ಹಾಂಗ್ಕಾಂಗ್ ಮೂಲದ ಟ್ರಾನ್ಶನ್ ಹೋಲ್ಡಿಂಗ್ ಕಂಪನಿ ಐಟೆಲ್, ಟೆಕ್ನೊ ಮತ್ತು ಇನ್ಫಿನಿಕ್ಸ್ ಎಂಬ ಹೆಸರಿನಲ್ಲಿ ಫೋನ್ಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಇವು ಕ್ರಮವಾಗಿ ₹ 7,500 ಕ್ಕಿಂತ ಕಡಿಮೆ, 6,999 ರಿಂದ 13,999 ಮತ್ತು 5,999 ರಿಂದ 20,000 ಬೆಲೆಯ ಮಾರುಕಟ್ಟೆಯಲ್ಲಿ ತಮ್ಮ ಫೋನ್ಗಳನ್ನು ಮಾರಾಟ ಮಾಡುತ್ತಿವೆ.

ಈ ಮೂರೂ ಕಂಪನಿಗಳ ಕೆಲವು ಫೋನ್ಗಳ ವಿಮರ್ಶೆಯನ್ನು ಈ ಅಂಕಣದಲ್ಲಿ ಮಾಡಲಾಗಿತ್ತು. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಟೆಕ್ನೊ ಕಮೊನ್ ಐ 2 ಎಕ್ಸ್ (Tecno Camon I 2X) ಎಂಬ ಸ್ಮಾರ್ಟ್ಫೋನನ್ನು.

ಈ ಫೋನ್ ಮಧ್ಯಮ ಕಡಿಮೆ ಬೆಲೆಯ ಫೋನ್. ನೋಡಲು ಸುಂದರವಾಗಿದೆ. ಫೈಬರ್ ದೇಹವಿದೆ. ಹಿಂಭಾಗದ ಕವಚ ಥಳ ಥಳ ಹೊಳೆಯುವಂಥದ್ದು. ತುಂಬ ನಯವಾಗಿಯೂ ಇದೆ. ಕೈಯಿಂದ ಜಾರಿ ಬೀಳುವ ಭಯವಿದೆ. ಆದುದರಿಂದ ಒಂದು ಅಧಿಕ ಪ್ಲಾಸ್ಟಿಕ್ ಕವಚವನ್ನು ಅವರೇ ನೀಡಿದ್ದಾರೆ. ಬಲಗಡೆ ಆನ್/ಆಫ್ ಮತ್ತು ವಾಲ್ಯೂಮ್ ಬಟನ್ಗಳಿವೆ. ಎಡಗಡೆ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕುವ ಟ್ರೇ ಇದೆ. ಕೆಳಗಡೆ 3.5 ಮಿ.ಮೀ. ಇಯರ್ಫೋನ್ ಕಿಂಡಿ ಮತ್ತು ಮೈಕ್ರೊಯುಎಸ್ಬಿ ಕಿಂಡಿಗಳಿವೆ. ಹಿಂಭಾಗದಲ್ಲಿ ಮೂಲೆಯಲ್ಲಿ ಪ್ರಾಥಮಿಕ ಕ್ಯಾಮೆರಾಗಳು ಮತ್ತು ಅವುಗಳ ಕೆಳಗಡೆ ಫ್ಲಾಶ್ ಇದೆ.

ಹಿಂಭಾಗದಲ್ಲಿ ಸ್ವಲ್ಪ ಮೇಲ್ಗಡೆ ಬೆರಳಚ್ಚು ಸ್ಕ್ಯಾನರ್ ಇದೆ. ಇದು ಅಂಚುರಹಿತ (bezelless) ಪರದೆಯುಳ್ಳ ಫೋನ್. ಜೊತೆಗೆ ಪರದೆಯ ಕಚ್ಚು (notch) ಕೂಡ ಇದೆ. ಅಂದರೆ ಪರದೆಯ ಮತ್ತು ದೇಹದ ಗಾತ್ರಗಳ ಅನುಪಾತ ಉತ್ತಮವಾಗಿದೆ. ಹಿಂಭಾಗದ ಕವಚ ತೆಗೆಯಲಸಾಧ್ಯ. ಅಂದರೆ ಬ್ಯಾಟರಿಯನ್ನು ನಾವೇ ಬದಲಿಸುವಂತಿಲ್ಲ. ಹಿಂಭಾಗದ ಕವಚ ಬದಿಗಳಲ್ಲಿ ವಕ್ರವಾಗಿಲ್ಲ. ಕೈಯಲ್ಲಿ ಹಿಡಿದುಕೊಳ್ಳುವ ಅನುಭವ ಉತ್ತಮವಾಗಿದೆ. ನೀಡುವ ಹಣಕ್ಕೆ ತಕ್ಕಂತಿದೆ.

ಕೆಲಸದ ವೇಗ ತೃಪ್ತಿದಾಯಕವಾಗಿದೆ. ಇದರ ಅಂಟುಟು ಬೆಂಚ್ಮಾರ್ಕ್ 80,449 ಇದೆ. ಅಂದರೆ ಇದು ಮಧ್ಯಮ ವೇಗದ ಫೋನ್. ಎಲ್ಲ ನಮೂನೆಯ ಆಟಗಳನ್ನು ಆಡುವ ಅನುಭವ ತೃಪ್ತಿದಾಯಕವಾಗಿದೆ. ಮೂರು ಆಯಾಮಗಳ ಆಟಗಳನ್ನು ಆಡುವ ಅನುಭವ ಅದ್ಭುತವಲ್ಲದಿದ್ದರೂ ಈ ಬೆಲೆಗೆ ತೃಪ್ತಿದಾಯಕ ಎನ್ನಬಹುದು. ಸಾಮಾನ್ಯ ಮತ್ತು ಹೈಡೆಫಿನಿಶನ್ ವಿಡಿಯೊಗಳು ಚೆನ್ನಾಗಿ ಪ್ಲೇ ಆಗುತ್ತವೆ. 4k ವೀಡಿಯೊ ಕೂಡ ಸರಿಯಾಗಿ ಪ್ಲೇ ಆಗುತ್ತದೆ. ಇದರ ಆಡಿಯೊ ಇಂಜಿನ್ ಪರವಾಗಿಲ್ಲ. ಇಯರ್ಫೋನ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಇಯರ್ಫೋನ್ ಇದ್ದರೆ ಅದನ್ನು ಜೋಡಿಸಿ ತೃಪ್ತಿದಾಯಕವಾಗಿ ಸಂಗೀತವನ್ನು ಆಲಿಸಬಹುದು.

ಈ ಫೋನಿನಲ್ಲಿ ನಿಮ್ಮ ಮುಖವನ್ನು ಗುರುತುಹಿಡಿಯುವ ಸವಲತ್ತು ಇದೆ. ಮುಖವನ್ನೇ ಪಾಸ್ವರ್ಡ್ಆಗಿ ಮಾಡಿಟ್ಟುಕೊಳ್ಳಬಹುದು. ಈ ಸವಲತ್ತು ಚೆನ್ನಾಗಿ ಕೆಲಸ ಮಾಡುತ್ತಿದೆ.

ಈ ಫೋನಿನಲ್ಲಿ 13 ಮತ್ತು 5 ಮೆಗಾಪಿಕ್ಸೆಲ್ಗಳ ಪ್ರಾಥಮಿಕ ಕ್ಯಾಮೆರಾಗಳಿವೆ. ಕೃತಕ ಬುದ್ಧಿಮತ್ತೆ ಕೂಡ ಇದೆ. ಸ್ವಂತೀಗೆ 16 ಮೆಗಾಪಿಕ್ಸೆಲ್ನ ಕ್ಯಾಮೆರಾವಿದೆ. ಕ್ಯಾಮೆರಾದ ಕಿರುತಂತ್ರಾಂಶದಲ್ಲಿ ಹಲವು ಆಯ್ಕೆಗಳಿವೆ. ಕ್ಯಾಮೆರಾದ ಫಲಿತಾಂಶ ತೃಪ್ತಿದಾಯಕವಾಗಿದೆ. ಮ್ಯಾನ್ಯುವಲ್ ಮೋಡ್ ಮಾತ್ರ ಇಲ್ಲ. ಕಡಿಮೆ ಬೆಳಕಿನಲ್ಲೂ ಒಂದು ಮಟ್ಟಿಗೆ ಉತ್ತಮ ಫೋಟೊ ಮೂಡಿಬರುತ್ತದೆ. ಒಟ್ಟಿನಲ್ಲಿ ಕ್ಯಾಮೆರಾಕ್ಕೆ ಪಾಸು ಮಾರ್ಕು ನೀಡಬಹುದು.

ಭಾರತೀಯ ಭಾಷೆಗಳಿಗೆ ಬೆಂಬಲವಿದೆ. ಕನ್ನಡವೂ ಇದೆ. ಕನ್ನಡ ಭಾಷೆಯ ತೋರುವಿಕೆ ಸರಿಯಾಗಿದೆ. 3750 mAh ಶಕ್ತಿಯ ಬ್ಯಾಟರಿ ಇದೆ. ಆದರೆ ವೇಗವಾಗಿ ಚಾರ್ಜ್ ಮಾಡುವ ಸೌಲಭ್ಯ ನೀಡಿಲ್ಲ. ಬ್ಯಾಟರಿ ಬಾಳಿಕೆ ಪರವಾಗಿಲ್ಲ.

ಈ ಫೋನ್ ಜಾಲಮಳಿಗೆಗಳಲ್ಲಿ ಮಾತ್ರವಲ್ಲದೆ ಅಂಗಡಿಗಳಲ್ಲೂ ದೊರೆಯುತ್ತದೆ. ಜಾಲಮಳಿಗೆಗಳಲ್ಲೂ ಅಂಗಡಿ
ಗಳಲ್ಲೂ ಒಂದೇ ಬೆಲೆಯಲ್ಲಿ ಮಾರುತ್ತಿದ್ದಾರೆ. ಟೆಕ್ನೊ ಕಂಪನಿಯ ವಿಶೇಷವೆಂದರೆ 100 ದಿನಗಳ ಒಳಗೆ ಏನೇ ತೊಂದರೆ ಕಂಡು ಬಂದರೂ ಫೋನನ್ನೇ ಬದಲಿಸಿ ಹೊಸ ಫೋನ್ ಕೊಡುವ ವಾಗ್ದಾನ. ಪರದೆ ಒಡೆದು ಹೋದರೆ ಒಂದು ಸಲ ಉಚಿತವಾಗಿ ಅದನ್ನೂ ಬದಲಿಸಿ ನೀಡುತ್ತಾರೆ. ಈ ಎಲ್ಲ ವಿಷಯಗಳನ್ನು ಗಮನಿಸಿದರೆ ಇದು ಕೊಳ್ಳಬಹುದಾದ ಫೋನ್ ಎನ್ನಬಹುದು.

ಗುಣವೈಶಿಷ್ಟ್ಯಗಳು

ಪ್ರೋಸೆಸರ್: 2 ಗಿಗಾಹರ್ಟ್ಸ್ ವೇಗದ ಎಂಟು ಹೃದಯಗಳ ಪ್ರೋಸೆಸರ್ (MT6762)
ಗ್ರಾಫಿಕ್ಸ್: ಪ್ರೋಸೆಸರ್ PowerVR GE8320
ಮೆಮೊರಿ: 4 + 64 ಗಿಗಾಬೈಟ್
ಮೈಕ್ರೊಎಸ್ಡಿ ಮೆಮೊರಿ ಸೌಲಭ್ಯ: ಇದೆ
ಪರದೆ: 6.2 ಇಂಚು ಗಾತ್ರದ 720 x 1500 ಪಿಕ್ಸೆಲ್
ಕ್ಯಾಮೆರಾ: 13 + 5 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್,16 ಮೆಗಾಪಿಕ್ಸೆಲ್ ಸ್ವಂತೀ
ಸಿಮ್ 2: ನ್ಯಾನೊ
ಬ್ಯಾಟರಿ: 3750 mAh
ಗಾತ್ರ: 156.6 x 76 x 7.9 ಮಿ.ಮೀ.
ತೂಕ: ಗೊತ್ತಿಲ್ಲ
ಬೆರಳಚ್ಚುಸ್ಕ್ಯಾನರ್: ಇದೆ
ಅವಕೆಂಪು ದೂರನಿಯಂತ್ರಕ (Infrared remote): ಇಲ್ಲ
ಎಫ್.ಎಂ. ರೇಡಿಯೋ: ಇದೆ
ಎನ್ಎಫ್ಸಿ: ಇಲ್ಲ
4 ಜಿ ವಿಓಎಲ್ಟಿಇ (4G VoLTE):  ಇದೆ
ಇಯರ್ಫೋನ್: ಇಲ್ಲ
ಯುಎಸ್ಬಿ ಓಟಿಜಿ ಬೆಂಬಲ: ಇದೆ
ಕಾರ್ಯಾಚರಣ ವ್ಯವಸ್ಥೆ: ಆಂಡ್ರೋಯಿಡ್ 8.1 + ಹೈಓಎಸ್ 4.1
ಬೆಲೆ: ₹14,099 (ನಿಗದಿತ)

ವಾರದ ಆಪ್ (app):ಸಂಖ್ಯೆಗಳನ್ನು ಜೋಡಿಸಿ (Number Mazes - Rikudo Puzzles)

ಎಲ್ಲಿಯಾದರೂ ಕುಳಿತುಕೊಂಡು ಕಾಯುತ್ತಿರುವಾಗ ನೀವೇನು ಮಾಡುತ್ತೀರಿ? ಪುಸ್ತಕ ಓದುವ ಕಾಲ ಕಳೆದೇ ಹೋಯಿತು ಎಂದೆನಿಸುತ್ತಿದೆ. ಎಲ್ಲರೂ ಮೊಬೈಲ್ ಫೋನ್ ಹಿಡಿದು ಕಾಲಕ್ಷೇಪ ಮಾಡುತ್ತಿರುತ್ತಾರೆ. ಹಾಗೆ ಮಾಡಲು ಹಲವು ಕಿರುತಂತ್ರಾಂಶಗಳು (ಆ್ಯಪ್) ಲಭ್ಯವಿವೆ. ಅವುಗಳಲ್ಲಿ ಆಟಗಳು ಪ್ರಮುಖವಾಗಿವೆ. ಆಟಗಳಲ್ಲೂ ಹಲವಾರಿವೆ.

ಹೊತ್ತು ಕಳೆಯಲು ಸಹಾಯ ಮಾಡುವ ಒಂದು ಸರಳ ಆಟ ಬೇಕೇ? ಹಾಗಿದ್ದಲ್ಲಿ ಗೂಗ್ಲಲ್ ಪ್ಲೇ ಸ್ಟೋರಿಗೆ ಭೇಟಿ ನೀಡಿ Number Mazes - Rikudo Puzzles ಎಂದು ಹುಡುಕಿ ಅಥವಾ http://bit.ly/gadgetloka350 ಜಾಲತಾಣಕ್ಕೆ ಭೇಟಿ ನೀಡಿ. ಈಗಾಗಲೇ ತಿಳಿಸಿದಂತೆ ಇದೊಂದು ಸರಳ ಆಟ. ಇದರಲ್ಲಿ ಸಂಖ್ಯೆಗಳನ್ನು ಜೋಡಿಸುತ್ತಾ ಹೋಗಬೇಕು. ಎಲ್ಲ ಆಟಗಳಂತೆ ಇದರಲ್ಲೂ ಹಲವು ಹಂತಗಳಿವೆ.

ಗ್ಯಾಜೆಟ್ ಪದ:USB (Universal Serial Bus) = ಯುಎಸ್ಬಿ

ಯುಎಸ್ಬಿ ಎಂಬುದು ಯುನಿವರ್ಸಲ್ ಸೀರಿಯಲ್ ಬಸ್ ಎಂಬುದರ ಹ್ರಸ್ವ ರೂಪ. ಇದು ಕೇಬಲ್ ಮತ್ತು ಸಾಧನಗಳನ್ನು ಜೋಡಿಸುವ ಒಂದು ಶಿಷ್ಟತೆ. ಗಣಕ, ಟ್ಯಾಬ್ಲೆಟ್, ಸ್ಮಾರ್ಟ್ಫೋನ್ಗಳಲ್ಲಿ ಇವು ಬಳಕೆಯಾಗುತ್ತಿವೆ. ಯುಎಸ್ಬಿ ಕನೆಕ್ಟರ್ ಮೂಲಕ ಜೋಡಣೆಯಾಗುವ ಯುಎಸ್ಬಿ ಡ್ರೈವ್ ಅಥವಾ ಪೆನ್ ಡ್ರೈವ್ (ಅಥವಾ ಥಂಬ್ ಡ್ರೈವ್) ಎಲ್ಲರಿಗೂ ಗೊತ್ತು. ಬಹುತೇಕ ಸ್ಮಾರ್ಟ್ಫೋನ್ಗಳ ಚಾರ್ಜರ್ಗಳು ಯುಎಸ್ಬಿ ಕೇಬಲ್ ಮೂಲಕ ಜೋಡಣೆಯಾಗುತ್ತವೆ. ಯುಎಸ್ಬಿಯಲ್ಲಿ ಹಲವು ನಮೂನೆಯ ಕನೆಕ್ಟರ್ಗಳಿವೆ. ಯುಎಸ್ಬಿ-ಸಿ ನಮೂನೆಯ ಕನೆಕ್ಟರ್ಗಳು ಇತ್ತೀಚೆಗೆ ಜನಪ್ರಿಯವಾಗುತ್ತಿವೆ.

ಗ್ಯಾಜೆಟ್ ಸುದ್ದಿ:ಸೈಕಲ್ಲಿಗೆ ಲೇಸರ್ ದೀಪ

ಸೈಕಲಿಗೆ ಪ್ರಖರವಾದ ಬೆಳಕನ್ನು ಬೀರುವ ಹೆಡ್ಲೈಟ್ ಜೋಡಿಸುವುದು ಗೊತ್ತು ತಾನೆ? ಆದರೂ ಅದು ರಸ್ತೆಯಲ್ಲಿ ಹೋಗುತ್ತಿರುವ ಇತರೆ ವಾಹನಗಳ ಪ್ರಖರ ಬೆಳಕಿನ ಮಧ್ಯೆ ಕಳೆದುಹೋಗುತ್ತದೆ. ಈಗ ಒಂದು ಹೊಸ ಪ್ರಖರವಾದ ಲೇಸರ್ ಲೈಟ್ ಬಂದಿದೆ. ಅದನ್ನು ಸೈಕಲ್ಲಿಗೆ ಜೋಡಿಸಬಹುದು.

ಅಷ್ಟೇ ಆದರೆ ಅದೇನೂ ವಿಶೇಷವಲ್ಲ. ಅದು ಲೇಸರ್ ಕಿರಣದ ಮೂಲಕ ಸುಮಾರು 20-30 ಅಡಿ ದೂರದಲ್ಲಿ ರಸ್ತೆಯಲ್ಲಿ ಹಸಿರು ಬಣ್ಣದಲ್ಲಿ ಸೈಕಲ್ಲಿನ ಚಿತ್ರವನ್ನು ಮೂಡಿಸುತ್ತದೆ. ಇದರಿಂದಾಗಿ ಇತರೆ ವಾಹನಗಳಿಗೆ ಪಕ್ಕದಲ್ಲಿ ಸೈಕಲ್ ಬರುತ್ತಿರುವುದು ತಿಳಿಯುತ್ತದೆ. ಈ ಲೇಸರ್ ದೀಪ ಡಿಸೆಂಬರ್ 2018ರ ಅಂದಾಜಿಗೆ ಮಾರುಕಟ್ಟೆಗೆ ಬರಲಿದೆ.

ಗ್ಯಾಜೆಟ್ ಸಲಹೆ

ನವೀನ ಕುಮಾರರ ಪ್ರಶ್ನೆ: ಸುಮಾರು ₹ 18,000 ಕ್ಕೆ ಉತ್ತಮ ಸ್ಮಾರ್ಟ್ಫೋನ್ ಯಾವುದು?
ಉ: ರಿಯಲ್ಮಿ 2 ಪ್ರೊ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.