ವಾಷಿಂಗ್ಟನ್: ಅಫ್ಗಾನಿಸ್ತಾನದಿಂದ 20 ವರ್ಷಗಳ ಯುದ್ಧವನ್ನು ಕೊನೆಗೊಳಿಸಿ ಸೈನ್ಯವನ್ನು ಹಿಂತೆಗೆದುಕೊಂಡಿರುವುದು ಅತ್ಯುತ್ತಮ ಮತ್ತು ಸರಿಯಾದ ನಿರ್ಧಾರ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಮರ್ಥಿಸಿಕೊಂಡಿದ್ದಾರೆ.

ಮಂಗಳವಾರದಂದು ಅಮೆರಿಕದ ಕೊನೆಯ ಯುದ್ಧ ವಿಮಾನವು ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರುವುದರೊಂದಿಗೆ 2001ರಿಂದ ಅಫ್ಗಾನಿಸ್ತಾನದಲ್ಲಿ ಅಮೆರಿಕವು ನಡೆಸುತ್ತಿದ್ದ ಎರಡು ದಶಕಗಳ ಯುದ್ಧವು ಕೊನೆಗೊಂಡಿದೆ.

ಇದನ್ನೂ ಓದಿ:ಅಫ್ಗಾನಿಸ್ತಾನದಲ್ಲಿ ಸಂಘರ್ಷ: ಯುದ್ಧವಿಮಾನ ಧ್ವಂಸಗೊಳಿಸಿದ ಅಮೆರಿಕ

'ಅಮೆರಿಕದ ಪ್ರಮುಖ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಯುದ್ಧದಲ್ಲಿ ಮುಂದುವರಿಯುವುದರಲ್ಲಿ ಯಾವುದೇ ಅರ್ಥವಿಲ್ಲ' ಎಂದು ಬೈಡನ್ ಹೇಳಿದ್ದಾರೆ.

'ನಾನು ನನ್ನ ಹೃದಯಾಳದಿಂದ ಹೇಳುತ್ತಿದ್ದೇನೆ. ಇದು ಸರಿಯಾದ, ವಿವೇಚನೆಯ ನಿರ್ಧಾರ. ಅಮೆರಿಕದ ಪಾಲಿಗೆ ಅತ್ಯುತ್ತಮ ನಿರ್ಣಯ ಎಂದು ಭಾವಿಸುತ್ತೇನೆ' ಎಂದು ಮಂಗಳವಾರ ಶ್ವೇತಭವನದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣದಲ್ಲಿ ಹೇಳಿದ್ದಾರೆ.

'ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಾಗ ಈ ಯುದ್ಧವನ್ನು ಕೊನೆಗೊಳಿಸುವುದಾಗಿ ಅಮೆರಿಕದ ಜನರಿಗೆ ಭರವಸೆಯನ್ನು ಕೊಟ್ಟಿದ್ದೇನೆ. ನಾನು ಆ ಬದ್ಧತೆಯನ್ನು ಗೌರವಿಸುತ್ತೇನೆ. ಇದು ಅಮೆರಿಕದ ಜನರೊಂದಿಗೆ ಪ್ರಮಾಣಿಕವಾಗಿರುವ ಸಮಯ. ಇನ್ನು ಮುಂದೆ ಅಫ್ಗಾನಿಸ್ತಾನದಲ್ಲಿ ಮುಕ್ತ ಕಾರ್ಯಾಚರಣೆಯಲ್ಲಿ ನಾವು ಯಾವುದೇ ಸ್ಪಷ್ಟವಾದ ಉದ್ದೇಶವನ್ನು ಹೊಂದಿಲ್ಲ' ಎಂದು ಹೇಳಿದ್ದಾರೆ.

'ಅಫ್ಗನ್‌ನಲ್ಲಿ 20 ವರ್ಷಗಳ ನಂತರ ಅಮೆರಿಕದ ಇನ್ನೊಂದು ತಲೆಮಾರಿನ ಗಂಡು ಹಾಗೂ ಹೆಣ್ಣು ಮಕ್ಕಳನ್ನು ಯುದ್ಧಕ್ಕೆ ಕಳುಹಿಸುವುದನ್ನು ನಿರಾಕರಿಸಿದ್ದೇನೆ. ಬಹಳ ಹಿಂದೆ ಈ ಯುದ್ಧ ಕೊನೆಗೊಳ್ಳಬೇಕಿತ್ತು' ಎಂದು ಹೇಳಿದ್ದಾರೆ.

'ಜಗತ್ತು ಬದಲಾಗುತ್ತಿದ್ದು, ಅಮೆರಿಕ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಚೀನಾದಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದ್ದೇವೆ. ರಷ್ಯಾದಿಂದಲೂ ಅನೇಕ ಕ್ಷೇತ್ರಗಳಲ್ಲಿ ಸ್ಪರ್ಧೆ ಎದುರಾಗಿದೆ. ಸೈಬರ್ ದಾಳಿ ಮತ್ತು ಪರಮಾಣು ಪ್ರಸರಣದ ಸವಾಲುಗಳು ನಮ್ಮ ಮುಂದಿದೆ' ಎಂದು ಹೇಳಿದ್ದಾರೆ.

ಏತನ್ಮಧ್ಯೆ ಭಯೋತ್ಪಾದನೆ ಬೆದರಿಕೆಯು ಕೇವಲ ಅಫ್ಗನ್‌ಗಷ್ಟೇ ಸೀಮಿತ ಅಲ್ಲ. ಜಗತ್ತಿನಾದ್ಯಂತ ಹರಡಿದೆ ಎಂದವರು ಸೇನೆಯ ನಿರ್ಗಮನವನ್ನು ಸಮರ್ಥಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.