ಹಿರೋಶಿಮಾ: ಅಮೆರಿಕದ ಮೊದಲ ಅಣುಬಾಂಬ್ ದಾಳಿಗೆ ತತ್ತರಿಸಿ ಹೋದ ಜಪಾನ್ನ ನಗರ ಹಿರೋಶಿಮಾದಲ್ಲಿ ಜಿ–7 ರಾಷ್ಟ್ರಗಳ ಶೃಂಗಸಭೆಯು ಶುಕ್ರವಾರದಿಂದ ಮೂರು ದಿನ ನಡೆಯಲಿದ್ದು, ರಷ್ಯಾವು ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧವೇ ಈ ಸಭೆಯ ಪ್ರಮುಖ ಚರ್ಚಾ ವಿಷಯವಾಗಿರಲಿದೆ.

‘ಉಕ್ರೇನ್ ಯುದ್ಧದ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಯಾವೆಲ್ಲಾ ರೀತಿಯಲ್ಲಿ ರಷ್ಯಾ ಮೇಲೆ ನಿರ್ಬಂಧ ಹೇರಬೇಕು ಮತ್ತು ಜಿ–7 ರಾಷ್ಟ್ರಗಳು ಈ ಕುರಿತು ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದರ ಕುರಿತೂ ಮಾತುಕತೆ ನಡೆಯಲಿದೆ’ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜ್ಯಾಕ್ ಸುಲ್ಲಿವಾನ್ ಅವರು ಪತ್ರಕರ್ತರಿಗೆ ತಿಳಿಸಿದರು.

ಚೀನಾ ಪ್ರಾಲಬ್ಯ

ಸಭೆಯಲ್ಲಿ ಚೀನಾ ಪ್ರಾಲಬ್ಯದ ಕುರಿತು ಹಾಗೂ ಚೀನಾ ಪ್ರಾಲಬ್ಯವನ್ನು ಹೇಗೆಲ್ಲಾ ತಡೆಯಬೇಕು ಎನ್ನುವ ಸಮಾಲೋಚನೆಯೂ ನಡೆಯಲಿದೆ.

ಹಿರೋಶಿಮಾ ಸುತ್ತಲೂ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ವಿವಿಧೆಡೆ ಸಾವಿರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಶೃಂಗಸಭೆಯ ಮುನ್ನಾ ದಿನವಾದ ಗುರುವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಜಪಾನ್ಗೆ ಬಂದಿಳಿದರು.

ಭಾರತದ ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾ, ಬ್ರೆಜಿಲ್, ಇಂಡೋನೇಷ್ಯಾ ಮತ್ತು ದಕ್ಷಿಣ ಕೊರಿಯಾದ ನಾಯಕರಿಗೆ ಈ ಶೃಂಗಸಭೆಗೆ ವಿಶೇಷ ಆಹ್ವಾನ ನೀಡಲಾಗಿದೆ. ಉಕ್ರೇನ್ನ ಅಧ್ಯಕ್ಷ ವೊಲಿಡಿಮಿರ್ ಝೆಲನ್ಸ್ಕಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.