ಮುಖಕ್ಷೌರ ಮಾಡಲು ಏನನ್ನು ಬಳಸುತ್ತೀರಾ? ಹಳೆಯ ರೇಜರ್, ಆಧುನಿಕ ಎರಡು ಮೂರು ಬ್ಲೇಡುಗಳ ರೇಜರ್ ಅಥವಾ ಎಲೆಕ್ಟ್ರಿಕ್ ಶೇವರ್? ಮಾಮೂಲಿ ರೇಜರ್ ಬಗ್ಗೆ ಗ್ಯಾಜೆಟ್ಲೋಕ ಅಂಕಣದಲ್ಲಿ ಬರೆಯಲು ಅದೇನೂ ಗ್ಯಾಜೆಟ್ ಅಲ್ಲ ತಾನೆ? ಹಾಗಿದ್ದರೆ ಈ ಸಲ ಎಲೆಕ್ಟ್ರಿಕ್ ಶೇವರ್ ಕಡೆ ಗಮನ ಹರಿಸೋಣ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಫಿಲಿಫ್ಸ್ ಕಂಪನಿಯ ಎಟಿ 610 (Philips AT 610) ಎಂಬ ಇಲೆಕ್ಟ್ರಿಕ್ ಶೇವರ್ ಅನ್ನು.

ಈ ಉತ್ಪನ್ನದ ವಿಮರ್ಶೆ ಮಾಡುವ ಮೊದಲು ನಾವು ಈ ವಿದ್ಯುತ್ ಕ್ಷೌರಿಕನ ಬಗ್ಗೆ ತಿಳಿಯೋಣ. ಇವುಗಳಲ್ಲಿ ಪ್ರಮುಖವಾಗಿ ಎರಡು ನಮೂನೆಗಳಿವೆ. ಮೊದಲನೆಯ ನಮೂನೆಯದರಲ್ಲಿ ಬ್ಲೇಡು ಎಡ ಬಲ ಚಲಿಸುತ್ತಿರುತ್ತದೆ. ಈ ನಮೂನೆಯವುಗಳು ತುಂಬ ಸದ್ದು ಮಾಡುತ್ತವೆ. ಇವುಗಳನ್ನು ಮುಖದ ಮೇಲೆ ನೇರವಾಗಿ ಚಲಾಯಿಸಬೇಕು. ಅಂದರೆ ಬಹುಮಟ್ಟಿಗೆ ರೇಜರ್ನ ಚಲನೆಯಂತೆಯೇ. ಎರಡನೆಯ ನಮೂನೆಯದರಲ್ಲಿ ಬ್ಲೇಡು ವೃತ್ತಾಕಾರದಲ್ಲಿ ತಿರುಗುತ್ತಿರುತ್ತದೆ. ಈ ಶೇವರ್ ಅನ್ನು ಬಳಸುವಾಗ ಅದನ್ನು ಮುಖದ ಮೇಲೆ ನೇರವಾಗಿ ಚಲಾಯಿಸಬಾರದು. ಬದಲಿಗೆ ವೃತ್ತಾಕಾರದಲ್ಲಿ ಚಲಾಯಿಸಬೇಕು. ಮೊದಲನೆಯ ನಮೂನೆಯದು ಪ್ರತಿದಿನ ಮುಖಕ್ಷೌರ ಮಾಡುವವರಿಗೆ ಉತ್ತಮ ಎಂದು ಹಲವು ಜಾಲತಾಣಗಳು ಹೇಳುತ್ತಿವೆ. ನಾನು ಈ ಸಲ ವಿಮರ್ಶೆ ಮಾಡುತ್ತಿರುವ ಫಿಲಿಪ್ಸ್ ಎಟಿ 610 ಎರಡನೆಯ ನಮೂನೆಯದು. ಆದರೆ ನಾನು ದಿನಾ ಮುಖಕ್ಷೌರ ಮಾಡುವವನು. ನನಗೇನು ಬಾಧಕ ಎಂದು ಅನ್ನಿಸಲಿಲ್ಲ!

ಎರಡು ನಮೂನೆಯ ವಿದ್ಯುತ್ ಶೇವರ್ಗಳೂ ಕೆಲಸ ಮಾಡುವ ವಿಧಾನ ಒಂದೇ. ಒಂದು ಜಾಲರಿ ಮಾದರಿಯ ಅಂಗ ಎದುರಿಗೆ ಇರುತ್ತದೆ. ಅದರಲ್ಲಿ ಚಿಕ್ಕ ಚಿಕ್ಕ ಕಿಂಡಿಗಳಿರುತ್ತವೆ. ಅದರ ಒಳಗೆ ಬ್ಲೇಡು ಇರುತ್ತದೆ. ಈ ಬ್ಲೇಡು ಎಡ ಬಲ ಅಥವಾ ವೃತ್ತಾಕಾರದಲ್ಲಿ ಚಲಿಸುತ್ತದೆ. ಶೇವರ್ ಅನ್ನು ಮುಖಕ್ಕೆ ಒತ್ತಿ ಚಲಾಯಿಸುವಾಗ ಕೂದಲುಗಳು ಈ ಚಿಕ್ಕ ಚಿಕ್ಕ ಕಿಂಡಿಗಳ ಒಳಗೆ ತೂರಿ ಬರುತ್ತವೆ. ಅಂತಹ ಕೂದಲುಗಳನ್ನು ಚಲಿಸುವ ಬ್ಲೇಡು ಕತ್ತರಿಸುತ್ತದೆ.

ಈಗ ನಾವು ಫಿಲಿಪ್ಸ್ ಎಟಿ 610 ಬಗ್ಗೆ ಗಮನ ಹರಿಸೋಣ.

ಈ ಶೇವರ್ನ ವಿನ್ಯಾಸ ಚೆನ್ನಾಗಿದೆ. ಒಂದು ತುದಿಯಲ್ಲಿ ಸುಮಾರು ಒಂದು ಇಂಚು ವ್ಯಾಸವಿದ್ದು ಇನ್ನೊಂದು ತುದಿಯಲ್ಲಿ ಸುಮಾರು ಎರಡು ಇಂಚು ವ್ಯಾಸವಿದೆ. ಸುಮಾರು ಐದೂವರೆ ಇಂಚು ಉದ್ದವಿದೆ. ಇದು ನೇರವಾಗಿಲ್ಲ. ಕ್ಷೌರ ಮಾಡಲು ಅನುಕೂಲವಾಗುವಂತೆ ಬಾಗಿದ ವಿನ್ಯಾಸದಲ್ಲಿದೆ. ಇದರ ತಲೆ ಅಂದರೆ ಕ್ಷೌರ ಮಾಡುವ ಅಂಗ ತ್ರಿಕೋನಾಕಾರದಲ್ಲಿದೆ. ಅದರಲ್ಲಿ ಮೂರು ವೃತ್ತಾಕಾರದ ಜಾಲರಿಗಳು ಗೋಚರಿಸುತ್ತವೆ. ಅವುಗಳನ್ನು ಒತ್ತಿದರೆ ಸ್ವಲ್ಪ ಒಳಕ್ಕೆ ಹೋಗುತ್ತವೆ. ಈ ವೃತ್ತಾಕಾರದ ಜಾಲರಿಯೊಳಗೆ ವೃತ್ತಾಕಾರದ ಬ್ಲೇಡುಗಳಿವೆ. ಈ ತಲೆಯ ಭಾಗವನ್ನು ತೆಗೆಯಬಹುದು. ಪ್ರತಿ ಕ್ಷೌರದ ನಂತರವೂ ಇದನ್ನು ತೆಗೆದು ನಲ್ಲಿಯ ನೀರಿಗೆ ಹಿಡಿದು ಸ್ವಚ್ಛ ಮಾಡಬಹುದು.

ಹಿಡಿದುಕೊಳ್ಳುವ ಭಾಗದಲ್ಲಿ ಆನ್/ಆಫ್ ಬಟನ್ ಇದೆ. ಅದರ ಕೆಳಗೆ ಎಲ್ಇಡಿ ಇದೆ. ಇದರ ಇನ್ನೊಂದು ತುದಿಯಲ್ಲಿ ಅಂದರೆ ಕ್ಷೌರ ಮಾಡುವ ತಲೆಗೆ ವಿರುದ್ಧ ದಿಕ್ಕಿನಲ್ಲಿ ಚಾರ್ಜರ್ ಅನ್ನು ಜೋಡಿಸುವ ಕಿಂಡಿ ಇದೆ. ಇದನ್ನು ಚಾರ್ಜ್ ಮಾಡಲು ಅವರೇ ನೀಡಿದ ಚಾರ್ಜರ್ ಬಳಸಬೇಕು. ಚಾರ್ಜ್ ಮುಗಿದಾಗ ಮೊದಲು ಎಲ್ಇಡಿ ಉರಿಯುತ್ತದೆ. ಕೊನೆಗೆ ನಿಂತೇ ಹೋಗುತ್ತದೆ. ಪೂರ್ತಿ ಚಾರ್ಜ್ ಆಗಲು ಸುಮಾರು 10 ಗಂಟೆ ಬೇಕು. ಒಮ್ಮೆ ಪೂರ್ತಿ ಚಾರ್ಜ್ ಆದರೆ ಸುಮಾರು 30 ನಿಮಿಷ ಬಳಸಬಹುದು. ಒಂದು ಸಲ ಕ್ಷೌರ ಮಾಡಲು 2 ರಿಂದ 3 ನಿಮಿಷ ಸಾಕು. ಅಂದರೆ 10 ದಿನಕ್ಕೊಮ್ಮೆ ಚಾರ್ಜ್ ಮಾಡಬೇಕು.

ಇದು ತೇವ ಮತ್ತು ಒಣ ಕ್ಷೌರಿಕ. ಅಂದರೆ ನೀವು ಮುಖಕ್ಕೆ ಶೇವಿಂಗ್ ಕ್ರೀಮ್ (ಸೋಪ್) ಹಾಕಿ ನಂತರ ಕ್ಷೌರ ಮಾಡಬಹುದು ಅಥವಾ ಯಾವುದೇ ಸಾಬೂನು (ನೀರು) ಬಳಸದೆಯೂ ಕ್ಷೌರ ಮಾಡಬಹುದು. ರೇಜರ್ ಬಳಸಿ ಅನುಭವವಿರುವವರು ಮುಖ್ಯವಾಗಿ ಗಮನಿಸಬೇಕಾದ ಬದಲಾವಣೆಯೆಂದರೆ ಇದನ್ನು ಮುಖದ ಮೇಲೆ ವೃತ್ತಾಕಾರದಲ್ಲಿ ಚಲಾಯಿಸಬೇಕು. ರೇಜರ್ ಬಳಸುವಂತೆ ನೇರವಾಗಿ ಅಲ್ಲ. ಮೊದಲ ಬಾರಿಗೆ ವಿದ್ಯುತ್ ಶೇವರ್ ಬಳಸುವವರಿಗೆ ಇದು ಹೊಂದಿಕೊಳ್ಳಲು ಕೆಲವೊಮ್ಮೆ ಎರಡು ವಾರಗಳೇ ಹಿಡಿಯಬಹುದು. ಕೆಲವರಿಗೆ ಇದು ಕಿರಿಕಿರಿಯನ್ನುಂಟುಮಾಡಲೂ ಬಹುದು. ನನಗೆ ಅಂತಹ ಯಾವ ತೊಂದರೆಯೂ ಆಗಲಿಲ್ಲ.

ಇದರ ಬ್ಲೇಡು ಸುಮಾರು ಎರಡು ವರ್ಷಗಳ ಕಾಲ ಬಾಳಿಕೆ ಬರುತ್ತದೆ ಎಂದು ಕಂಪನಿಯವರು ನಮೂದಿಸಿದ್ದಾರೆ. ಬ್ಲೇಡು ಎಲ್ಲಿ ದೊರೆಯುತ್ತದೆ ಎಂದು ತಿಳಿದಿಲ್ಲ. ಅವರ ಗ್ರಾಹಕ ಸೇವಾ ಕೇಂದ್ರಕ್ಕೆ ಹೋಗಬೇಕೋ ಗೊತ್ತಿಲ್ಲ. ಜಾಲಮಳಿಗೆಗಳಲ್ಲಿ ಬ್ಲೇಡುಗಳೇನೋ ಕಂಡುಬಂದವು. ಆದರೆ ಅವು ಫಿಲಿಪ್ಸ್ನವರು ತಯಾರಿಸಿದ್ದಲ್ಲ. ಫಿಲಿಪ್ಸ್ ಶೇವರ್ಗೆ ಇದನ್ನು ಜೋಡಿಸಬಹುದು ಎಂದು ಬರೆದುಕೊಂಡಿದ್ದರು. ನಾನು ಅವುಗಳನ್ನು ಕೊಂಡುಕೊಂಡು ಪರಿಶೀಲಿಸಿಲ್ಲ. ಹಳತಾದ ಬ್ಲೇಡುಗಳನ್ನು ಮನೆಯಲ್ಲೇ ಹರಿತ ಮಾಡುವ ವಿಧಾನವನ್ನು ತೋರಿಸುವ ಹಲವು ವಿಡಿಯೊಗಳೂ ಯುಟ್ಯೂಬ್ನಲ್ಲಿ ಇವೆ. ನನ್ನ ಶೇವರ್ ಇನ್ನೂ ಹಳತಾಗಿಲ್ಲವಾದ ಕಾರಣ ನಾನು ಅವುಗಳನ್ನು ಪ್ರಯತ್ನಿಸಿಲ್ಲ.

ನಾನು ಇದನ್ನು ಸುಮಾರು 6 ತಿಂಗಳುಗಳಿಂದ ಬಳಸುತ್ತಿದ್ದೇನೆ. ಇದು ನಾನು ಕೊಂಡುಕೊಂಡಿದ್ದು, ವಿಮರ್ಶೆಗಾಗಿ ಬಂದುದು ಅಲ್ಲ. ಇದು ತನಕ ನನ್ನ ಅನುಭವ ಉತ್ತಮವಾಗಿಯೇ ಇದೆ. ಖಂಡಿತವಾಗಿಯೂ ಹಣ ನೀಡಿ ಕೊಳ್ಳಬಹುದಾದ ಉತ್ಪನ್ನ.

ಗುಣವೈಶಿಷ್ಟ್ಯಗಳು

ಮಾದರಿ; ಎಲೆಕ್ಟ್ರಿಕ್ ಶೇವರ್ (Wet & dry electric shaver)

ನಮೂನೆ; ವೃತ್ತಾಕಾರದ 3 ಬ್ಲೇಡುಗಳು

ವಿದ್ಯುತ್ ಸಂಪರ್ಕ; 100-240 V, 2W

ಬ್ಯಾಟರಿ; NiMH (ರಿಚಾರ್ಜ್ ಮಾಡಬಹುದು)

ಚಾರ್ಜಿಂಗ್ ಸಮಯ; ಸುಮಾರು 10 ಗಂಟೆ

ಚಾರ್ಜರ್; ನೀಡಿದ್ದಾರೆ

ಕ್ಷೌರ ಸಮಯ; (ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ) ಸುಮಾರು 30 ನಿಮಿಷ, 10 ಸಲ

ಇಂಡಿಕೇಟರ್; ಎಲ್ಇಡಿ

ಬ್ಲೇಡಿನ ಆಯಸ್ಸು; ಸುಮಾರು 2 ವರ್ಷ

ತೊಳೆಯಬಹುದೇ?; ಹೌದು

ಬೆಲೆ; ₹ 2,495 (ನಿಗದಿತ), ₹2,291 (ಅಮೆಝಾನ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.