ಟೆಹರಾನ್ (ಇರಾನ್): ವಿಶ್ವದ ಅತಿ ಕೊಳಕು ಮನುಷ್ಯನೆಂದೇ ಕರೆಯಲಾಗುತ್ತಿದ್ದ ಇರಾನಿನ ಅಮೌ ಹಾಜಿ (94) ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.

ಫಾರ್ಸ್ನ ದಕ್ಷಿಣ ಪ್ರಾಂತ್ಯದ ದೇಜ್ಗ ಗ್ರಾಮದಲ್ಲಿ ಇವರು ಮೃತಪಟ್ಟಿದ್ದಾರೆ. ದಶಕಗಳಿಂದ ಸ್ನಾನ ಮಾಡದ ಕಾರಣ ‘ವಿಶ್ವದ ಅತಿ ಕೊಳಕು ಮನುಷ್ಯ’ ಎಂದೇ ಇವರು ಹೆಸರು ಪಡೆದಿದ್ದರು.

ರೋಗ ಬರುತ್ತದೆ ಎಂಬ ಹೆದರಿಕೆಯಿಂದ ಅಮೌ ಅವರು 50 ವರ್ಷಗಳಿಂದ ಸ್ನಾನ ಮಾಡುವುದನ್ನು ತಪ್ಪಿಸುತ್ತಿದ್ದರು ಎನ್ನಲಾಗಿದೆ. ಆದರೆ ಮೊದಲ ಬಾರಿಗೆ ಕೆಲವು ತಿಂಗಳ ಹಿಂದೆ ಗ್ರಾಮಸ್ಥರು ಸ್ನಾನಗೃಹಕ್ಕೆ ಕರೆದೊಯ್ದು ಸ್ನಾನ ಮಾಡಿಸಿದ್ದರು ಎಂದು ಇರ್ನಾ (ಐಆರ್ಎನ್ಎ) ವರದಿ ಮಾಡಿದೆ.

ಈ ವ್ಯಕ್ತಿಯ ಜೀವನ ಕುರಿತಂತೆ2013ರಲ್ಲಿ ‘ಅಮೌ ಹಾಜಿಯ ವಿಚಿತ್ರ ಬದುಕು’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಲಾಗಿತ್ತು ಎಂದು ಇರಾನ್ನ ಮಾಧ್ಯಮಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.