ವಾಷಿಂಗ್ಟನ್: ಸಿಂಗಾಪುರ್‌ನಲ್ಲಿರುವ ವಿದೇಶಿ ಕಾರ್ಮಿಕರಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು ಸೋಮವಾರ 486 ಹೊಸ ಪ್ರಕರಣಗಳು ದಾಖಲಾಗಿವೆ.ಇಲ್ಲಿಯವರೆಗೆ ಸೋಂಕು ತಗುಲಿದವರ ಸಂಖ್ಯೆ 23,822 ಆಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಜರ್ಮನಿಯಲ್ಲಿ ಒಂದೇ ದಿನ 357 ಪ್ರಕರಣಗಳು ಪತ್ತೆಯಾಗಿದ್ದು ಕೋವಿಡ್ ರೋಗಿಗಳ ಸಂಖ್ಯೆ 169575 ಆಗಿದೆ. ಕಳೆದ 24 ಗಂಟೆಗಳಲ್ಲಿ 22 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 7,417 ಆಗಿದೆ ಎಂದು ರಾಬರ್ಟ್ ಕೋಚ್ ಇನ್ಸಿಟ್ಯೂಟ್ ವರದಿ ಹೇಳಿದೆ.

ಜಾನ್ ಹಾಪ್ಕಿನ್ಸ್ ಕೊರೊನಾವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ ಜಗತ್ತಿನಾದ್ಯಂತ ವರದಿಯಾದ ಸೋಂಕಿತರ ಸಂಖ್ಯೆ 4,142,970 ಆಗಿದೆ, ಅದೇ ವೇಳೆ ಸಾವಿಗೀಡಾದವರ ಸಂಖ್ಯೆ 2,83,526 ಕ್ಕೇರಿದೆ.

ಅಮೆರಿಕದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು ಕಳೆದ 24 ಗಂಟೆಯಲ್ಲಿ 20 ಸಾವಿರ ಜನರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

ಅಮೆರಿಕದಲ್ಲಿ 13.6 ಲಕ್ಷ ಜನರು ಕೋವಿಡ್–19 ಸೋಂಕಿನಿಂದ ಬಳಲುತ್ತಿದ್ದಾರೆ. ಇಲ್ಲಿಯವರೆಗೂ 80,574 ಜನರು ಮೃತಪಟ್ಟಿದ್ದಾರೆ. ಸುಮಾರು 2 ಲಕ್ಷಕ್ಕೂ ಹೆಚ್ಚು ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಾಗತಿಕವಾಗಿ ಕೊರೊನಾ ವೈರಸ್ ಸೋಂಕು 187 ರಾಷ್ಟ್ರಗಳಿಗೆ ಹರಡಿದೆ. ಇಲ್ಲಿಯವರೆಗೂ 41 ಲಕ್ಷ ಜನರಲ್ಲಿ ಸೋಂಕು ದೃಢಪಟ್ಟಿದೆ. 2.10 ಲಕ್ಷ ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ. ಅಮೆರಿಕದಲ್ಲೇಹೆಚ್ಚು ಜನರು ಬಲಿಯಾಗಿದ್ದಾರೆ.

ಇದನ್ನೂ ಓದಿ: ಇವಾಂಕಾ ಟ್ರಂಪ್ ಆಪ್ತ ಸಹಾಯಕಿಗೂ ಕೊರೊನಾ ವೈರಸ್ ಸೋಂಕು

ಅಮೆರಿಕ ಹೊರತುಪಡಿಸಿದರೆ, ಸ್ಪೇನ್, ಇಟಲಿ, ಇಂಗ್ಲೆಂಡ್, ರಷ್ಯಾದಲ್ಲಿ ಸೋಂಕಿತರ ಸಂಖ್ಯೆ 2 ಲಕ್ಷ ದಾಟಿದೆ. ಫ್ರಾನ್ಸ್, ಬ್ರೆಜಿಲ್, ಜರ್ಮನಿ, ಟರ್ಕಿ, ಇರಾನ್‌ನಲ್ಲಿ ಸೋಂಕಿತರ ಸಂಖ್ಯೆ ಒಂದುಲಕ್ಷದ ಗಡಿ ದಾಟಿದೆ. ಜಗತ್ತಿಗೆ ಕೊರೊನಾ ವೈರಸ್ ಹರಡಿದಚೀನಾದಲ್ಲಿ 82ಸಾವಿರ ಸೋಂಕಿತರ ಪೈಕಿ 4 ಸಾವಿರ ಜನರ ಮೃತಪಟ್ಟಿದ್ದಾರೆ. 78 ಸಾವಿರ ಜನರು ಗುಣಮುಖರಾಗಿದ್ದಾರೆ ಎಮದು ಚೀನಾ ಹೇಳಿದೆ.

ಭಾರತದಲ್ಲಿ ಸೋಂಕಿತರ ಸಂಖ್ಯೆ 67 ಸಾವಿರ ದಾಟಿದ್ದು ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಜಪಾನ್ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಲ್ಲಿಯವರೆಗೆ 3,000 ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶ್ವೇತಭವನದ ಮೂವರು ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಮೈಕ್ ಪೆನ್ಸ್ ಸೇರಿದಂತೆ ಶ್ವೇತಭವನದ ಎಲ್ಲರೂ ಪ್ರತಿ ದಿನ ಕೊರೊನಾ ಪತ್ತೆ ಪರೀಕ್ಷೆಗೆ ಒಳಪಡುತ್ತಿದ್ದಾರೆ. ಸೋಂಕಿತ ಸಿಬ್ಬಂದಿಗೆ ಆಪ್ತರಾಗಿದ್ದ ಅಧಿಕಾರಿಗಳನ್ನು ಮತ್ತು ಅವರ ಕುಟುಂಬದವರನ್ನು ಕ್ವಾರಂಟೈನ್ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.