಾವುದೇ ಅಸ್ತ್ರ ಬಳಸಬಹುದು, ಅದುನನಗೆ ಮನದಟ್ಟಾಗಿದೆ. ಸದ್ಯ ನಮಗೆ ವಿಕಿರಣ ನಿವಾರಕ ಔಷಧ ಮತ್ತು ವಾಯುದಾಳಿಯಿಂದ ರಕ್ಷಣೆ ಪಡೆಯುವ ಆಶ್ರಯ ತಾಣಗಳ ಅಗತ್ಯವಿದೆ’ ಎಂದು ಅವರು ಹೇಳಿದರು.

ಯುದ್ಧಭೂಮಿಯಲ್ಲಿರಷ್ಯಾದ ಹಿನ್ನಡೆಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಾರ್ಯತಂತ್ರದ ಅಥವಾ ಕಡಿಮೆ ಪರಿಣಾಮದ ಅಣ್ವಸ್ತ್ರ ಬಳಸುವ ಅಪಾಯ ಹೆಚ್ಚಿದೆ ಎಂದುಸಿಐಎ ನಿರ್ದೇಶಕ ವಿಲಿಯಂ ಬರ್ನ್ಸ್ ಗುರುವಾರ ಹೇಳಿದ್ದರು.ಬರ್ನ್ಸ್ ಅವರ ಈ ಹೇಳಿಕೆ ಉಲ್ಲೇಖಿಸಿ, ‘ಪುಟಿನ್ ಒಡ್ಡಿರುವ ಬೆದರಿಕೆಯ ಬಗ್ಗೆ ಜಗತ್ತು ಚಿಂತಿಸಬೇಕು’ ಎಂದುಝೆಲೆನ್‌ಸ್ಕಿ ಶುಕ್ರವಾರ ಎಚ್ಚರಿಸಿದ್ದರು.

ಝೆಲೆನ್‌ಸ್ಕಿ ಅವರ ಸಂದರ್ಶನವನ್ನುಉಕ್ರೇನಿನ ಆರು ಸುದ್ದಿ ವೆಬ್‌ಸೈಟ್‌ಗಳು ಮತ್ತು ಅಧ್ಯಕ್ಷರ ಟೆಲಿಗ್ರಾಮ್ ಖಾತೆಯಲ್ಲಿ ಪ್ರಸಾರ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.