ಆ್ಯಂ ಡ್ರಾಯಿಡ್ ಫೋನ್ಗಳನ್ನು ತಯಾರಿಸುವವರು ಶುದ್ಧ ಆ್ಯಂಡ್ರಾಯಿಡ್ ಮೇಲೆ ತಮ್ಮದೇ ಹೊದಿಕೆ ಸೇರಿಸುತ್ತಾರೆ. ಕೆಲವೊಮ್ಮೆ ಅವರು ಸೇರಿಸುವ ಸವಲತ್ತುಗಳು ಚೆನ್ನಾಗಿಯೂ ಇರುತ್ತವೆ. ಆದರೆ ಅವರು ಈ ಫೋನ್ಗಳಿಗೆ ಕಾಲಕಾಲಕ್ಕೆ ನವೀಕರಣವನ್ನು ಒದಗಿಸದಿದ್ದರೆ ಅಷ್ಟು ಚೆನ್ನಾಗಿರುವುದಿಲ್ಲ. ಇದು ಸದ್ಯ ಬಹುತೇಕ ಆ್ಯಂಡ್ರಾಯಿಡ್ಫೋನ್ಗಳ ಸಮಸ್ಯೆಯೂ ಹೌದು. ಕಡಿಮೆ ಬೆಲೆಯ ಫೋನ್ಗಳಿಗೆ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಈ ಮಾರುಕಟ್ಟೆಗೆಂದೇ ಗೂಗಲ್ನವರು ವಿಶೇಷ ಆ್ಯಂಡ್ರಾಯಿಡ್ ತಯಾರಿಸಿದ್ದಾರೆ. ಅದಕ್ಕೆ ಆ್ಯಂಡ್ರಾಯಿಡ್ ಒನ್ ಎಂಬ ಹೆಸರಿದೆ. ಇದು ಶುದ್ಧ ಆ್ಯಂಡ್ರಾಯಿಡ್. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಅಂತಹ ಒಂದು ಫೋನನ್ನು. ಅದುವೇ ಇನ್ಫಿನಿಕ್ಸ್ ಕಂಪನಿಯ ನೋಟ್ 5 (Infinix Note 5).

ಈ ಫೋನಿನ ಬೆಲೆ ₹10 ಸಾವಿರ. ಅಂದರೆ ಇದು ಕಡಿಮೆ ಬೆಲೆಯ ಫೋನ್. ಇದರ ರಚನೆ ಮತ್ತು ವಿನ್ಯಾಸದಲ್ಲಿ ವಿಶೇಷವೇನಿಲ್ಲ. ಪ್ಲಾಸ್ಟಿಕ್ನ ದೇಹವಿದೆ. ಹಿಂದಿನ ಕವಚ ನಯವಾಗಿದ್ದು ಸುಂದರವಾಗಿದೆ. ಇದು ಕೈಯಿಂದ ಜಾರಿ ಬೀಳುವ ಭಯವಿದೆ. ಆದುದರಿಂದ ಒಂದು ಪ್ಲಾಸ್ಟಿಕ್ ಕವಚವನ್ನೂ ನೀಡಿದ್ದಾರೆ. ಬಲಬದಿಯಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್ಗಳಿವೆ. ಬಲಬದಿಯಲ್ಲಿ ವಾಲ್ಯೂಮ್ ಬಟನ್ಗಿಂತ ಮೇಲೆ ಸಿಮ್ ಹಾಕುವ ಟ್ರೇ ಇದೆ. ಇದರಲ್ಲಿ ಎರಡು ನ್ಯಾನೋ ಸಿಮ್ ಮತ್ತು ಒಂದು ಮೈಕ್ರೊ ಎಸ್ಡಿ ಮೆಮೊರಿ ಕಾರ್ಡ್ ಹಾಕಬಹುದು. ಕೆಳಭಾಗದಲ್ಲಿ ಮೈಕ್ರೊ ಯುಎಸ್ಬಿ ಮತ್ತು 3.5 ಮಿ.ಮೀ. ಇಯರ್ಫೋನ್ ಕಿಂಡಿಗಳಿವೆ. ಹಿಂಭಾಗದಲ್ಲಿ ಬಲಮೂಲೆಯಲ್ಲಿ ಕ್ಯಾಮೆರಾ ಮತ್ತು ಅದರ ಪಕ್ಕದಲ್ಲಿ ಫ್ಲಾಶ್ ಇದೆ. ಹಿಂದೆ ಸ್ವಲ್ಪ ಮೇಲೆ ಮಧ್ಯದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಬದಿಗಳು ವಕ್ರವಾಗಿವೆ. ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸಕ್ಕೆ ಪಾಸು ಮಾರ್ಕು ನೀಡಬಹುದು.

ಇದು ಅತಿ ವೇಗದ ಫೋನ್ ಅಲ್ಲ. ಇದರ ಅಂಟುಟು ಬೆಂಚ್ ಮಾರ್ಕ್ 84,755 ಇದೆ. ಅಂದರೆ ಮಧ್ಯಮ ವೇಗದ ಫೋನ್ ಎನ್ನಬಹುದು. ಹಲವು ಸಂದರ್ಭಗಳಲ್ಲಿ ಇದರ ಸಂವೇದನೆ ಸ್ವಲ್ಪ ನಿಧಾನ ಎಂದು ಅನ್ನಿಸುತ್ತದೆ. ಅದರಲ್ಲೂ ರಿಬೂಟ್ ಮಾಡಿದಾಗ ಪಿನ್/ಪಾಸ್ವರ್ಡ್ ಕೇಳುವ ಪರದೆ ಮೂಡಿಬಂದರೂ ಕೀಲಿಮಣೆ ಸ್ವಲ್ಪ ನಿಧಾನವಾಗಿ ಬರುತ್ತದೆ. ಕೆಲವೊಮ್ಮೆ ಎರಡು ಮೂಡು ಸಲ ಪರದೆಯನ್ನು ಕುಟ್ಟಬೇಕಾಗುತ್ತದೆ. ಆದರೆ ಹಲವು ಕಿರುತಂತ್ರಾಂಶಗಳನ್ನು (ಆ್ಯಪ್) ಏಕಕಾಲಕ್ಕೆ ಬಳಸುವ ಅನುಭವ, ಆಟಗಳನ್ನು ಆಡುವ ಅನುಭವ, ಎಲ್ಲ ತೃಪ್ತಿದಾಯಕವಾಗಿವೆ. ಮೂರು ಆಯಾಮಗಳ, ಅಧಿಕ ಶಕ್ತಿಯನ್ನು ಬೇಡುವ ಆಟಗಳನ್ನು ಆಡಲು ಮಾತ್ರ ಇದು ಸೂಕ್ತವಲ್ಲ.

ವಿಡಿಯೊ ವೀಕ್ಷಣೆ ತೃಪ್ತಿದಾಯಕವಾಗಿದೆ. ಹೈಡೆಫಿನಿಶನ್ ಮತ್ತು 4k ವಿಡಿಯೊಗಳ ವೀಕ್ಷಣೆ ಮಾಡಬಹುದು. ಇದರ ಆಡಿಯೊ ಇಂಜಿನ್ ಒಂದು ಮಟ್ಟಿಗೆ ಉತ್ತಮವಾಗಿಯೇ ಇದೆ. ಇಯರ್ಫೋನ್ ನೀಡಿಲ್ಲ. ವಿಡಿಯೊ ವೀಕ್ಷಣೆ ಮತ್ತು ಸಂಗೀತ ಆಲಿಸುವುದು ಈ ಫೋನಿನಲ್ಲಿ ತೃಪ್ತಿದಾಯಕವಾಗಿದೆ.

ಕ್ಯಾಮೆರಾದ ಗುಣಮಟ್ಟ ನೀಡುವ ಹಣಕ್ಕೆ ಹೋಲಿಸಿದರೆ ಒಂದು ಮಟ್ಟಿಗೆ ತೃಪ್ತಿದಾಯಕವಾಗಿದೆ ಎನ್ನಬಹುದು. ಕ್ಯಾಮೆರಾದಲ್ಲಿ ಮ್ಯಾನುವಲ್ (ಪ್ರೊ) ಮೋಡ್ ಕೂಡ ಇದೆ. ಆದರೆ ಈ ವಿಧಾನದಲ್ಲಿ ಫೋಟೊ ತೆಗೆಯುವಾಗ ಪರದೆಯಲ್ಲಿ ನೋಡುವಾಗ ಯಾವ ರೀತಿ ಕಾಣಿಸುತ್ತದೆಯೋ, ಫೋಟೊ ಆ ರೀತಿ ಬಂದಿರುವುದಿಲ್ಲ. ಕ್ಯಾಮೆರಾದ ಎಪಿಐ ತೆರೆದಿಲ್ಲ. ಆದುದರಿಂದ ಓಪನ್ ಕ್ಯಾಮೆರಾ ಹಾಕಿಕೊಂಡು ಸಂಪೂರ್ಣ ಮ್ಯಾನ್ಯುವಲ್ ನಿಯಂತ್ರಣ ಸಾಧ್ಯವಿಲ್ಲ. ಉಳಿದಂತೆ ಕ್ಯಾಮೆರಾದ ಫಲಿತಾಂಶಗಳು ತೃಪ್ತಿದಾಯಕವಾಗಿವೆ. ಉತ್ತಮ ಬೆಳಕಿನಲ್ಲಿ ಫೋಟೊಗಳು ಚೆನ್ನಾಗಿ ಮೂಡಿಬರುತ್ತವೆ. ಕಡಿಮೆ ಬೆಳಕಿನಲ್ಲಿ ಒಂದು ಮಟ್ಟಿಗೆ ಫೋಟೊ ತೆಗೆಯುತ್ತದೆ. ವಿಡಿಯೊ ಚಿತ್ರೀಕರಣ ಅಷ್ಟಕ್ಕಷ್ಟೆ.

ಈ ಫೋನಿನಲ್ಲಿ ಬೆರಳಚ್ಚು ಸ್ಕ್ಯಾನರ್ ಸವಲತ್ತು ಇದೆ. ಈ ಸವಲತ್ತು ಚೆನ್ನಾಗಿಯೇ ಕೆಲಸ ಮಾಡುತ್ತಿದೆ. ಆದರೆ ಮುಖವನ್ನು ಗುರುತು ಹಿಡಿಯುವ ಸೌಲಭ್ಯ (face recognition) ನೀಡಿಲ್ಲ. ಬ್ಯಾಟರಿ ತುಂಬ ಶಕ್ತಿಶಾಲಿಯಾಗಿದೆ.

ಕನ್ನಡದ ತೋರುವಿಕೆ ಸರಿಯಿದೆ. ಕನ್ನಡದ ಯೂಸರ್ ಇಂಟರ್ಫೇಸ್ ಕೂಡ ಇದೆ. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ತೃಪ್ತಿ ನೀಡಬಹುದಾದ ಫೋನ್ ಎನ್ನಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.