ಬೆಂಗಳೂರು: ಕೊರೊನಾವೈರಸ್ ಸಾಂಕ್ರಾಮಿಕದಿಂದ ಕಳೆದ ಎರಡು ವರ್ಷಗಳಲ್ಲಿ ಜಗತ್ತಿನಾದ್ಯಂತ ಕಾಂಡೊಮ್‌ಗಳ ಮಾರಾಟದಲ್ಲಿ ಶೇ 40 ರಷ್ಟು ಕುಸಿತ ಕಂಡಿರುವುದು ವರದಿಯಾಗಿದೆ.

ಈ ಬಗ್ಗೆ ಪ್ರಪಂಚದ ಅತಿದೊಡ್ಡ ಫಿನಾನ್ಶಿಯಲ್ ನ್ಯೂಸ್‌ಪೇಪರ್ ‘ನಿಕ್ಕಿ ಏಷ್ಯಾ’ ವರದಿ ಮಾಡಿದೆ.

ಸಾಂಕ್ರಾಮಿಕದಿಂದ ಜನರು ಮನೆಯಲ್ಲಿ ಇರುವ ಪರಿಸ್ಥಿತಿ ನಿರ್ಮಾಣವಾಯಿತು. ಈ ವೇಳೆ ಲೈಂಗಿಕ ಚಟುವಟಿಕೆ ಹೆಚ್ಚಾಗಲಿಲ್ಲ ಎಂಬುದನ್ನು ಕಾಂಡೊಮ್ ಮಾರಾಟಗಳ ಕುಸಿತ ಹೇಳುತ್ತದೆ ಎಂದು ಕಾಂಡೊಮ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಲೇಷಿಯಾ ಮೂಲದ ‘ಕರೆಕ್ಸ್’ ಕಂಪನಿಯ ಸಿಇಒಗೊ ಮಿಯಾ ಕಿಯಾತ್ ಹೇಳಿದ್ದಾರೆ.

‘ಹೋಟೆಲ್, ಲಾಡ್ಜ್, ರೆಸಾರ್ಟ್, ಮನರಂಜನಾ ತಾಣಗಳು ಸಾಂಕ್ರಾಮಿಕದ ಅವಧಿಯಲ್ಲಿ ಬಹುತೇಕ ಮುಚ್ಚಿದ್ದ ಪರಿಸ್ಥಿತಿಯನ್ನೇ ಅನುಭವಿಸಿದ್ದವು. ಇದರಿಂದ ಕಾಂಡೊಮ್‌ಗಳ ಮಾರಾಟ ಗಣನೀಯವಾಗಿ ಕುಸಿತ ಕಂಡಿದೆ’ ಎಂದು ಅವರು ಹೇಳಿದ್ದಾರೆ.

ವಿಚಿತ್ರವೆಂದರೆ ಈ ಬೆಳವಣಿಗೆಯಿಂದ ಕರೆಕ್ಸ್ ಕಂಪನಿ ಕಾಂಡೊಮ್‌ಗಳ ಕಡೆಗೆ ಗಮನ ಕಡಿಮೆ ಮಾಡಿ ಕೈಗವಸುಗಳ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಘೋಷಿಸಿದೆ. ಇದಕ್ಕೂ ಮುನ್ನ ಲಾಕ್‌ಡೌನ್‌ನಿಂದ ಕಾಂಡೊಮ್‌ಗಳ ಮಾರಾಟ ಗಣನೀಯ ಬೆಳವಣಿಗೆ ಆಗಬಹುದು ಎಂದು ಆ ಕಂಪನಿ ಅಂದಾಜಿಸಿತ್ತು.

ಕರೆಕ್ಸ್ ಕಂಪನಿ ವರ್ಷಕ್ಕೆ 500 ಕೋಟಿ ಕಾಂಡೊಮ್‌ಗಳನ್ನು ಉತ್ಪಾದಿಸಿ 100 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತದೆ.

ನಟ ಸಿದ್ಧಾರ್ಥ್ ಮೇಲೆ ಕೆಂಡ ಕಾರಿದ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ: ಏನಿದು ವಿವಾದ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.