ಲಂಡನ್: ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ(Julian Assange)ತಮ್ಮ ದೀರ್ಘಕಾಲದ ಗೆಳತಿ ಸ್ಟೆಲ್ಲಾ ಮೋರಿಸ್ (Stella Moris) ಅವರನ್ನು ಬ್ರಿಟಿಷ್ ಜೈಲಿನಲ್ಲಿ ಮದುವೆಯಾದರು.

ಲಂಡನ್ ಪೊಲೀಸರ ಭದ್ರತೆಯಲ್ಲಿ ಬೆಲ್ಮಾರ್ಶ್ ಸೆರೆಮನೆ ಹಾಲ್ನಲ್ಲಿ ಅಸ್ಸಾಂಜೆ ಮತ್ತು ಸ್ಟೆಲ್ಲಾ ಪರಸ್ಪರ ಉಂಗುರ ಬದಲಾಯಿಸಿಕೊಂಡುಬುಧವಾರ ವಿವಾಹವಾಗಿದ್ದಾರೆ. ಈ ಸಂದರ್ಭದಲ್ಲಿಇಬ್ಬರು ಸಾಕ್ಷಿಗಳು, ಜೈಲು ಅಧಿಕಾರಿಗಳು ಸೇರಿದಂತೆ 8 ಜನ ಹಾಜರಿದ್ದರು.

ಮದುವೆಯ ಬಳಿಕ ಜೈಲಿನಿಂದ ಹೊರ ಬಂದು ಮಾಧ್ಯಮಗಳ ಜೊತೆ ಮಾತನಾಡಿದಸ್ಟೆಲ್ಲಾ, ‘ನನಗೆ ಸಂತೋಷದ ಜೊತೆಗೆ ದುಃಖವೂ ಆಗುತ್ತಿದೆ. ಈ ಸಮಯದಲ್ಲಿ ಅಸ್ಸಾಂಜೆ ಹೊರಗಡೆ ಇರಬೇಕಿತ್ತು. ಅವರಿಗಾಗಿ ಕಾಯುತ್ತೇನೆ ಎಂದು ಹೇಳಿದ್ದಾರೆ.

2015ರಿಂದ ಅಸ್ಸಾಂಜೆ ಮತ್ತು ಸ್ಟೆಲ್ಲಾ ಸಹ ಜೀವನ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅವರು ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. 2019ರಿಂದ ಅವರು ಲಂಡನ್ ಜೈಲಿನಲ್ಲಿ ಇದ್ದಾರೆ. ವೃತ್ತಿಯಲ್ಲಿ ವಕೀಲೆಯಾಗಿರುವ ಸ್ಟೆಲ್ಲಾ ವಿಕಿಲೀಕ್ಸ್ ಕಂಪನಿಯ ಲೀಗಲ್ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ.

ವಿವಿಧ ದೇಶಗಳಿಗೆ ಸಂಬಂಧಿಸಿದಂತೆ ರಾಜತಾಂತ್ರಿಕ ಮತ್ತು ರಹಸ್ಯ ಮಿಲಿಟರಿ ದಾಖಲೆಗಳ ಸೋರಿಕೆಯ ಆರೋಪದಡಿಯಲ್ಲಿ ಅಸ್ಸಾಂಜೆ ಅವರನ್ನು ಜೈಲಿನಲ್ಲಿ ಇರಿಸಲಾಗಿದೆ. ಅಮೆರಿಕ ಇವರ ಮೇಲೆ 18 ಪ್ರಕರಣಗಳನ್ನು ದಾಖಲಿಸಿದ್ದು ವಿಚಾರಣೆಗಾಗಿ ತಮಗೆಹಸ್ತಾಂತರಿಸಬೇಕು ಎಂದು ಬ್ರಿಟನ್ ಮೇಲೆ ಒತ್ತಡ ಹಾಕುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.