ಒಂದು ವಾರದಿಂದ ಪೆಕರ ಕಾಣಿಸ್ತಾ ಇಲ್ಲ ಯಾಕೆ? ಎಂದು ಸ್ನೇಹಿತರೆಲ್ಲಾ ಕಸಿವಿಸಿಗೊಂಡಿದ್ದರು. ರಾಜ್ಯದಲ್ಲಿ ಚುನಾವಣೆಯೂ ಮುಗಿದು ಹೋಯಿತು. ಪಕ್ಕದ ರಾಜ್ಯಗಳಲ್ಲೂ ಮತದಾನ ಮುಗಿಯಿತು. ಆದರೂ ಪೆಕರ ಕಾಣಿಸ್ತಾನೇ ಇಲ್ವಲ್ಲಾ? ಗುವಾಹಟಿ ಎಕ್ಸ್ಪ್ರೆಸ್ ರೈಲಿನಲ್ಲಿ ಏನಾದರೂ ಪ್ರಯಾಣಿಸಿದನಾ? ಸ್ನೇಹಿತರು ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಯೋಚಿಸುತ್ತಿದ್ದಂತೆಯೇ ದೂರದಲ್ಲಿ ಪೆಕರ ನಡೆದುಕೊಂಡು ಬರುವುದು ಕಾಣಿಸಿತು. ಬಹಳ ಸುಸ್ತಾದವನಂತೆ, ತಳ್ಳಾಡಿಕೊಂಡು ಬರುತ್ತಿದ್ದ ಪೆಕರನನ್ನು ಕಂಡು ಎಲ್ಲರೂ ಅಯ್ಯೋ ಎಂದು ಲೊಚಗುಟ್ಟಿದರು. ಪಾಪ, ಭಯಂಕರ ಬಿಸಿಲಿನಿಂದಾಗಿ ಪೆಕರ ಬಳಲಿಬೆಂಡಾಗಿ ಬಿಟ್ಟಿದ್ದಾನೆ ಎಂದು ಕೆಲವರಿಗೆ ಸಿಂಪಥಿ. ಲೋಡ್ಶೆಡ್ಡಿಂಗ್ ಇದೆ, ವಿದ್ಯುತ್ ಇಲ್ಲ, ಆದರೂ ವಿದ್ಯುತ್ಕಂಬ ಏರಿ ಶಾಕ್ ಹೊಡೆಸಿಕೊಂಡವನ ಹಾಗೆ ಕಾಣ್ತಾ ಇದ್ದಾನಲ್ಲಾ ಎಂದು ಮತ್ತೊಬ್ಬ ಸ್ನೇಹಿತ ಕನಿಕರಿಸಿದ.

‘ಏನಯ್ಯಾ ಪೆಕರ, ಒಂದು ವಾರದಿಂದ ಕಾಣ್ತಾ ಇರಲಿಲ್ಲವಲ್ಲಾ? ಏನ್ ಸಮಾಚಾರ?’ ಎಂದು ಸ್ನೇಹಿತರು ಪ್ರಶ್ನಿಸಿದರು.
‘ಏನಿಲ್ಲಾ, ಮನೆ ನವೀಕರಣ ಮಾಡಿಸ್ತಾ ಇದ್ದೆ’- ಎಂದು ಪೆಕರ ಕೂಲಾಗಿ ಉತ್ತರಿಸಿದ.

ಎಲ್ಲರೂ ಒಮ್ಮೆಲೇ ಬೆಚ್ಚಿಬಿದ್ದರು. ‘ಮನೆ ಚೆನ್ನಾಗಿಯೇ ಇತ್ತಲ್ಲಪ್ಪ. ಸುಣ್ಣ ಬಣ್ಣ ಫಸ್ಟ್ಕ್ಲಾಸಾಗಿತ್ತು. ಹೊಸ ಮನೆ ಬೇರೆ, ನವೀಕರಣ ಏನ್ ಮತ್ ಯಾಕ್ ಮಾಡಿಸ್ದೆ?’ - ಎಲ್ಲರೂ ಒಮ್ಮೆಲೇ ಅಚ್ಚರಿಯಿಂದ ಪ್ರಶ್ನಿಸಿದರು.

‘ಮನೆಯಲ್ಲಿ ಸ್ನಾನಗೃಹ ಸೋರ್ತಾ ಇತ್ತು. ಶೌಚಾಲಯ, ಅಡುಗೆ ಕೋಣೆ ನವೀಕರಣ ಮಾಡಿಸಿದೆ. ಶೌಚಾಲಯದಲ್ಲಿ ಅಮೆರಿಕನ್ ‘ಕಮೋಡ್’ ಹಾಕಿಸ್ದೆ, ನೀರು ಪೂರೈಕೆ ಕೊಳವೆಗಳನ್ನು ಚೇಂಜ್ ಮಾಡಿಸ್ದೆ. ಮಹಡಿಯಲ್ಲಿ ನೀರು ಸೋರದಂತೆ ಸಿಮೆಂಟ್ ಲೇಪ ಹಾಕಿಸ್ದೆ.ಇಡೀ ಮನೆಗೆ ಹೊಸದಾಗಿ ಕಲರ್ ಮಾಡಿಸ್ದೆ, ಸ್ಟಡೀ ರೂಂ ಚಿಕ್ಕದಾಗಿತ್ತು, ಗೋಡೆ ಒಡೆದು ವಿಶಾಲ ಕೊಠಡಿ ಮಾಡ್ದೆ, ಜನ ನನ್ನನ್ನು ನೋಡಲು ಬರ್ತಾರೆ, ಅವರಿಗೆ ತಗಡಿನ ಶೀಟ್ ಬಳಸಿ ಶೆಡ್ ಮಾಡ್ದೆ, ಮನೆ ಸುತ್ತ ಕಾಂಪೌಂಡ್ ಚಿಕ್ಕದಾಯಿತು. ರೋಡ್ನಲ್ಲಿ ಹೋಗೋವರಿಗೆಲ್ಲಾ ಒಳಗೆ ಏನ್ ನಡೀತಿದೆ ಅಂತ ಗೊತ್ತಾಗುತ್ತೆ. ಅದಕ್ಕೆ ಗೋಡೆ ಎತ್ತರ ಮಾಡಿಸಿದೆ. ಮನೆ ಒಳಗೆ ಏನ್ ನಡೀತಿದೆ ಅನ್ನೋದು ಯಾರಿಗೂ ಗೊತ್ತಾಗಬಾರ್ದು. ಆ ತರಹ ಮಾಡಿಸಿದ್ದೀನಿ. ಸ್ವಲ್ಪ ಗಾರ್ಡನ್ ಕಾಮಗಾರಿ...’ ಪೆಕರ ಪಟ್ಟಿಯನ್ನು ಬೆಳೆಸುತ್ತಲೇ ಹೋದ.

‘ಹೋಲ್ಡಾನ್...ಹೋಲ್ಡಾನ್...ಏನಯ್ಯಾ ಇದು, ಬ್ರೇಕ್ ಇಲ್ಲದ ಬಸ್ ತರಹ ಹೋಗ್ತಾನೇ ಇದೀಯಾ? ನಿನ್ನ ಕತೆ ಕೇಳಿದ್ರೆ ಲೋಕೋಪಯೋಗಿ ಸಚಿವರು ಮಾಡಿದ ಧಾಂ..ಧೂಂ.. ಕಣ್ಮುಂದೆ ಬರ್ತಾ ಇದೆ’ ಎಂದು ಸ್ನೇಹಿತನೊಬ್ಬ ಹೇಳಿದ.

‘ನಮ್ಮ ಲೋಕೋಪಯೋಗಿ ಸಚಿವರ ಮನೇಲಿ ಪಾಪ, ‘ಕಮೋಡ್’ ಸರಿಯಿರಲಿಲ್ಲವಂತೆ, ಅದಕ್ಕೆ ಸರ್ಕಾರಿ ಬಂಗಲೆಗೆ ಮುಕ್ಕಾಲುಕೋಟಿ ರೂಪಾಯಿ ಸುರಿದು ’ಸರ್ಕಾರದ ಆಸ್ತಿ’ ಕಾಪಾಡಿದ್ದಾರಂತೆ! ಎಂಥಾ ತ್ಯಾಗ?! ಎಂಥಾ ಬ್ರಿಲಿಯಂಟ್ ಮೈಂಡು!’ ಮತ್ತೊಬ್ಬ ಲೊಚಗುಟ್ಟಿದ.
‘ಮುಕ್ಕಾಲು ಕೋಟಿ ಅಂದ್ರೆ, ಯಾರಪ್ಪನ ಮನೆ ದುಡ್ಡು? ಜನಸಾಮಾನ್ಯರ ತೆರಿಗೆ ಹಣಾನಾ ಈ ರೀತಿ ತಿಂದು ಹಾಕಿ, ಹುರಿದುಮುಕ್ಕಿದ್ರೆ ಇದನ್ನು ದೇಶ ಸೇವೆ ಅಂತಾರಾ? ಮುಕ್ಕಾಲು ಕೋಟಿ ಹಣದಲ್ಲಿ ಒಂದು ಹೊಸ ಮನೆಯನ್ನೇ ಖರೀದಿ ಮಾಡಬಹುದು, ಬಡವರಿಗೆ ಇಪ್ಪತ್ತೈದು ಜನತಾಮನೆ ಕಟ್ಟಿಸಿಕೊಡಬಹುದಿತ್ತು’

‘ರಾಜ್ಯದ ೧೬೪ ತಾಲೂಕುಗಳಲ್ಲಿ ಬರ ತಾಂಡವವಾಡ್ತಾ ಇದೆ. ಕುಡಿಯುವ ನೀರಿಲ್ಲದೆ ಜನ ಪರದಾಡ್ತಾ ಇದಾರೆ. ಇಂಥಾ ಸಮಯದಲ್ಲಿ ಲೋಕೋಪಯೋಗಿ ಸಚಿವರಿಗೆ ‘ಕಮೋಡ್’ ಇಲ್ಲದ್ದೇ ಮೋಸ್ಟ್ ಅರ್ಜೆಂಟ್ ಸಮಸ್ಯೆಯಾಯ್ತೇ? ಎಂದು ಹಿಸ್ ಎಕ್ಸ್ಲೆನ್ಸಿ ಗವರ್ನರ್ ಸಾಹೇಬರೇ ಗರಂ ಆಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡದ್ದು ಗೊತ್ತಿಲ್ವಾ?’

‘ಅಷ್ಟು ವಯಸ್ಸಾದವರಿಗೇ ಮೈಯೆಲ್ಲಾ ಉರೀತಿರಬೇಕಾದರೆ, ನಮ್ಮಂಥ ಬಿಸಿ ರಕ್ತದ ತರುಣರ ರಕ್ತ ಕೊತಕೊತ ಕುದಿಯಬೇಡವೇ?’ ಪೆಕರನ ಸ್ನೇಹಿತರು ಆವೇಶದಿಂದ ಪಾಯಿಂಟ್ ಮೇಲೆ ಪಾಯಿಂಟ್ ಹಾಕತೊಡಗಿದರು.

ಸಚಿವರಿಗೆ ಬೇಕಂತೆ ಸರ್ಕಾರಿ ಬಂಗಲೆ
ನವೀಕರಣ ಅನ್ನೋದು ಹೊಸ ಕಲೆ
ಮಂತ್ರಿ ಆದ ಮೇಲೆ ಇಷ್ಟೂ ಬೇಡ್ವೆ ತಲೆ
ಬರ-ಗಿರ ಇದೆ ಅನ್ನೋದು ಶುದ್ಧ ತರಲೆ
‘ಹಿಸ್ ಎಕ್ಸಲೆನ್ಸಿ ಸಾಹೇಬರು ಸರ್ಕಾರದ ವಿರುದ್ಧ ಕೆಂಡಕಾರ್ತಾ ಇದ್ದಾರೆ. ಆಡಳಿತ ವೈಖರಿ ಸರಿಯಿಲ್ಲ ಎಂದು ತಾರಾಮಾರಾ ತರಾಟೆಗೆ ತೆಗೆದುಕೊಂಡಿದ್ದಾರೇನೋ ಸರಿ, ಆದರೆ ಪಾಪ, ಅಯ್ಯ ಅವರು ಏನ್ ಮಾಡೋಕಾಗುತ್ತೇ? ಡಜನ್ ಮಂದಿ ಐಎಎಸ್ಗಳು ಅಯ್ಯ ಅವರ ವಿರುದ್ಧ ತಿರುಗಿ ಬಿದ್ದಿದ್ದಾರಂತಲ್ಲಾ? ಅಯ್ಯ ಅವರು ಏತಿ ಅಂದರೆ ಐಎಎಸ್ಗಳು ಪ್ರೇತಿ ಎನ್ನುತ್ತಿದ್ದಾರಂತೆ, ಇನ್ನು ಡೆವಲಪ್ಮೆಂಟ್ ವರ್ಕ್ ಏನಾಗುತ್ತೇ? ಹೇಗಾಗುತ್ತೇ? ಇದೆಲ್ಲಾ ಸೇಮ್ಪಾರ್ಟಿಯವರಾದ ಹಿಸ್ ಎಕ್ಸ್ಲೆನ್ಸಿಗೆ ಗೊತ್ತಾಗಲ್ವ?’ ಎಂದು ಪೆಕರ, ಅಭಿವೃದ್ಧಿ ಕಾರ್ಯ ಮಂದಗತಿ ಹಿಡಿದಿರುವುದರ ಒಳರಹಸ್ಯವನ್ನು ಸ್ನೇಹಿತರ ಮುಂದಿಟ್ಟ.

‘ಡಜನ್ ಮಂದಿ ಐಎಎಸ್ಗಳು ತಿರುಗಿ ಬಿದ್ದಿರೋದು ಮಾತ್ರ್ರ ನಿನಗೆ ಗೊತ್ತು. ಡಜನ್ ಸಚಿವರೂ ಅಯ್ಯ ಅವರ ಮಾತು ಕೇಳ್ತಾ ಇಲ್ಲಾ ಅನ್ನೋದು ನಿನಗೆ ಗೊತ್ತಿಲ್ಲವಾ? ಸಚಿವರನ್ನು ಕಂಟ್ರೋಲ್ ಮಾಡೋಕ್ಕಾಗುತ್ತಾ? ವಿಧಾನಸೌಧದ ಕೊಠಡಿಯನ್ನೇ ಒಡೆದು ತಮಗೆ ಬೇಕಾದಂತೆ ಕಟ್ಟಿಕೊಂಡರು. ಏನ್ ಮಾಡೋಕ್ಕಾಗುತ್ತೇ? ಈ ಹಿಂದಿನ ಸರ್ಕಾರ ಇದ್ದಾಗಲೂ ಬಹುತೇಕ ಸಚಿವರು ಬಂಗಲೆಗಳನ್ನು ಸರ್ಕಾರಿ ದುಡ್ಡಿನಲ್ಲಿ ನವೀಕರಿಸಿಕೊಳ್ಳೋದರಲ್ಲೇ ಅಧಿಕಾರ ಪೂರ್ತಿ ಕಳೆದರು. ಇನ್ನು ಅಭಿವೃದ್ಧಿ ಎಲ್ಲಿಂದ ಮಾಡ್ತಾರೆ?’ ಪೆಕರನ ಸ್ನೇಹಿತ ದಬಾಯಿಸಿದ.

‘ಸರ್ಕಾರಿ ಬಂಗಲೆ ನವೀಕರಣದ ಹೆಸರಿನಲ್ಲಿ ನಡೆಯುತ್ತಿರುವುದೆಲ್ಲಾ ‘ಸ್ವಾಹಾಕಾರ್ಯ’ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ನವೀಕರಣದ ಹೆಸರಿನಲ್ಲಿ ಬಂಗಲೆ ಸೇರುವ ಲಕ್ಷಾಂತರ ರೂಪಾಯಿ ದುಬಾರಿ ಪೀಠೋಪಕರಣಗಳು, ಐಷಾರಾಮಿ ವಸ್ತುಗಳು, ಸಚಿವರು ಮನೆ ಖಾಲಿಮಾಡುವಾಗ ಅವರ ಸ್ವಗೃಹಕ್ಕೆ ಸ್ಥಳಾಂತರವಾಗುತ್ತದೆ. ಇವರ ದಗಲ್ಬಾಜಿ ನಮಗೆ ಗೊತ್ತಿಲ್ಲವಾ? ಬೇರೆ ಕಡೆ ಇದೆ ಅವರ ಮನೆ. ಸರ್ಕಾರಿ ಬಂಗಲೆಯಲ್ಲಿರೋದು ಹಾಗೇ ಸುಮ್ಮನೆ’ ಎಂದು ಮತ್ತೊಬ್ಬ ಸ್ನೇಹಿತ ಖಾರವಾಗಿ ಪ್ರತಿಕ್ರಿಯಿಸಿದ.

‘ಬಹುತೇಕ ಸಚಿವರು, ಎಲ್ಲ ಶಾಸಕರು ಬೆಂಗಳೂರಿನಲ್ಲಿ ಒಂದು ಸ್ವಂತ ಮನೆ ಕಟ್ಟಿಕೊಂಡಿದ್ದಾರೆ. ಜೊತೆಗೆ ಅದು ಸಾಲದೂ ಅಂತಾ ಸಿಎಂಗೆ ದುಂಬಾಲುಬಿದ್ದು ಬಿಡಿಎ ಸೈಟು ಹೊಡ್ಕೊಂಡಿದ್ದಾರೆ. ಇನ್ನೂ ಸಾಲದು ಅಂಥಾ ಸ್ವಂತ ಮನೇಲಿದ್ದುಕೊಂಡೇ ಸರ್ಕಾರದಿಂದ ಮನೆ ಬಾಡಿಗೆ ಎಣಿಸಿಕೊಳ್ಳುತ್ತಿದ್ದಾರೆ. ಹುಟ್ಟಿದರೇ ಶಾಸಕನಾಗಿ ಹುಟ್ಟಬೇಕು...’ ಎಂದು ಸ್ನೇಹಿತ ಹಾಡಲು ಶುರು ಮಾಡಿದ.

‘ಲೋಕೋಪಯೋಗಿ ಇಲಾಖೆ ಸಚಿವರ ಮನೆ ದುರಸ್ತಿ ವಿಷಯ ಒಂದ್ಕಡೆ ಇರ್ಲಿ ಮಾರಾಯ. ವಿಧಾನ ಸಭೆ ಮೇಲ್ಮನೆ ಆಧುನೀಕರಣಕ್ಕೇ ಕೋಟ್ಯಂತರ ರೂಪಾಯಿ ಖರ್ಚು ಮಾಡ್ತಾ ಇದಾರಲ್ಲಾ? ಕಮಿಷನ್ ಯಾರಿಗೆ ಹೋಗುತ್ತೆ? ಮೇಲ್ಮನೆ ಸಭಾಂಗಣಕ್ಕೆ ಜರ್ಮನಿ ಮೈಕೇ ಬೇಕಂತೆ. ವಿಧಾನಮಂಡಲ ಸದಸ್ಯರ ಆಸನಗಳಿಗೆ ಹೊದಿಸಲು ಇಟಲಿಯಿಂದಲೇ ಚರ್ಮ ಆಮದು ಮಾಡಿಕೊಳ್ಳುತ್ತಿದ್ದಾರೆ. ಪರಿಷತ್ತಿನ ನೆಲಹಾಸು ಅಮೆರಿಕದಿಂದ ಆಮದಾಗ್ತಾ ಇದೆ. ಒಟ್ಟಿನಲ್ಲಿ ನಮ್ಮ ವಿಧಾನಸೌಧಕ್ಕೆ ಮೂರು ರಾಷ್ಟ್ರಗಳ ವಸ್ತುಗಳು ಬಂದು ಸೇರ್ತಾ ಇದೆ. ಜೈ ಪ್ರಜಾಪ್ರಭುತ್ವ’ ಎಂದು ಪೆಕರ ವ್ಯಂಗ್ಯವಾಡಿದ.

‘ಮೂರು ರಾಷ್ಟ್ರವಲ್ಲಾ, ಆರು ರಾಷ್ಟ್ರಗಳ ವಸ್ತುಗಳು ಬಂದು ಬಿದ್ರೂ, ನಮ್ ವಿಧಾನಸಭೇಲಿ ಕಿತ್ತಾಡೋದು ತಪ್ಪಲ್ಲಾ ಮಾರಾಯ. ಅಭಿವೃದ್ಧಿ ಬಗ್ಗೆ ಯಾರೂ ಚರ್ಚೆ ಮಾಡಲ್ಲ. ಸ್ವಯಂವೃದ್ಧಿ ಬಗ್ಗೆನೇ ಯೋಚ್ನೆ ಮಾಡ್ತಾರೆ’

‘ವಿಧಾನಸಭೇಲಿ ಅವರು ಮಾಡೋದೇನು ಅಂತ ಹಿರೇಮಠರು ಈಗಾಗ್ಲೆ ಹೇಳ್ತಾನೇ ಇದ್ದಾರೆ. ಆದರೆ ಅವರು, ಸರ್ಕಾರಿ ನೌಕರರು ನಿಮ್ಮ ಹಳ್ಳಿಗಳಿಗೆ ಬಂದರೆ ಕಟ್ಟಿಹಾಕಿ, ಮೂರುದಿನ ಊಟ ಹಾಕಬೇಡಿ, ಸಾಲಾಗಿ ನಿಲ್ಲಿಸಿ ಕಡಿಯಿರಿ’ ಎಂದು ವೀರಾವೇಶದಿಂದ ಹೇಳುತ್ತಾ ಜನದಂಗೆಗೆ ಪ್ರಚೋದಿಸುತ್ತಿದ್ದಾರೆ. ತಾನು ಕಳ್ಳ ಪರರ ನಂಬ ಎನ್ನುವಂತಾಯಿತು ನಮ್ಮ ಜನಪ್ರತಿನಿಧಿಗಳ ಕಥೆ ಎಂದು ಪೆಕರ ಷರಾ ಬರೆದ.

‘ಕಂಡೋರ ಬಂಗ್ಲೆ ವಿಷಯ ಮಾತನಾಡಿ ನಾವ್ಯಾಕೆ ನಾಲಿಗೆ ಕೆಡಿಸಿಕೊಳ್ಳಬೇಕು, ನಡೀರಿ ಎಲ್ಲಿಯಾದರೂ ಬೈಟು ಕಾಫಿ ಕುಡಿಯೋಣ’ ಎಂದು ಎಲ್ಲರೂ ಚದುರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.